ಕಳೆದ ವರ್ಷ ‘ವೇದ’ ಚಿತ್ರದೊಂದಿಗೆ ನಾಯಕ ನಟನಾಗಿ ಕಾಣಿಸಿಕೊಂಡ ಶಿವಣ್ಣ. ತಮ್ಮ ಜನ್ಮದಿನದಂದು ಫ್ಯಾನ್ಸ್ಗೆ ಬಾರಿ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರ, ಅವರು ಮುಂದೆ ನಟಿಸಲಿರುವ ಸಿನಿಮಾಗಳ ಪಟ್ಟಿಯನ್ನು ಕೇಳಿದ ಅಭಿಮಾನಿಗಳು ನಿಜಕ್ಕೂ ಖುಷಿಯಾಗಿದ್ದಾರೆ. ಈ ವರ್ಷ ‘ಘೋಸ್ಟ್’ ಮತ್ತು ‘ಕರಟಕ ದಮನಕ’ ಸಿನಿಮಾಗಳು ರಿಲೀಸ್ ಆಗಲಿದೆ.
ಈಗಾಗಲೇ ‘ಘೋಸ್ಟ್’ ಚಿತ್ರದ ಶೂಟಿಂಗ್ ಮುಗಿದಿದೆ, ‘ಕರಟಕ ದಮನಕ’ ಚಿತ್ರದ ಕೆಲವು ಮುಖ್ಯ ಭಾಗಗಳ ಚಿತ್ರೀಕರಣ ಬಾಕಿ ಉಳಿದಿದ್ದು, ಮುಂದಿನ ಕೆಲವು ಶೆಡ್ಯೂಲ್ಗಳಲ್ಲಿ ಶೀಘ್ರದಲ್ಲೇ ಅದು ಪೂರ್ಣಗೊಳ್ಳಲಿದೆ ಎಂದು ಶಿವಣ್ಣ ಹೇಳಿದ್ದಾರೆ. ಇದರ ನಂತರ ಅವರು ‘ಬೈರತಿ ರಣಗಲ್’. ‘೪೫’ ಮತ್ತು ‘ಇನ್ಸ್ಪೆಕ್ಟರ್ ವಿಕ್ರಂ ರಿಟರ್ನ್ಸ್- ೧” ಚಿತ್ರಗಳ ಚಿತ್ರೀಕರಣ ಆರಂಭಿಸಲಾಗುವುದು ಎಂದು ಶಿವಣ್ಣ ಹೇಳಿದ್ದಾರೆ.
ಸದ್ಯಕ್ಕೆ ಡಾ. ಶಿವರಾಜ್ ಕುಮಾರ್ ರವರು ಕನ್ನಡದ ಅತ್ಯಂತ ಬಿಜಿ ನಟ ಎಂದರೆ ತಪ್ಪಿಲ್ಲ. ಇದು ಬೇರಿ ನಮ್ಮ ಕನ್ನಡ ಚಿತ್ರ ರಂಗ ಸ್ಯಾಂಡಲ್ವುಡ್ ಮಾತ್ರವಲ್ಲದೆ ಪರ ಭಾಷಾ ಚಿತ್ರಗಳ್ಲಲು ಬಹು ಮುಖ್ಯ ಮತ್ತು ಕ್ಯಾಮೆಯೋ ಪಾತ್ರಗಳಲ್ಲಿ ಮಿಂಚುತಿದ್ದರೆ. ಅವರ ಜನ್ಮದಿನದಂದು ಖುದ್ದಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಣ್ಣ, ತಾವು ಪರ ಭಾಷೆ ಸಿನಿಮಾಗಳಲ್ಲಿ ನಟಿಸುತ್ತಿದ್ದರೆಂದು ಹೇಳಿಕೊಂಡಿದ್ದಾರೆ.
‘ಜೈಲರ್’ ಮತ್ತು ‘ಕ್ಯಾಪ್ಟನ್ ಮಿಲ್ಲರ್’ ಚಿತ್ರಗಳಲ್ಲಿ ನಿರ್ಣಾಯಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆಂದು ಶಿವಣ್ಣ ಹೇಳಿದ್ದಾರೆ. ಈಗಾಗಲೇ ಈ ಎರಡು ಚಿತ್ರಗಳ ಅಪ್ಡೇಟ್ಸ್ ಬಿಡುಗಡೆಯಾಗಿದ್ದು ಡಾ. ಶಿವರಾಜ್ ಕುಮಾರ್ ರವರು ಒಂದು ಒಚಾ ಹೊಸ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಅವರು ಮಲಯಾಳಂ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರು ಕಥೆಯನ್ನು ಹೇಳಿದ್ದು ಈ ಸಿನಿಮಾ ಮಾಡುವುದು ಬಹುತೇಕ ಖಚಿತವೆಂದು ಕೆಲವು ಮೂಲಗಳಿಂದ ಕೇಳಿಬರುತಿದೆ.


‘ಜೈಲರ್’ ಚಿತ್ರಕ್ಕೆ ಒಪ್ಪಿಗೆ ಸೂಚಿಸಲು ಕಾರಣ ಕೊಟ್ಟ ಅವರು, ಈ ಸಿನಿಮಾವನ್ನು ಒಪ್ಪಿಕೊಳ್ಳುಲು ‘ಸೂಪರ್ ಸ್ಟಾರ್ ರಜನಿಕಾಂತ್’ ಮತ್ತು ಸಿನಿಮಾದ ನಿರ್ದೇಶಕ ನೆಲ್ಸನ್ ಇವರಿಬ್ಬರು ಕಾರಣವೆಂದು ಹೇಳಿದ್ದಾರೆ. ಶಿವಣ್ಣ ರವರ ‘ಬೈರಾಗಿ’ ಸಿನಿಮಾದ ಶೂಟಿಂಗ್ ನಡಿಯುವಾಗ ನೆಲ್ಸನ್ ಅಲ್ಲಿಗೆ ಭೇಟಿ ನೀಡಿ ಶಿವಣ್ಣನ್ನ ಜೊತೆ ಸಿನಿಮಾ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿ, ಅವರನ್ನು ‘ಜೈಲರ್’ ಸಿನಿಮಾದಲ್ಲಿ ನಟಿಸಲೇಬೇಕು ಅಂತ ಶಿವಣ್ಣ ಅವರನ್ನು ಒಪ್ಪಿಸಿದರಂತೆ. ಇದೆ ವಿಷಯ ರಜನಿಕಾಂತ್ ಅವರ ಹತ್ತಿರ ಹೇಳಿದಾಗ ಹರ್ಷ ವ್ಯಕ್ತಪಡಿಸದ್ದರು ಎಂದು ಹೇಳಿದ್ದಾರೆ.
ಶಿವಣ್ಣ ರಜನಿಕಾಂತ್ ಅವರ ಜೊತೆ ಸಿನಿಮಾ ಮಾಡುವುದು ಅವರಿಗೆ ಖುಷಿ ವಿಷಯವೆಂದು, ಸ್ವತಃ ಅವರೇ ತಮಿಳು ಭಾಷೆಯಲ್ಲಿ ವಾಯ್ಸ್ ಡಬ್ ಮಾಡುತ್ತಾರೆಂದು ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ಅವರು ಕ್ಯಾಮೆಯೋ ಪಾತ್ರದಲ್ಲಿ ನಟ್ಟಿಸುತ್ತಿದರು ಅವರ ಪಾತ್ರ ತುಂಬ ಹಚ್ಚುಕಟ್ಟಾಗಿ ಮೂಡಿಬಂದಿದೆ ಎಂದು ಶಿವಣ್ಣ ಹಂಚಿಕೊಂಡರು. ಚಿಕ್ಕ ವಯಸ್ಸಿನಿಂದ ಇಬ್ಬರ ಕುಟುಂಬಗಳ ನಡುವೆ ಒಂದು ಸಂಬಂಧವಿದೆ ರಜನಿಕಾಂತ್ ಅವರನ್ನು ನಾವು ಅಂಕಲ್ ಅಂತ ಕರೆಯುತಿದ್ವಿ ಎಂದು ಹೇಳಿದ್ದಾರೆ.
‘ಜೈಲರ್’ ಸಿನಿಮಾ ಜೊತೆಗೆ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ನಾಯಕ ಧನುಷ್ ಅಣ್ಣನಾಗಿ ಒಂದು ನಿರ್ಣಾಯಕ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದರೆ. ಈ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ತಿಗೊಂಡಿದ್ದು ಬಿಡುಗಡೆಗೆ ಸಿದ್ಧವಾಗುತ್ತಿದೆ.
ಪರ ಬಾಷೆಗಳಿಂದ ಅನೇಕ ಅವಕಾಶಗಳು ಬರುತ್ತಿದ್ದರು ಅವರು ಕನ್ನಡ ಸಿನಿಮಾಗಳಲ್ಲಿ ಬಿಜಿಯಾಗಿರುವ ಕಾರಣದಿಂದಾಗಿ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳಲು ಆಗುತಿಲ್ಲವೆಂದು ಶಿವಣ್ಣ ಹಂಚಿಕೊಂಡಿದ್ದಾರೆ. ಇನ್ನುಮುಂದೆ ವರ್ಷಕ್ಕೆ ಎರಡರಿಂದ ಮೂರೂ ಸಿನಿಮಾಗಳು ತೆರೆ ಮೇಲೆ ಎಲರನ್ನು ರಂಜಿಸಲು ಬರುತದ್ದೆ.