ನಾಡಿನ ದಸರಾ ಎಂದರೆ ಮೊದಲು ನೆನಪಾಗುವುದು ಜಂಬೂಸವಾರಿ. ಇದನ್ನು ನೋಡಲು ದೇಶ ವಿದೇಶಗಳಿಂದ ಜನರು ಬರುತ್ತಾರೆ. ಕೃಷ್ಣದೇವರಾಯ ಕಾಲದಲ್ಲಿ ಶುರುವಾದ ಈ ಆಚರಣೆ ಇಂದಿಗೂ ಮೈಸೂರು ದಸರಾದ ಮುಖ್ಯ ಭಾಗವಾಗಿದೆ.
ಅಂಬಾ ವಿಲಾಸ್ ಅರಮನೆಯಿಂದ ಮೊದಲಾಗಿ, ರಾಜ್ಯ ಗೌರವದಿಂದ ಜಂಬೂಸವಾರಿ, ಬನ್ನಿ ಮಂಟಪ ವರೆಗು ಬರುತ್ತದೆ. ರಾಜ ಗಾಂಭೀರ್ಯದೊಂದಿಗೆ ನಾಡ ದೇವತೆಯನ್ನು, ಚಿನ್ನದ ಅಂಬಾರಿಯಲ್ಲಿ ಹೊತ್ತು ಬರುವದನ್ನು ನೋಡಲು ಜನ ಸಾಗರವೇ ಇರುತ್ತದೆ.
ಈ ಬಾರಿ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದಾರೆ. ಅಭಿಮನ್ಯು ಜೊತೆಗೆ ಭೀಮಾ, ಮಹೇಂದ್ರ, ಅರ್ಜುನ, ಧನಂಜಯ, ವಿಜಯ, ಗೋಪಿ, ಪಾರ್ಥಸಾರಥಿ ಗಂಡು ಆನೆಗಳು ಮತ್ತು ವಿಜಯ ವರಲಕ್ಷ್ಮಿ ಎರಡು ಹೆಣ್ಣು ಆನೆಗಳು ತಂಡಕ್ಕೆ ಸೇರ್ಪಡೆಗೊಂಡಿವೆ.
2019 ವರೆಗು ಅರ್ಜುನ, ಚಿನ್ನದ ಅಂಬಾರಿಯನ್ನು ಹೊತ್ತಿತು. ನಂತರದಲ್ಲಿ ‘ಅರ್ಜುನನ’ ಉತ್ತರಾಧಿಕಾರಿಯಾಗಿ ‘ಅಭಿಮನ್ಯು’ ನೇಮಕಗೊಂಡಿತು. 2020 ರಿಂದ, ಅಭಿಮನ್ಯು ಆನೆ ಇಲ್ಲಿಯವರೆಗೆ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತಿದೆ ಮತ್ತು ಈ ವರ್ಷವೂ ಒಯ್ಯುತ್ತದೆ.


ನಾಡಿನ ದೇವತೆ ಚಾಮುಂಡೇಶ್ವರಿ ಯನ್ನು ಚಿನ್ನದ ಅಂಬಾರಿಯಲ್ಲಿ ಹೊರುವ ಪದ್ದತಿಯನ್ನು 1971ರಿಂದ ಶುರುಮಾಡಿದರು. ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ಮೊದಲಾದ ಆಚರಣೆಯಲ್ಲಿ ಸರಿ ಸುಮಾರು 45 ವರ್ಷಗಳ ಕಾಲ ‘ಜಯಮಾರ್ತಾಂಡ’ ಅಂಬಾರಿ ಹೊತ್ತಿತು.
45 ವರ್ಷಗಳ ಕಾಲ ಅಂಬಾರಿ ಹೊತ್ತಿದ ಈ ಆನೆ ಅಂದರೆ ರಾಜರಿಗಿ ಬಹಳ ಪ್ರೀತಿ ಪ್ರೀತಿ ಇದಿದ್ದರಿಂದ, ಅರಮನೆಯ ಒಂದು ದ್ವಾರಕ್ಕೆ ಈ ಆನೆ ಹೆಸರು ಇಡಲಾಗಿದೆ.
ನಂತರದಲ್ಲಿ ಕೆಲವು ಉಲ್ಲೇಖಗಳ ಹೇಳುವ ಪ್ರಕಾರ, ನಂಜುಂಡ, ವಿಜಯಬಹದ್ದೂರ್, ಮೋತಿಲಾಲ್, ರಾಮಪ್ರಸಾದ್ ಆನೆಗಳು ಅಂಬಾರಿಯನ್ನು ಹೊತ್ತಿವೆ.
ನಂತರದಲ್ಲಿ ಬಂದ ಐರಾವತ ಆನೆಗೆ ಒಂದು ವಿಶೇಷ ಇತಿಹಾಸವಿದೆ. ಈ ಆನೆಯನ್ನು ಹಾಲಿವುಡ್ ಚಿತ್ರ ವದ ‘ದಿ ಎಲಿಫೆಂಟ್ ಬಾಯ್’ಗೆ ಚಿತ್ರಕ್ಕೆ ಬಳಸಿಕೊಂಡಿದ್ದರ, ಅದರಲ್ಲಿ ಮೈಸೂರು ಸಾಬು ಆನೆಯೊಂದಿಗೆ ನಟಿಸಿದ್ದರು.
ಬಿಳಿಗಿರಿ –
ಅಂಬಾರಿಯನ್ನು ಹೊತ್ತ ಆನೆಗಳಲ್ಲಿ ಬಿಳಿಗಿರಿ ಆನೆಯೇ ಬಹು ಎತ್ತರ, ಇದು ಬರೋಬರಿ 10.5 ಅಡಿ ಮತ್ತು, 7 ಸಾವಿರ ಕೆ.ಜಿ ಇತ್ತು. ಮೈಸೂರು ದಸರಾದಲ್ಲಿ ಮಹಾರಾಜರನ್ನ ಹೊತ್ತ ಕೊನೆಯ ಆನೆ ಎಂಬ ಹೆಗ್ಗಳಿಕೆ ಈ ಆನೆಯದು.


ದ್ರೋಣ –
18 ವರ್ಷಗಳ ಕಾಲ ಸತತವಾಗಿ ಅಂಬಾರಿಯನ್ನು ಹೊತ್ತ ಹೆಗ್ಗಳಿಕೆ ದ್ರೋಣನದು. ಸರಿ ಸುಮಾರು10. ಅಡಿ ಎತ್ತರದ ಆನೆಯಾಗಿದೆ ದ್ರೋಣ ಸುಮಾರು 6,400 ಕೆ.ಜಿ ತೂಕ ಇತ್ತು. ನಂತರದಲ್ಲಿ 1998ರಲ್ಲಿ ವಿದ್ಯುತ್ ಲೈನ್ ಅಪಘಾತದಲ್ಲಿ ದ್ರೋಣ ಸಾವನ್ನಪ್ಪಿದನ್ನು.
ಅರ್ಜುನ –
ದ್ರೋಣನ ಸಾವಿನ ನಂತರ ಅಂಬಾರಿಯನ್ನು ಹೊರಲು ಬಂದವನೇ ಅರ್ಜುನ. ಆದರೆ ಅರ್ಜುನನಿಗೆ ಅಂಬಾರಿಯನ್ನು ಹೊರುವ ಭಾಗ್ಯ ಕೇವಲ ಒಮ್ಮೆ ಮಾತ್ರ ಸಿಕ್ಕಿತು.
ಮಾವುತನನ್ನು ತಾನೇ ಕೊಂದ ಆರೋಪದಲ್ಲಿ ಅರ್ಜುನನಿಗೆ ಮೈಸೂರು ದಸರಾದಿಂದ ಹೊರಗಡೆ ಉಳಿಸಲಾಯಿತು.
ಬಲರಾಮ –
ಅರ್ಜುನನ ನಂತರ ಅಂಬಾರಿಯನ್ನು ಹೊರುವ ಭಾಗ್ಯ ಬಲರಾಮ ಆನೆ ವಶಮಾಡಿಕೊಂಡ. ತನ್ನ ಶಾಂತಿ ಸ್ವಭಾವಕ್ಕೆ ಹೆಸರಾಗಿದ್ದ ಬಲರಾಮ ಸತತವಾಗಿ 11 ವರ್ಷಗಳ ಕಾಲ ಅಂಬಾರಿಯನ್ನು ಹೊತ್ತಿದ.