At Benagluru’s first rage room, you can hit, break, and smash!
ಕೋಪ ಬಂದ್ರೆ ತೀರಿಸಿಕೊಳ್ಳೋಕೆ ಒಂದು ಜಾಗ ಬೇಕು ಅಂತ ಯಾರಾದ್ರೂ ಅನ್ಕೋತಿದ್ರೆ ಅದಕ್ಕೂ ಒಂದು ಶಾಪ್ ಬೆಂಗಳೂರಲ್ಲಿ ಬಂದಿದೆ.
ಹೌದು, ದುಡ್ಡು ಕೊಟ್ಟು ಈ ಸ್ಥಳದಲ್ಲಿ ನೀವು ಏನಾದ್ರು ವಸ್ತುವನ್ನು ಒಡೆದು ಹಾಕಬಹುದು. ಬೆಂಗಳೂರಿನಲ್ಲಿ ಶುರುವಾರಿಗೆ ಹೊಸದೊಂದು ರೇಜ್ ರೂಮ್ (ಕೋಪದ ಕೊಠಡಿ)
ಐಐಟಿ ಮದ್ರಾಸ್ ನಲ್ಲಿ ಓದಿದ 23 ವರ್ಷದ ಅನನ್ಯ ಶೆಟ್ಟಿ ಅನ್ನುವವರು ಇದನ್ನು ಪ್ರಾರಂಭ್ಜಿಸಿದ್ದಾರೆ. ನಗರದ ಬಸವನಗುಡಿಯಲ್ಲಿ ಈ ರೇಜ್ ರೂಮ್ ಇದೆ.
ಜನರು ಕೋಪದಲ್ಲಿ ಮೊಬೈಲ್ , ಟಿವಿ ಒಡೆಯೋದನ್ನು ನಾವೆಲ್ಲ ನೋಡೇ ಇರ್ತೀವಿ. ಆದರೆ ಕೋಪ ಕಡಿಮೆ ಆದ ನಂತರ ಅಯ್ಯೋ ಎಂತ ಕೆಲಸ ಆಯ್ತಲ್ಲ ಅಂತ ಅಂದುಕೊಂಡಿರುತ್ತಾರೆ. ಹೀಗೆ ನಮ್ಮ ಕ್ಷಣ ಕಾಲದ ಕೋಪವನ್ನು ತೀರಿಸಿಕೊಳ್ಳಲು ವಸ್ತುಗಳನ್ನು ಒಡೆಯೋದು ಎಲ್ಲೋ ಒಂದು ಕಡೆ ನೆರವಾಗುತ್ತದೆ ಎನ್ನುವ ಆಲೋಚನೆ ಇಟ್ಟುಕೊಂಡೆ ಇವರು ಈ ಶಾಪ್ ಅನ್ನು ತೆರೆದಿದ್ದಾರೆ.
ಇಲ್ಲಿ ನೀವು ಗಾಜು, ಟಿವಿ, ಕಂಪ್ಯೂಟರ್, ವಾಷಿಂಗ್ ಮಷಿನ್ ಹೀಗೆ ನಾನಾ ವಸ್ತುಗಳನ್ನು ಒಡೆದು ನಿಮ್ಮ ಮನಸ್ಸಿನಲ್ಲಿ ಅಡಗಿರುವ ಕೋಪ, ಹತಾಷೆಯಂತಹ ಭಾವನೆಯನ್ನು ಹೊರಗೆ ಹಾಕಬಹುದು.
‘ಅಮೆರಿಕ , ಲಂಡನ್ ನಂತಹ ದೇಶಗಳಲ್ಲಿ ಈ ರೀತಿಯ ರೇಜ್ ರೂಮ್ ಗಳಿಗೆ ಸಾಕಷ್ಟು ಬೇಡಿಕೆ ಇದೆ. ಇದು ನಮ್ಮ ದೇಶದಲ್ಲಿ ಇಲ್ಲವಲ್ಲ ಎನ್ನುವ ಆಲೋಚನೆಯೊಂದಿಗೆ ಬೆಂಗಳೂರಿನಂತಹ ಮೆಟ್ರೋಪಾಲಿಟನ್ ನಗರದಲ್ಲಿ ರೇಜ್ ರೂಮ್ ಶುರು ಮಾಡಿದೆ’ ಎನ್ನುತ್ತಾರೆ ಅನನ್ಯ.
ಫೆಬ್ರವರಿ 4 ರಂದು ಈ ರೇಜ್ ರೂಮ್ ಪ್ರಾರಂಭ ಪ್ರಾರಂಗೊಂಡಿದ್ದು, ಶುರುವಾರ ಎರಡೇ ದಿನಗಳಲ್ಲಿ ಎಲ್ಲ ಸ್ಲಾಟ್ ಗಳು ಬುಕ್ ಆಗಿದ್ದವು.
ಹಡಗುಗಳು, ಪಾಲಿಸ್ಟೈರೀನ್ ಶೀಟ್ಗಳು, ಕುರ್ಚಿ, ಟೇಬಲ್, ಮರದ ವಸ್ತುಗಳು, ಲೋಹದ ರಾಡ್ಗಳು, ಗಾಜಿನ ವಸ್ತುಗಳು, ಪ್ಲಾಸ್ಟಿಕ್ ಕ್ಯಾನ್ಗಳು, ಟ್ಯೂಬ್ ಲೈಟ್ಗಳು ಮತ್ತು ಟಿವಿ ಸೆಟ್ಗಳು, ರೆಫ್ರಿಜರೇಟರ್ಗಳು ಮತ್ತು ಮೈಕ್ರೋವೇವ್ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ಒಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಕೇವಲ 18 ವರ್ಷಕ್ಕಿಂತ ಮೇಲ್ಪಟ್ಟ ಜನರು ಮಾತ್ರ ಈ ರೇಜ್ ರೂಮ್ ಅನ್ನು ಬಳಸಬಹುದಾಗಿದೆ.
ಈ ರೇಜ್ ರೂಮ್ ಪರಿಕಲ್ಪನೆ ಮೊದಲು ಶುರುವಾಗಿದ್ದು ೨೦೦೮ರಲ್ಲಿ ಜಪಾನ್ ದೇಶದಲ್ಲಿ. ಅಲ್ಲಿ ಆಗ ಆರ್ಥಿಕ ಹಿಂಜರಿತ ಪರಿಣಾಮವಾಗಿ ಸಾಕಷ್ಟು ಜನ ತಮ್ಮ ಕೆಲಸ ಕಳೆದೊಂಡರು. ಇದರಿಂದ ಜನರಲ್ಲಿ ಒತ್ತಡ ಮತ್ತು ಹತಾಶೆ ಹೆಚ್ಚಾಯಿತು. ಅದಕ್ಕೆ ಉತ್ತರವಾಗಿ ಹುಟ್ಟಿಕೊಂಡಿದ್ದೇ ಈ ರೇಜ್ ರೂಮ್. ಜಪಾನ್ನಲ್ಲಿ ಯಶಸ್ಸನ್ನು ಸಾಧಿಸಿದ ನಂತರ, ಈ ಪರಿಕಲ್ಪನೆಯು ಕ್ರಮೇಣ ಪ್ರಪಂಚದಾದ್ಯಂತ ಹರಡಿತು.
ರೇಜ್ ರೂಮ್ ಬೆಲೆ
99ಕ್ಕೆ ಟ್ರಯಲ್ ಪ್ಯಾಕ್ ಒದಗಿಸುತ್ತಿದ್ದು, ಅದರಲ್ಲಿ ಕೇವಲ 5 ನಿಮಿಷ ಕಾಲ ನಿಮ್ಮ ಕೋಪ ತೀರಿಸಿಕೊಳ್ಳಲು ಅವಕಾಶ ಸಿಗುತ್ತದೆ. ಅದರಲ್ಲಿ ನೀವು ಕೇವಲ 2 ಥರ್ಮಾಕೋಲ್ ಶೀಟ್ಗಳು ಮತ್ತು 3 ಲೋಹದ ಹಾಳೆಗಳನ್ನು ಒಡೆಯಬಹುದು.