1.ಟೋಬಿ–
ರಾಜ್ ಬಿ ಶೆಟ್ಟಿ ಮುಖ್ಯ ನಾಯಕ ನಟನಾಗಿ ‘ಟೋಬಿ’ ಚಿತ್ರದಲ್ಲಿ ನಟ್ಟಿಸಿದರೆ. ಈ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಅವರೆ ಕಥೆ ಬರೆದಿದು ಬಸಿಲ್ ಆಲಚಕ್ಕಲ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. Lighter Buddha Films ಅವರ ಪ್ರೊಡಕ್ಷನಲ್ಲಿ ನಿರ್ಮಾಣವಾಗಿರುವ ಈ ಚಿತ್ರ 25.Aug.23 ತೆರೆ ಮೇಲೆ ಕಾಣಿಸಿಕೊಳ್ಳಲಿದೆ. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರೊಂದಿಗೆ ಸಂಯುಕ್ತ ಹೊರ್ನಾಡ್ ಮತ್ತು ಚೈತ್ರಾ ಆಚಾರ್ ಮುಖ್ಯ ನಾಯಕಿ ನಟಿಯರಾಗಿ ಕಾಣಿಸಿಕೊಳ್ತಿದ್ದಾರೆ.
‘ಗರುಡ ಗಮನ ವೃಷಭ ವಾಹನ’ ನಂತರ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರು ಮುಖ್ಯ ನಾಯಕನ ಪಾತ್ರದಲ್ಲಿ ಕಾಣಿಸಿಕೊಳುತ್ತಾರೆ. ಕೆಲವು ಮೂಲಗಳ ಪ್ರಕಾರ ಶೆಟ್ಟಿ ಬಾಯ್ಸ್ ಅಂದರೆ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅವರು ನಟ್ಟಿಸಿದರೆ ಎಂದು ಹೇಳಲಾಗಿದೆ. ಈಗಾಗಲೇ ‘ಕಾಂತಾರ’ ಚಿತ್ರದ ಕ್ಲೈಮಾಕ್ಸ್ ಭಾಗವನ್ನು ರಾಜ್ ಬಿ ಶೆಟ್ಟಿ ಅವರೆ ನಿರ್ದೇಶನ ಮಾಡಿದ್ದು, ಸಿನಿ ಪ್ರೀಯರಿಗೆ ಬಾಡೂಟವನೆ ಕೊಟ್ಟಾಗಿದೆ. ಈ ಚಿತ್ರದಲ್ಲಿ ಮತ್ತೆ ಈ ಮೂರು ನಾಯಕ ನಟರು ಕಾಣಿಸಿಕೊಂಡರೆ ಫ್ಯಾನ್ಸ್ ಗೆ ಎಲ್ಲಿ ಇಲ್ಲದ ಸಂತೋಷ ತುಂಬುತ್ತದೆ ಎಂದರೆ ತಪಿಲ್ಲ.
25. Aug.23 ತೆರೆ ಮೇಲೆ ಕಾಣಿಸಿಕೊಳ್ಳಲಿರುವ ಈ ಚಿತ್ರ ಏಕಕಾಲದಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರ ಪ್ರೇಕ್ಷೆಕರನ್ನು ರಂಜಿಸಲು ಸಜ್ಜಾಗಿದೆ.
2. ಘೋಸ್ಟ್ – Dr. ಶಿವರಾಜ್ ಕುಮಾರ್ ಅವರು ನಾಯಕ ನಟನಾಗಿ ಅಭಿನಯಿಸಿರುವ ‘ಘೋಸ್ಟ್’ ಚಿತ್ರ M.G ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ಪ್ರೇಕ್ಷಕರನ್ನು ರಂಜಿಸಲು ಇದೆ ದಸರಾ ಹಬ್ಬಕೆ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.
Dr. ಶಿವರಾಜ್ ಕುಮಾರ್ ಅವರ ಹುತ್ತ ಹಬ್ಬ 12.July ರಂದು ಬಿಡುಗಡೆಯಾದ ಚಿತ್ರದ ಟೀಸರ್ನಲ್ಲಿ ಶಿವಣ್ಣ ಮಾಸ್ ಟು ಮಾಸ್ ಅವತಾರದಲ್ಲಿ ಕಾಣಿಸಿಕೊಂಡರು ಇದನ್ನು ನೋಡಿದ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಹೆಚ್ಚು ಕಾತುರದಿಂದ ಕಾಯುತ್ತಿದ್ದಾರೆ.
ಟೀಸರ್ನಲ್ಲಿ ಅತಿ ಹೆಚ್ಚು ಮಾಸ್ ಮತ್ತು ಹೆಚ್ಚಿನ ಸಾಹಸ ದೃಶ್ಯಗಳಿಂದ ತುಂಬಿದು, ವೀಕ್ಷಕರನ್ನು ಆಕರ್ಷಿಸಿತು. ಟೀಸರ್ ಪ್ರೇಕ್ಷಕರಲ್ಲಿ ಚಿತ್ರದ ಮೇಲೆ ಬಾರಿ ಉತ್ಸಾಹ ಮತ್ತು ಕುತೂಹಲವನ್ನು ಹುಟ್ಟುಹಾಕಿದೆ .
ಚಿತ್ರದಲ್ಲಿ ಡಾ. ಶಿವರಾಜಕುಮಾರ್, ಅನುಪಮ್ ಖೇರ್, ಜಯರಾಮ್, ಪ್ರಶಾಂತ್ ನಾರಾಯಣ್, ಅರ್ಚನಾ ಜೋಯಿಸ್, ಸತ್ಯಪ್ರಕಾಶ್ ಮತ್ತು ದತ್ತಣ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ಸಂಕಲನ ಮಾಡಿದ್ದಾರೆ. ಈ ಚಿತ್ರವನ್ನು ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿತೇಜ ಮತ್ತು ಸಂದೇಶ್ ಎನ್ ನಿರ್ಮಿಸಿದ್ದಾರೆ.
3. ಸಪ್ತ ಸಾಗರದಾಚೆ ಎಲ್ಲೋ – ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರವು ಹೇಮಂತ್ ಎಂ ರಾವ್ ರವರ ನಿರ್ದೇಶನದ ಒಂದು ರೊಮ್ಯಾಂಟಿಕ್ ಡ್ರಾಮಾ ಸಿನಿಮಾ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಾಯಕ ನಟನಾಗಿ ಮತ್ತು ರುಕ್ಮಿಣಿ ವಸಂತ್ ಮುಖ್ಯ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ರವರು ಸಂಗೀತವನ್ನು ಸಂಯೋಜಿಸಿದ್ದು, ಅದ್ವೈತ ಗುರುಮೂರ್ತಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರವನ್ನು ಪುಷ್ಕರ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಿಸಿದ್ದಾರೆ. ಬಿಡುಗಡೆ ದಿನಾಂಕ ಸಪ್ತ ಸಾಗರ್ವಾದಾಚೆ ಎಲ್ಲೋ ಸೈಡ್ ಎ ಸೆಪ್ಟೆಂಬರ್ 1, 2023 ರಂದು ಥಿಯೇಟರ್ಗಳಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ.
2010 ರಲ್ಲಿ ‘ನಮ್ ಏರಿಯಾ ಅಲ್ಲಿ ಒಂದ್ ದಿನ’ ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಸಿನಿ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿದ ರಕ್ಷಿತ್ ಶೆಟ್ಟಿ 2014 ರಲ್ಲಿ ‘ಉಳಿದವರು ಕಂಡಂತೆ’ ಚಿತ್ರದ ಮೂಲಕ ನಿರ್ದೇಶಕರಾಗಿ ಕಾಣಿಸಿಕೊಂಡರು. ಈ ಚಲನಚಿತ್ರಕ್ಕೆ ಅವರು ಅತ್ಯುತ್ತಮ ನಿರ್ದೇಶಕರಿಗೆ ದಕ್ಷಿಣ ಫಿಲ್ಮ್ಫೇರ್ ಪ್ರಶಸ್ತಿ ಮತ್ತು ಮೊದಲ ಬಾರಿಗೆ ನಿರ್ದೇಶಕರ (Best Debut Director Award ), ಅತ್ಯುತ್ತಮ ಚಲನಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು
4. ಬಘೀರ -‘ಬಘೀರಾ’ ಚಿತ್ರವು ಒಂದು ಆಕ್ಷನ್ ಎಂಟರ್ಟೈನರ್ ಚಲನಚಿತ್ರವಾಗಿದ್ದೆ. ಸಿನಿಮಾದ ಕಥೆಯನ್ನು ನಿರ್ದೇಶಕ ಪ್ರಶಾಂತ್ ನೀಲ್ ರವರು ಬರೆದರೆ, ಡಾ ಸೂರಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಶ್ರೀ ಮುರಳಿ ಪ್ರಮುಖ ನಯಾಕನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಿಸಿದ್ದಾರೆ.
ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಅವರು ಎಂಜಿ ಶ್ರೀನಿವಾಸ್ ಅವರ ‘ಬೀರಬಲ್-‘ಫೈಂಡಿಂಗ್ ವಜ್ರಮುನಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಕಾಂತಾರ ಖ್ಯಾತಿಯ ನವೀನ್ ಬೊಂದೇಲ್ ಅವರನ್ನು ಹೊಂಬಾಳೆ ಫಿಲಂಸ್ ಬಘೀರಾ ಚಿತ್ರಕ್ಕಾಗಿ ಆಯ್ಕೆ ಮಾಡಿದೆ ಎಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಚಿತ್ರವು ಪ್ಯಾನ್ ಇಂಡಿಯಾ ಪ್ರಮಾಣದಲ್ಲಿ, ಬಿಡುಗಡೆಗೆ ಸಿದ್ಧವಾಗುತ್ತಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಒಂದೇ ಸಮಯದಲ್ಲಿ ಬಿಡುಗಡೆಯಾಗಲಿದೆ.