60 ಪ್ರಾಯದಲ್ಲಿ ನೀವು ನಾವು ಏನ್ ಮಾಡ್ತೀರಿ, ನಾವು ಇನ್ನು ಮುಂದೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನಾವು ನಿವೃತ್ತಿ ಹೊಂದಲು ಬಯಸುತ್ತೇವೆ.
ಆದರೆ ಡಾ. ಶಿವರಾಜ್ ಕುಮಾರ್ ತಮ್ಮ 60 ರ ಹರೆಯದಲ್ಲಿ ತಮ್ಮ ಸಂಪೂರ್ಣ ಪ್ರಯತ್ನವನ್ನು ನೀಡುತ, ಸಾಹಸ ಚಿತ್ರಗಳನ್ನು ಮಾಡುತ್ತಿದ್ದಾರೆ. ಇದೀಗ ಇವರ ಮುಂದಿನ ಸಿನಿಮಾ ‘ಘೋಸ್ಟ್’ ಟ್ರೈಲರ್ ಬಿಡುಗಡೆಯಾಗಿದು, ಫ್ಯಾನ್ಸ್ ಅಂತು ಫುಲ್ ಖುಷಿ ಆಗಿದ್ದಾರೆ.
ಸಿನಿಮಾ ಟ್ರೈಲರ್ ನಲ್ಲಿ ಮಾಸ್ ಗ್ಯಾಂಗ್ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡ ಶಿವರಾಜ್ ಕುಮಾರ್ ಅವರು, ತಮ್ಮ ಮಾಸ್ ಡೈಲಾಗ್ ನಿಂದಲೇ ಅಭಿಮಾನಿಗಳನ್ನು ಸೆಳೆದಿದ್ದರು.
ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಟ್ರೈಲರ್ ಬಿಡುಗಡೆಯಾಗಿದೆ. ಟ್ರೇಲರ್ನಲ್ಲಿ ಶಿವರಾಜಕುಮಾರ್ ವಿಭಿನ್ನ ಲುಕ್ಗಳನ್ನು ನೋಡಿದ್ದ ಅಭಿಮಾನಿಗಳು ಭರ್ಜರಿಯಾಗಿ ಥ್ರಿಲ್ ಮಾಡಿದೆ. ಶಿವರಾಜ್ ಕುಮಾರ್ ಅವರ ಯಂಗ್ ಲುಕ್ ಗೆ ಫ್ಯಾನ್ಸ್ ಎಲ್ಲರು ಫಿದಾ ಆಗಿದ್ದಾರೆ.
ಜೈಲರ್ ಸಿನಿಮಾದ ನಂತರ ತಮಿಳುನಾಡಿನಲ್ಲಿ ಕೂಡ ಶಿವರಾಜಕುಮಾರ್ ಹೆಚ್ಚು ಫೇಮಸ್ ಆದರು. ತೆಲುಗು ಟ್ರೈಲರ್ ಅನ್ನು ಎಸ್ ಎಸ್ ರಾಜಮೌಳಿ ಬಿಡುಗಡೆ ಮಾಡಿದರು ಮತ್ತು ಈ ಚಿತ್ರದ ತಮಿಳು ಟ್ರೈಲರ್ ಅನ್ನು ನಟ ಧನುಷ್ ಬಿಡುಗಡೆ ಮಾಡಿದರು.
‘ಯುದ್ಧ, ಮಾನವ ಲೋಕದ ಮಾಗದ ಮಾಗದ ಕರಗ …. ಇಂತಹ ಯುದ್ಧಗಳಿಂದ ಸಾಮ್ರಾಜ್ಯ ಕಟ್ಟಿದ್ದಕ್ಕಿಂತ ಆದ ಪತನಗಳೇ ಜಾಸ್ತಿ. ಸಾಮ್ರಾಜ್ಯವನ್ನ ಕಟ್ಟಿದೋನ ಇತಿಹಾಸ ಎಷ್ಟೋ ಬಾರಿ ಮರೆತಿರಬಹುದು. ಆದರೆ… ಧ್ವಂಸ ಮಾಡಿದ ನನ್ನಂತವನನ್ನ ಎಂದಿಗೂ ಮರೆತಿಲ್ಲ’. ಎಂಬ ಮಾಸ್ ಡೈಲಾಗ್ ನಿಂದ ಮೊದಲಾದ ಟ್ರೈಲರ್, ಶಿವರಾಜ ಕುಮಾರ್ ಅವರನ್ನು ಗ್ಯಾಂಗ್ ಸ್ಟಾರ್ ರೀತಿಯಲ್ಲಿ ನಮ್ಮಗೆ ತೋರಿಸುತ್ತದೆ.
ಟ್ರೇಲರ್ ಈಗಾಗಲೇ ಸಾಕಷ್ಟು ಮಾಸ್ ಡೈಲಾಗ್ಗಳಿಂದ ತುಂಬಿದು ಮತ್ತು ಶಿವರಾಜ್ಕುಮಾರ್ ಪಾತ್ರದ ಬಗ್ಗೆ ಸಾಕಷ್ಟು ಟ್ವಿಸ್ಟ್ಗಳನ್ನು ಸಹ ತೋರಿಸಿದೆ.
ಇದಕ್ಕೆ ಸಾಕ್ಷಿಯಾಗಿದೆ ಅನುಪಮ್ ಖೇರ್ ಜೊತೆ ಟ್ರೇಲರ್ ನಲ್ಲಿ ಯಂಗ್ ಲುಕ್ ನಲ್ಲಿ ಬಂಡ ಶಿವರಾಜ್ ಕುಮಾರ್ ಎಂಟ್ರಿ. ಹೌದು ಘೋಸ್ಟ್ ಟ್ರೈಲರ್ ಮಾಸ್ ಆಗಿತ್ತು, ಆದರೆ ಶಿವಣ್ಣನ ಯಂಗ್ ಲುಕ್ ನಲ್ಲಿ ನೋಡಿದ ಎಲ್ಲರೂ ಹುಚ್ಚರಾಗುವಂತೆ ಮಾಡಿದೆ. ಅವರ ಯಂಗ್ ಲುಕ್ಸ್ ಅವರ ಹಳೆಯ ಚಿತ್ರ ‘ಆನಂದ್’ ಅನ್ನು ಹೋಲುವಂತಿದೆ.
ಕಾಂತಾರ, ಮತ್ತು 777 ಚಾರ್ಲಿ ನಂತರ, ಕನ್ನಡ ಚಿತ್ರಗಳು ಏನು ಬೇಕಾದರೂ ಮಾಡಬಹುದು ಎಂದು ತೋರಿಸಲು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರವೇಶಿಸುವ ಏಕೈಕ ಭರವಸೆ ‘ಘೋಸ್ಟ್’ ಚಿತ್ರದ ಮೇಲೆ ಇದೆ.
ಈ ಚಿತ್ರವು ಈ ದಸರಾಕ್ಕೆ ಅಕ್ಟೋಬರ್ 19 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಶ್ರೀನಿ ನಿರ್ದೇಶನದಲ್ಲಿ ಶಿವರಾಜ್ ಕುಮಾರ್ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ.