‘ಸಪ್ತ ಸಾಗರದಾಚೆ ಎಲ್ಲೋ – 1’ ಒಂದು ಔಟ್ ಅಂಡ್ ಔಟ್ ಲವ್ ಮೇಲೋ ಡ್ರಾಮಾ ಎಂದರೆ ತಪಿಲ್ಲ. ಇಂದು ಬಿಡುಗಡೆಯಾದ ಈ ಸಿನಿಮಾ ಏಕ ಕಾಲದಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರ ತೆರೆ ಮೇಲೆ ಕಾಣಿಸುತ್ತಿದೆ. ಹೇಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಅವರ ಕಾಂಬಿನೇಷನಲ್ಲಿ ಬಂಡ ಈ ಚಿತ್ರ ಪ್ರೇಕ್ಷಕರಲ್ಲಿ ಸಾಕಷ್ಟು ಸಂಚಲನ ಮೂಡಿಸದೆ.
ಮಾಧ್ಯಮಗಳೊಂದಿಗೆ ಮಾತಾಡಿದ್ದ ರಕ್ಷಿತ್ ಶೆಟ್ಟಿ ಅವರು ಈಗಾಗಲೇ ನಮ್ಮ ಬ್ಯಾನರ್ ಅಲ್ಲಿ ‘777 ಚಾರ್ಲಿ’ ಸಿನಿಮಾ ನೋಡಿ ಎಲ್ಲರಿಗೂ ನಾವು ಎಂಥ ಸಿನಿಮಾ ಮಾಡುತೇವೆ ಎಂದು ಗೊತ್ತಿದೆ. ಸಿನಿಮಾವನ್ನು ಈಗ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆ ಮಾಡಿ ಬೇರೆ ಭಾಷೆಯಲ್ಲಿ ಪ್ರತಿಕ್ರಿಯನ್ನು ನೋಡಿ ನಂತರ ದಿನಗಳಲ್ಲಿ ಆಯಾ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುತ್ತೇವೆ. ಅಂತಹ ಶಕ್ತಿ ಈ ಸಿನಿಮಾ ಕಥೆಗೆ ಇದೆ ಮತ್ತು ಸಿನಿಮಾ ತುಂಬ ಅಚ್ಚುಕಟ್ಟಾಗಿ ಬಂದಿದೆ ಎಂದು ಹೇಳಿಕೊಂಡಿದ್ದಾರೆ
ರಕ್ಷಿತ್ ಶೆಟ್ಟಿ ಈ ಹಿಂದೆ ಇದೇ ನಿರ್ದೇಶಕರ ಜೊತೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಮಾಡಿದ್ದರು. ಮತ್ತೆ ಈಗ ಈ ಸಿನಿಮಾ ಅವರ ಜೋತೆ ಮಾಡಲು ಹೇಮಂತ್ ರಾವ್ ಅವರ ಮೇಲೆ ಇರುವ ನಂಬಿಕೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ‘ಮನು’ ಎಂಬ ಪಾತ್ರದಲ್ಲಿ ರುಕ್ಮಿಣಿ ವಸಂತ್ ಅವರು ‘ಪ್ರಿಯ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೇಮಂತ್ ರಾವ್ ಈ ಇಬ್ಬರು ನಡುವೆ ಆಗುವ ಪ್ರೇಮ್ ಕಹಾನಿಯನ್ನು ಅದ್ಭುತವಾಗಿ ತೆರೆಯ ಮೇಲೆ ತಂದಿದ್ದಾರೆ ಎಂದು ಸಿನಿಮಾ ನೋಡಿದ್ದ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.


ಪ್ರೇಕ್ಷರಿಗೆ ಎಲ್ಲಿಯೂ ಬೇಸರವಾಗದಂತೆ ಹೇಮಂತ್ ರಾವ್ ಸಿನಿಮಾದಲ್ಲಿ ಎರಡೂ ಪಾತ್ರಗಳನ್ನು ಬ್ಯಾಲೆನ್ಸ್ ಮಾಡಿದ್ದಾರೆ. ಹೇಮಂತ್ ರಾವ್ ಎರಡು ಪಾತ್ರಗಳ ಮೂಲಕ ಪ್ರೀತಿಯಲ್ಲಿ ಇರಬೇಕಾದ ಎಲ್ಲಾ ಭಾವನೆಗಳನ್ನು ಪರಿಪೂರ್ಣವಾಗಿ ಚಿತ್ರಿಸಿದ್ದಾರೆ. ಮನು ಮತ್ತು ಪ್ರಿಯ ಪಾತ್ರಗಳ ನಡುವಿನ ಎಲ್ಲ ಸಿನಿಮಾಗಳ ರೀತಿಯಲ್ಲಿ ಇಂಟೆನ್ಸ್ ರೋಮ್ಯಾನ್ಸ್ ಆಗಲಿ, ಬಣ್ಣ ಬಣ್ಣಗಳ ಮಾತುಗಳು ಇಲ್ಲದೆ, ಒಂದು ಸರಳವಾದ ಆಳವಾದ ಕಥೆಯನ್ನು ಹೇಮಂತ್ ರಾವ್ ನಮ್ಮಗೆ ಕೊಟ್ಟಿದ್ದಾರೆ.
ಅದೇ ರೀತಿ ಈ ಸಿನಿಮಾದಲ್ಲಿ ಕೆಲವು ಸಂಭಾಷಣೆಯಲ್ಲಿ ಬಂದ ಈ ಡೈಲಾಗ್ಸ್ “ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗೋಕೆ ಹುಟ್ಟಿದ್ದೀವಿ” – “ಕೆಲವು ತಪ್ಪುಗಳಿಗೆ ಶಿಕ್ಷೆ ಇದೆ, ಆದ್ರೆ ಕ್ಷಮೆ ಇಲ್ಲ’ ಮತ್ತು “ಹೆಣ್ಣಿನ ಕಣ್ಣಲ್ಲೇ ನಿಜವಾದ ಪ್ರೀತಿ ಕಾಣಿಸೋದು’ ಪ್ರೇಕ್ಷಕರ ಮನದಲ್ಲಿ ಸದಾಕಾಲ ನಿಲ್ಲುತ್ತದೆ ಎಂಬುವಲ್ಲಿ ಸಂಶಯವಿಲ್ಲ. ಇಂತಹ ಸಂಭಾಷಣೆಗಳು ಸಿನಿಮಾದ ಕಥೆಗೆ ಸಾಕಷ್ಟು ಗೌರವ ಮತ್ತು ಮೆಚ್ಚುಗೆಯನ್ನು ತಂದಿದೆ.
ಸಿನಿಮಾ ನೋಡಿದ ಪ್ರೇಕ್ಷಕರು ಕನ್ನಡಲ್ಲಿ ಈ ಮಧ್ಯಕಾಲದಲ್ಲಿ ಇಂಥ ಒಂದು ಡಿಸೆಂಟ್ ಲವ್ ಸ್ಟೋರಿ ಸಿನಿಮಾ ನೋಡಲ್ಲಿಲವೆಂದು ಹೇಳಿದ್ದಾರೆ. ರಕ್ಷಿತ್ ಶೆಟ್ಟಿ ಅವರ ನಟನೆಗೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.


ಸಿನಿಮಾದ ಆರಂಭದಿಂದಲೂ ಹೇಮಂತ್ ರಾವ್ ಎಲ್ಲ ಪತ್ರಗಳನ್ನು ಸುಂದರವಾಗಿ ತೋರಿಸಿದ್ದಾರೆ. ಸಿನಿಮಾ ಅಂತ್ಯಕ್ಕೆ ಬರುವ ಸಮಯದಲ್ಲಿ ಚಿತ್ರದ ಎರಡನೇ ಭಾಗದ ಸುಳಿವನ್ನು ಬಿಟ್ಟು ಪ್ರೇಕ್ಷೆಕರಲ್ಲಿ ಒಂದು ಕುತೂಹಲವನ್ನು ಹೆಬ್ಬಿಸಿದ್ದರೆ.
ರಕ್ಷಿತ್ ಶೆಟ್ಟಿ ಅವರು ಈ ಇಂದೇ ಲವ್ ಸ್ಟೋರಿಗಳಲ್ಲಿ ನಟಿಸಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅವರು ವಿಭಿನ್ನ ವೇಷದಲ್ಲಿ ಕನ್ನಿಸಿಕೊಂಡಿದ್ದಾರೆ ಎಂದು ಪ್ರೇಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ರಕ್ಷಿತ್ ಹೆಚ್ಚಿಗೆ ಮಾತನಾಡದೆ ಅವರ ಭಾವನೆಗಳೊಂದಿಗೆ ಮನು ಪಾತ್ರವನ್ನು ನಿಭಾಯಿಸಿದ್ದಾರೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.
ಅಕ್ಟೋಬರ್ 27ಎಂದಿಗೆ ಬರುತ್ತದೆ ‘ಮನು’ ಮುಂದೆ ಏನು ಮಾಡುತಾನೇ?, ಪ್ರಿಯ ಬೇರೆ ಮದುವೆ ಯಾದ ನಂತರ ಮನು ಜೀವನದಲ್ಲಿ ಮುಂದೆ ಯಾರು ಬರಲಿದ್ದಾರೆ?, ಎಂಬುವ ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರೇಕ್ಷಕರು ಕಾಯುತ್ತಿದ್ದಾರೆ.