

ಭಾರತೀಯ ಸಿನಿಮಾ ಇತಿಹಾಸದಲ್ಲಿ ಹಾಡುಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ. ಪ್ರೇಕ್ಷಕರಾಗಿ ನಾವು ಇಲ್ಲಿಯವರೆಗೂ ಭಾರತೀಯ ಸಿನಿ ರಂಗದಲ್ಲಿ 100 ಮಿಲಿಯನ್ಗಿಂತಲೂ ಹೆಚ್ಚು ಹಾಡುಗಳನ್ನು ನೋಡಿದ್ದೇವೆ ಅಥವಾ ಕೇಳಿದ್ದೇವೆ.
ಅದರಲ್ಲಿ ಶಾಸ್ತ್ರೀಯ, ಆಧುನಿಕ, ಜಾಝ್, ಸೂಫಿ, ಅಥವಾ ಕೇವಲ ಹಿನ್ನೆಲೆ ಸಂಗೀತವಾಗಿರಲಿ. ಭಾರತೀಯ ಸಿನಿಮಾ ಇತಿಹಾಸದಲ್ಲಿ ಸಿನಿಮಾಗಳನ್ನು ನಿರ್ಮಿಸುವಲ್ಲಿ ಹಾಡುಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ.
ಒಂದು ಹಾಡು ನಿಮಗೆ ಸಂಪೂರ್ಣ ಕಥೆಯನ್ನು ಸ್ವತಃ ಹೇಳಬಹುದು. ಆದರೆ ನಾವು ಹಾಲಿವುಡ್ ಚಲನಚಿತ್ರಗಳನ್ನು ನೋಡಿದಾಗ ಭಾರತದಲ್ಲಿ ಹಾಡುಗಳೊಂದಿಗೆ ಚಲನಚಿತ್ರ ನಿರ್ಮಾಣದ ಶೈಲಿಯು ಬಹಳ ವಿಭಿನ್ನವಾಗಿದೆ.
ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗವನ್ನು ನೋಡಿದಾಗ ನಮ್ಮ ಹೃದಯಕ್ಕೆ ತುಂಬ ಹತ್ತಿರವಾದ ಮೆಲೋಡಿ ಹಾಡುಗಳಿವೆ.
ಯೂಟ್ಯೂಬ್ನಲ್ಲಿ ಹೆಚ್ಚಾಗಿ ನೋಡಿದ ಮತ್ತು ಸೂಪರ್ ಹಿಟ್ ಆಗಿರುವ ಕೆಲವು ಕನ್ನಡ ಹಾಡುಗಳು ಇಲ್ಲಿವೆ ನೋಡಿ.
- ಚಲನಚಿತ್ರ – ಪೊಗರು
ಹಾಡು – ಕರಬ್ಬು
ಸಂಗೀತ – ಚಂದನ್ ಶೆಟ್ಟಿ
ಗಾಯಕ – ಚಂದನ್ ಶೆಟ್ಟಿ
2. ಚಲನಚಿತ್ರ – ರಾಜಕುಮಾರ
ಹಾಡು – ಬೊಂಬೆ ಹೇಳುತೈತೆ
ಸಂಗೀತ – ವಿ ಹರಿಕೃಷ್ಣ
ಗಾಯಕ – ವಿಜಯ್ ಪ್ರಕಾಶ್
3. ಚಲನಚಿತ್ರ – ರಾಂಬೊ-2
ಹಾಡು – ಚುಟ್ಟು ಚುಟ್ಟು
ಸಂಗೀತ – ಅರ್ಜುನ್ ಜನ್ಯ
ಗಾಯಕ – ರವೀಂದ್ರ ಸೊರಗಾವಿ, ಶಮಿತಾ ಮಲ್ನಾಡ್
4. ಚಲನಚಿತ್ರ – ರಾಬರ್ಟ್
ಹಾಡು – ಕಣ್ಣು ಹೊಡಿಯಾಕ
ಸಂಗೀತ – ಅರ್ಜುನ್ ಜನ್ಯ
ಗಾಯಕಿ – ಶ್ರೇಯಾ ಘೋಷಾಲ್
5. ಚಲನಚಿತ್ರ – ಕಾಂತಾರ
ಹಾಡು – ವರಾಹ ರೂಪಮ್
ಸಂಗೀತ – ಬಿ ಅಜನೀಶ್ ಲೋಕನಾಥ್
ಗಾಯಕ – ಸಾಯಿ ವಿಘ್ನೇಶ್
6. ಚಲನಚಿತ್ರ – ಆಲ್ಬಮ್ ಹಾಡು
ಹಾಡು – 3 PEG
ಸಂಗೀತ – ಕನ್ನಡ ರಾಪರ್ ಚಂದನ್ ಶೆಟ್ಟಿ
ಗಾಯಕ – ಚಂದನ್ ಶೆಟ್ಟಿ
7. ಚಲನಚಿತ್ರ – ಕಾಂತಾರ
ಹಾಡು – ಸಿಂಗಾರ ಸಿರಿಯೇ
ಸಂಗೀತ – ಬಿ ಅಜನೀಶ್ ಲೋಕನಾಥ್
ಗಾಯಕ – ವಿಜಯ್ ಪ್ರಕಾಶ್, ಅನನ್ಯ ಭಟ್, ನಾಗರಾಜ ಪಾಣಾರ್ ವಾಲ್ತೂರು
8. ಚಲನಚಿತ್ರ – ಅಂಜನಿಪುತ್ರ
ಹಾಡು – ಚಂದ ಚಂದ
ಸಂಗೀತ – ರವಿ ಬಸ್ರೂರು
ಗಾಯಕ – ರವಿ ಬಸ್ರೂರು, ಅನುರಾಧ ಭಟ್
9. ಚಲನಚಿತ್ರ – ಕಿರಿಕ್ ಪಾರ್ಟಿ
ಹಾಡು – ಬೆಳಗೆದ್ದು
ಸಂಗೀತ – ಬಿ ಅಜನೀಶ್ ಲೋಕನಾಥ್
ಗಾಯಕ – ವಿಜಯ್ ಪ್ರಕಾಶ್
10. ಚಲನಚಿತ್ರ – ಅಯೋಗ್ಯ
ಹಾಡು – ಯೇನಮ್ಮಿ ಯೇನಮ್ಮಿ
ಸಂಗೀತ – ಅರ್ಜುನ್ ಜನ್ಯ
ಗಾಯಕ – ಪಾಲಕಮುಚ್ಚಲ್ ಮತ್ತು ವಿಜಯಪ್ರಕಾಶ್