ಗಣೇಶ ಚತುರ್ಥಿ ದಿನ ದೇವರ ಹತ್ತಿರ ನೀವು ಏನಂತ ಕೇಳ್ಕೊತಿರ. ದೇವರೆ ನಮಗೆ ಒಳ್ಳೆ ಬುದ್ದಿ, ವಿದ್ಯೆ, ಅರೋಗ್ಯ ಕೊಡಿ ಅಯ್ತು ಇನ್ನು ಕೇಳ್ಕೊಂಡ್ರೆ ನಮ್ಮ ಹುಡುಗರು ಒಂದು ಒಳ್ಳೆ ಹೆಂಡತಿನ ಕೊಡಪ್ಪ ಅಂತ ಕೇಳಬೇಕು.
ಆದರೆ ಬಾಗಲಕೋಟೆ ಹುಡುಗರು ಸ್ವಲ್ಪ ಭಿನ್ನ, ಇಲ್ಲಿ ಹುಡುಗರು ಯಶ್ ಅವರ 19ನೇ ಸಿನಿಮಾ ಅಪ್ಡೇಟ್ ಯಾವಾಗ ಅಂತ ಕೇಳಿದ್ದಾರೆ. ಇದು ಬರೀ ಬಾಗಲಕೋಟೆ ಹುಡುಗರಲ್ಲ, ಜಗತ್ತಿನ ಎಲ್ಲಾ ಅಭಿಮಾನಿಗಳು ಇದೇ ಪ್ರಶ್ನೆ ಕೇಳುತ್ತಿದ್ದಾರೆ.
ಗಣೇಶ ಹಬ್ಬ ಬಂತು ಇವತ್ತಾದ್ರು ಯಶ್ ಅವರ ಮುಂದಿನ ಸಿನಿಮಾ ಯಾವುದು ಅಂತ ಅಪ್ಡೇಟ್ ಕೊಡ್ತಾರೆ ಅಂತ ಕದ್ದಿದು ಸಾಕಾಯ್ತು. ಇಷ್ಟು ಮಾತ್ರ ನನ್ನ ತಂದೆಯನ್ನು ಕೇಳಿದ್ರೆ ನಾನಾ ಒಂದು ವರ್ಶದ ಗೋವಾ ಟ್ರಿಪ್ ಗೆ ಆದ್ರೂ ಗ್ರೀನ್ ಸಿಗ್ನಲ್ ಕೊಡ್ತಾಯಿದ್ರು.
ಇನೇನು KGF 2 ಸಿನಿಮಾ ಬಂದು ಎರಡು ವರ್ಷ ಆಯಿತು ಆದರು ಯಶ್, ಅವರ ಮುಂದಿನ ಸಿನಿಮಾ ಯಾವುದು, ಯಾರ ಜೊತೆ ಅಂತ ಮಾತ್ರ ಯಲ್ಲೂ ಸುಳಿವು ನೀಡುತ್ತಿಲ್ಲ. ಇಷ್ಟು ದಿನ ಕಳೆದುಹೋದ್ರು ಮುಂದಿನ ಸಿನಿಮಾ ಯಾವುದು ಅಂತ ಗೊತ್ತಿಲ್ಲದೆ ಅಭಿಮಾನಿಗಳು ಸ್ವಲ್ಪ ಬೇಸರವಾಗಿದ್ದರೆ.


KGF 1 & 2 ಅಂತಹ ಸಕ್ಸಸ್ ಸಿನಿಮಾಗಳ ನಂತರ ಯಶ್, ಇಷ್ಟು ದಿನವಾದರು ಅವರ ಸಿನಿಮಾ ಅಪ್ಡೇಟ್ ನೀಡಲಿಲ್ಲ. ಟೈರ್ 1 ನಟರು ಒಂದು ಸಿನಿಮಾ ಮಾಡುತಿದಂತೆ ಇನ್ನೊಂದು ಸಿನಿಮಾ ಅಪ್ಡೇಟ್ ಕೊಡುತ್ತಾರೆ ಆದರೆ ಯಶ್ ಮಾತ್ರ ಯಾವುದೆ ಅಪ್ಡೇಟ್ ನೀಡಲಿಲ್ಲ.
ಗಣೇಶ್ ಹಬ್ಬಕ್ಕೆ ಅಪ್ಡೇಟ್ ಕೊಡಬಹುದು ಅಂತ ನಿರೀಕ್ಷೆ ಮಾಡಿದ ಯಲ್ಲರಿಗೂ ಏನು ಫಲ ಕೊಟ್ಟಿಲ್ಲ. ಈಗ ಎಲ್ಲರೂ ದೀಪಾವಳಿ ಮತ್ತು ಹೊಸ ವರ್ಷಕ್ಕೆ ಅಪ್ಡೇಟ್ ಕೊಡ್ತಾರಾ ಎಂದು ಕಾಯುವಂತಾಗಿದೆ.
ಮಲಯಾಳಂ ನಿರ್ದೇಶಕಿ ಗೀತು ಮೋಹನ್ ಅವರೊಂದಿಗೆ ಚಿತ್ರ ಮಾಡಲು ಪ್ರಾರಂಭಿಸುತ್ತಾರೆ ಎಂದು ಕೆಲವು ವದಂತಿಗಳಿವೆ, ಅದು ಇನ್ನೂ ವದಂತಿಯಾಗಿ ಉಳಿದಿದೆ. ಇದರ ಹೊರತಾಗಿ ಯಶ್ ಅವರು ಮತ್ತೆ ಮಲಯಾಳಂ ನಿರ್ದೇಶಕಿ ಲತಾ ಮೆನನ್ ಅವರೊಂದಿಗೆ ಗ್ಯಾಂಗ್ಸ್ಟರ್ ಶೈಲಿಯ ಸಿನಿಮಾ ಮಾಡುತ್ತಾರೆ ಎಂಬ ವದಂತಿ ಇತ್ತು ಮತ್ತು ‘KBN’ ಪ್ರೊಡಕ್ಷನ್ಸ್ ಯಶ್ ಅವರೊಂದಿಗೆ ಚಿತ್ರ ಮಾಡುತ್ತದೆ ಎಂಬ ಮತ್ತೊಂದು ವದಂತಿಯು ಇನ್ನೂ ವದಂತಿಯಾಗಿ ಉಳಿದಿದೆ.
ಈಗಾಗಲೇ ಅಭಿಮಾನಿಗಳು ಯಶ್ ಅವರ ಮುಂದಿನ ಚಿತ್ರದ ಅಪ್ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ಅಂಥದೆ ಒಂದು ಅಭಿಮಾನಿಗಳ ಬಳಗ ಬಾಗಲಕೋಟೆ ಜಿಲ್ಲೆಯಲ್ಲಿ ಗಣೇಶ್ ಚತುರ್ಥಿ ದಿನ ಯಶ್ ಅವರ ಮುಂದಿನ ಸಿನಿಮಾ ಅಪ್ಡೇಟ್ ಬಗೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.
ತಮ್ಮ ನೆಚ್ಚಿನ ನಟನನ್ನು ಆದಷ್ಟು ಬೇಗನೆ ತೆರೆ ಮೇಲೆ ನೋಡಲು ವೆಶೇಷ ಪೂಜೆ ಸಲ್ಲಿಸಿ ತಮ್ಮ ಅಭಿಮಾನವನ್ನು ವ್ಯಕ್ತಿಪಡಿಸಿದ್ದಾರೆ.
ಯಶ್ 19 ಅಪ್ಡೇಟ್ ಎಂಬ ಬ್ಯಾನರ್ ಇಡಿದು ಅಭಿಮಾನಿಗಳ ದೇವರ ಮುಂದೆ ನಿಂತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಚಿತ್ರದ ಅಪ್ಡೇಟ್ಗಾಗಿ ಈ ವಿಭಿನ್ನ ಮಾರ್ಗವು ಚಿತ್ರರಂಗದ ಎಲ್ಲರ ಗಮನವನ್ನು ಸೆಳೆದಿದೆ.
ಯಶ್ ಇಷ್ಟು ಸಮಯ ತೆಗೆದುಕೊಂಡು ಇನ್ನು ಯಾವುದೇ ಸಿನಿಮಾ ಅಪ್ಡೇಟ್ ಕೊಡಲಿಲ್ಲವೆಂದರೆ, ಬಹುಷ ಯಾವುದೊ ಒಂದು ದೊಡ್ಡ ಸಿನಿಮಾದೊಂದಿಗೆ ಬರಲಿದ್ದಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.