social mediaದಲ್ಲಿ ಯಾರ profile ನೋಡಿದರು AI ಅಲ್ಲಿ ರೂಪಿಸಿದ ಸುಂದರ ಫೋಟೋಗಳು ಕಾಣಸಿಗುತ್ತವೆ.
80-90s Sandalwood actresses AI photos trending on social media!
social mediaದಲ್ಲಿ ಯಾರ profile ನೋಡಿದರು AI ಅಲ್ಲಿ ರೂಪಿಸಿದ ಸುಂದರ ಫೋಟೋಗಳು ಕಾಣಸಿಗುತ್ತವೆ. ಹೀಗೆ ಸಾಕಷ್ಟು ಟ್ರೆಂಡ್ ಆದ AI ಫೋಟೋಗಳಲ್ಲಿ ನಮ್ಮ ಕನ್ನಡ ಚಿತ್ರರಂಗದ 80 – 90ರ ದಶಕದ ಸ್ಟಾರ್ ನಟಿಯರು ಹೆಂಗೆ ಕಾಣ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ
ಮಿನುಗು ತಾರೆ ಕಲ್ಪನಾ:
ಮೊದಲಿಗೆ ಎಲ್ಲರ ಗಮನ ಸೆಳೆಯುವ ಚಿತ್ರ ಬ್ರಿಟಿಷ್ ರಾಣಿ ತರ ಕಾಣುವ ನಮ್ಮ ಮಿನುಗು ತಾರೆ ಕಲ್ಪನಾ ಅವರ ಫೋಟೋ. ನೋಡಿದ ತಕ್ಷಣ ವಾವ್ ಎನ್ನುವಂತೆ ಕಾಣುತ್ತಾರೆ. ಈ AI ಸೃಷ್ಟಿಸಿರುವ ಫೋಟೋ ಅಲ್ಲಿ ಕಲ್ಪನಾ ಅವರು ಸರಳ ಸಹಜ ಸುಂದರಿಯಂತೆ ಕಂಗೊಳಿಸುತ್ತಾರೆ. ಪಂತುಲುರವರ ‘ಸಾಕುಮಗಳು’ ಚಿತ್ರದಿಂದ ಆರಂಭವಾದ ಕಲ್ಪನಾ ಅವರ ಸಿನಿಮಾ ಪ್ರಯಾಣ ಶಿವರಾಮ ಕಾರಂತರು ನಿರ್ದೇಶನದ ಮಲೆಯಮಕ್ಕಳು ರವರೆಗೆ ಒಟ್ಟು 78 ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.
ನಟಿ ಸೌಂದರ್ಯ:
ಹಳ್ಳಿ ಹುಡುಗಿಯ ಲುಕ್ ನಲ್ಲಿ ಮರುಜೀವ ಪಡೆದುಕೊಂಡಂತಿದೆ ನಟಿ ಸೌಂದರ್ಯ ಅವರು ಫೋಟೋ. ತಮ್ಮ ಸ್ನಿಗ್ಧ ಸೌಂದರ್ಯ ಹಾಗು ಪ್ರಬುದ್ಧ ನಟನೆಯಿಂದ ಸೌಂದರ್ಯ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಛಾಪು ಮೂಡಿಸಿದ್ದರು.
ನಟಿ ತಾರಾ ಅವರ ಎಐ ಲುಕ್ ಹೀಗಿದೆ. ಸುಂದರವಾದ ಚಿನ್ನದ ಆಭರಣಗಳು, ಸರಳ ಮೇಕಪ್ ಹಾಗೂ ಕೆಂಪು ಬಣ್ಣದ ಬಿಂದಿಯಲ್ಲಿ ಅವರು ಲುಕ್ ನ್ಯಾಚುರಲ್ ಆಗಿ ಮೂಡಿಬಂದಿದೆ. ಕನ್ನಡದ ಪ್ರತಿಭಾವಂತ ನಟಿಯಾರಲ್ಲಿ ಒಬ್ಬರಾದ ತಾರಾ ಅವರು ಕನ್ನಡ ಸಿನಿಮಾಗಳು ಅಲ್ಲದೆ ತೆಲುಗು, ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ
ಎಐ ಫೋಟೋದಲ್ಲಿಯೂ ನಟಿ ಶ್ರುತಿ ಅವರ ಬಿಂದಿ ಹೈಲೈಟ್ ಆಗಿದ್ದು, ಝುಮುಕಿ, ಮೂಗುತಿ ಕೂಡಾ ಅವರ ಮೊಗದಲ್ಲಿ ಸ್ಟೈಲಾಗಿ ಕಾಣುತ್ತಿದೆ. 1990ರ ದಶಕದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದ ಶ್ರುತಿ ಅವರು ಕಣ್ಣೀರಿಂದಲೇ ಪ್ರೇಕ್ಷಕರ ಮನ ಗೆದ್ದಿದ್ದರು ಸುಮಾರು 120 ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ನೆಲೆ ನಿಂತಿದ್ದಾರೆ.
ನಟಿ ಸುಧಾರಾಣಿ ಅವರ ಮುಗುಳು ನಗೆ ಎಲ್ಲರಿಗು ಇಷ್ಟ. ಅವರ ಎಐ ಫೋಟೋದಲ್ಲಿಯೂಅದು ಹೈಲೈಟ್ ಆಗಿದೆ. ಕಪ್ಪು ಬಣ್ಣದ ಬಿಂದಿ ಮತ್ತು ಅವರ ಕಿವಿಯೋಲೆ ಸಖತ್ ಸ್ಟೈಲಿಶ್ ಆಗಿ ಕಾಣುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸುಧಾರಾಣಿ ಅವರು ಆನಂದ ಸಿನಿಮಾದ ಮೂಲಕ ನಾಯಕಿಯಾಗಿ ದೊಡ್ಡ ಪರೆದೆಯ ಮೇಲೆ ಕಾಣಿಸಿಕೊಂಡರು. ಹಿರಿತೆರೆ, ಕಿರಿತೆರೆಯಲ್ಲೂ ಅವರು ಛಾಪು ಮೂಡಿಸಿದ್ದಾರೆ.
ತುಂಬಾ ಸಿಂಪಲ್ ಆಗಿ ಕಾಣಿಸಿಕೊಳ್ಳುವ ನಟಿ ಪ್ರೇಮ ಅವರು ತಮ್ಮ ಎಐ ಫೋಟೋದಲ್ಲಿಯೂ ಸರಳ ಮೇಕಪ್ ಹಾಗು ಶಾರ್ಟ್ ಹೇರ್ ಸ್ಟೈಲ್ ನಲ್ಲಿ ಸಿಂಪಲ್ ಮತ್ತು ಕ್ಯೂಟ್ ಆಗಿ ಕಾಣಿಸುತ್ತಾರೆ. ಶಿವರಾಜ್ ಕುಮಾರ್ ಅವರ ಸವ್ಯಸಾಚಿ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರ ಆಟ ಹುಡುಗಾಟ ಸಿನಿಮಾದಿಂದ ತಮ್ಮ ಬೆಳ್ಳಿತೆರೆಯ ಪ್ರಯಾಣ ಆರಂಭಿಸಿದರು.