

ಈಗಿನ ಸಿನಿ ಪ್ರೇಕ್ಷಕರಿಗೆ ಸಿನಿಮಾಗಳಲ್ಲಿ ಆಕ್ಷನ್ ಮತ್ತು ಗ್ರಾಫಿಕ್ ಕಂಟೆಂಟ್ ಹೊಂದಿರುವ ಚಲನಚಿತ್ರಗಳನ್ನು ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗವು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಕನ್ನಡ ಚಿತ್ರರಂಗದಿಂದ ಬರುತ್ತಿರುವ ಹೈ ಬಜೆಟ್ ಸಿನಿಮಾಗಳನ್ನು ಸಿನಿಮಾ ಪ್ರೇಮಿಗಳು ಎಂಜಾಯ್ ಮಾಡುತ್ತಿದ್ದಾರೆ.
ಅವರಲ್ಲಿ ಕೆಲವರು ಕನ್ನಡ ಚಲನಚಿತ್ರೋದ್ಯಮವು ನಿರ್ದೇಶನ, ಸಂಗೀತ ಮತ್ತು ಹಾಡುಗಳು, ತಂತ್ರಜ್ಞಾನ ಮತ್ತು ಉತ್ತಮ ಅನುಭವ ನೀಡುವ ಚಲನಚಿತ್ರಗಳನ್ನು ನೀಡುವಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳುತ್ತಾರೆ. ಆದರೆ ಹಳೆಯ ಕನ್ನಡ ಸಿನಿ ಉದ್ಯಮವು ಹೇಗೆ ಕಾಣುತಿತ್ತುಎಂದು ಅನೇಕರಿಗೆ ತಿಳಿದಿಲ್ಲ. ಕನ್ನಡ ಉದ್ಯಮವು ಸಾಧಿಸಿದ ಅದ್ಭುತ ಮತ್ತು ಮೈಲಿಗಲ್ಲುಗಳು ಅವರಲ್ಲಿ ಕೆಲವರಿಗೆ ಮಾತ್ರ ತಿಳಿದಿವೆ.
ಕನ್ನಡ ಚಲನಚಿತ್ರೋದ್ಯಮವು ಸಾಧಿಸಿದ ಅಂತಹ ಮೈಲಿಗಲ್ಲುಗಳು ಇಲ್ಲಿವೆ ನೋಡಿ.


1. ನೀರಿನ ಅಡಿಯಲ್ಲಿ ಚಿತ್ರೀಕರಿಸಿದ ಮೊದಲ ಭಾರತೀಯ ಸಿನಿಮಾ – ‘ಒಂದು ಮುತ್ತಿನ ಕಥೆ’
ಶಂಕರ್ ನಾಗ್ ನಿರ್ದೇಶಿಸಿದ ಈ ಚಿತ್ರದಲ್ಲಿ ವರನಟ ರಾಜಕುಮಾರ್ ಮತ್ತು ಅರ್ಚನಾ ಅವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆಕ್ಸಿಜನ್ ಮಾಸ್ಕ್ನ ಸಹಾಯವಿಲ್ಲದೆ ಭಾರತದ ಸಾಗರದಲ್ಲಿ ಚಿತ್ರೀಕರಣಗೊಂಡ ಮೊದಲ ಭಾರತೀಯ ಚಲನಚಿತ್ರವಾಗಿದೆ. ಲಂಡನ್ನಲ್ಲಿ ತಯಾರಿಸಿದ ಯಂತ್ರಗಳ ಸಹ್ಯದಿಂದ, ಮಾಲ್ಡೀವ್ಸ್ ಸಾಗರದಲ್ಲಿ ಕೆನಡಾದ ಕ್ಯಾಮೆರಾವನ್ನು ಉಪಯೋಗಿಸಿ, ಜೆರ್ಮನಿಯ ಕ್ಯಾಮೆರಾಮನ್ನಿಂದ ಈ ಚಿತ್ರವನ್ನು ಚಿತ್ರೀಕರಿಸಿದರೆ.
ಶಂಕರ್ ನಾಗ್ ರಾಜಕುಮಾರ್ ಅವರಿಗೆ ನಿರ್ದೇಶಿಸಿದ ಏಕಿಕ ಚಿತ್ರ ಇದ್ದಾಗಿದ್ದು ಮತ್ತು ಶಂಕ್ರ ನಾಗ್ ಅವರ ಕೊನೆಯದಾಗಿ ನಿರ್ದೇಶಿಸದ ಚಿತ್ರವು ಇದ್ದೆ. ರಾಜ್ ಕುಮಾರ್ ಅವರನ್ನು ನಿರ್ದೇಶಿಸಿದ್ದ ಅತ್ಯಂತ ಕಿರಿಯ ನಿರ್ದೇಶಕ ಎಂಬ ಹೆಗ್ಗಳಿಕೆ ಶಂಕರ್ ನಾಗ್ ಅವರದ್ದು.


2. ಆರು ಭಾಷೆಗಳಲ್ಲಿ ರಿಮೇಕ್ ಆದ ಮೊದಲ ಭಾರತೀಯ ಚಿತ್ರ ನಮ್ಮ ಕನ್ನಡ ಚಿತ್ರ – ಅನುರಾಗ ಅರಳಿತು
೧೯೮೬ರಲ್ಲಿ ಎಂ.ಎಸ್.ರಾಜಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ. ವರನಟ ರಾಜ್ ಕುಮಾರ್, ನಾಧವಿ ಮತ್ತು ಗೀತಾ ಅವರು ಮುಖ್ಯ ಪಾತ್ರಗಳಲ್ಲಿ ಕಾಣಿಕೊಂಡಿದ್ದಾರೆ .
ಈ ಚಿತ್ರವು ಸುಮಾರು 50 ವಾರಗಳ ಚಿತ್ರಮಂದಿರಗಳಲ್ಲಿ ಸಿನಿ ಪ್ರಿಯರನ್ನು ರಂಜಿಸಿ, ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಯಿತು. ಇದು ನಂತರ ದಿನಗಳಲ್ಲಿ ಏಳು ಭಾಷೆಗಳಲ್ಲಿ ರಿಮೇಕ್ ಮಾಡಲಾಗಿದ್ದೆ. 1992 – ತಮಿಳಿನಲ್ಲಿ ‘ಮನ್ನನ್’, 1992 – ತೆಲುಗಿನಲ್ಲಿ ‘ಘರಾನಾ ಮೊಗುಡು’, 1994 ಹಿಂದಿಯಲ್ಲಿ ಲಾಡ್ಲಾ , 1996 ಸಿಂಹಳದಲ್ಲಿ ‘ಮಲ್ ಹಥೈ’ , 1998 ಒಡಿಯಾದಲ್ಲಿ ‘ಸಿಂದೂರಾ ನುಹೇನ್ ಖೇಲಾ ಘರಾ’, 2001 ಬಂಗಾಳಿಯಲ್ಲಿ ‘ಜಮೈಬಾಬು ಜಿಂದಾಬಾದ್’ ಮತ್ತು 2002 ಬಾಂಗ್ಲಾದೇಶದಲ್ಲಿ ‘ಶಮಿ ಸ್ಟ್ರಿರ್ ಜುದ್ದೋ’ ಎಂದು ಮರುನಿರ್ಮಾಣ ಮಾಡಲಾಯಿತು.
ಇದು ಒಡಿಯಾ, ಬೆಂಗಾಲಿ, ಬಾಂಗ್ಲಾದೇಶ ಬೆಂಗಾಲಿ ಮತ್ತು ಸಿಂಹಳ ಭಾಷೆಗೆ ರಿಮೇಕ್ ಆದ ಮೊದಲ ಕನ್ನಡ ಚಿತ್ರ.


3. OM 500 ಕ್ಕೂ ಹೆಚ್ಚು ಬಾರಿ ಮರು-ಬಿಡುಗಡೆಯಾದ ಏಕೈಕ ಭಾರತೀಯ ಚಲನಚಿತ್ರವಾಗಿದೆ ಮತ್ತು ಮರು-ಬಿಡುಗಡೆಯಲ್ಲೂ 100 ದಿನಗಳನ್ನು ಆಚರಿಸಿದ ಏಕೈಕ ಚಲನಚಿತ್ರವಾಗಿದೆ
ಸುಮಾರು 70 ಲಕ್ಷ ಬಜೆಟ್ನಲ್ಲಿ ತಯಾರಾದ ಈ ಚಿತ್ರವು ಆ ಸಮಯದಲ್ಲಿ ಡಾ.ರಾಜ್ ಬ್ಯಾನರ್ನಲ್ಲಿ ಬಂದ ಅತ್ಯಂತ ದುಬಾರಿ ಚಿತ್ರವಾಗಿತ್ತು. ಪ್ರತಿ ಎರಡು ವಾರಗಳಿಗೊಮ್ಮೆ ಮರು-ಬಿಡುಗಡೆಯಾಗುವುದರಿಂದ ಪ್ರೇಕ್ಷಕರಲ್ಲಿ ಮೀಸಲಾದ ಅಭಿಮಾನಿಗಳ ಅನುಸರಣೆಯೊಂದಿಗೆ ಇದು ಕನ್ನಡ ಚಿತ್ರರಂಗದಲ್ಲಿ ಕಲ್ಟ್ ಕ್ಲಾಸಿಕ್ ಚಲನಚಿತ್ರವಾಗಿ ಉಳಿದಿದೆ.
ಈ ಚಿತ್ರವು 500 ಕ್ಕೂ ಹೆಚ್ಚು ಬಾರಿ ಮರು-ಬಿಡುಗಡೆಯಾದ ಲಿಮ್ಕಾ ದಾಖಲೆಯನ್ನು ಹೊಂದಿದೆ. ಈ ಚಿತ್ರವು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಪ್ರದರ್ಶನಗೊಂಡ ಚಿತ್ರ ಎಂದು ವರದಿಯಾಗಿದೆ. ಬೆಂಗಳೂರಿನ ಕಪಾಲಿ ಥಿಯೇಟರ್ ನಲ್ಲಿ ಸಿನಿಮಾ 30 ಬಾರಿ ರಿಲೀಸ್ ಆಗಿದ್ದು ದಾಖಲೆ.


4. ಮಲ್ಟಿಪ್ಲೆಕ್ಸ್ನಲ್ಲಿ 500 ದಿನ ಓಡಿದ ಭಾರತದ ಏಕೈಕ ಚಿತ್ರ ಪುನೀತ್ ರಾಜ್ಕುಮಾರ್ ಅಭಿನಯದ ‘ಮಿಲನ’.
2007 ರಲ್ಲಿ ಕನ್ನಡ ಭಾಷೆಯ ರೊಮ್ಯಾಂಟಿಕ್ ಚಲನಚಿತ್ರವಾಗಿದ್ದು , ಪ್ರಕಾಶ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಮತ್ತು ಪಾರ್ವತಿ ತಿರುವೋತ್ತು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 2007 ರಲ್ಲಿ ಥಿಯೇಟ್ರಿಕಲ್ ಬಿಡುಗಡೆಯಾದ ನಂತರ, ಚಲನಚಿತ್ರವು ಬೃಹತ್ ವಾಣಿಜ್ಯ ಯಶಸ್ಸನ್ನು ಕಂಡಿತು ಮತ್ತು ಥಿಯೇಟರ್ಗಳಲ್ಲಿ 500-ದಿನಗಳ ಓಟವನ್ನು ಪೂರ್ಣಗೊಳಿಸಿತು, ಇದು ಮಲ್ಟಿಪ್ಲೆಕ್ಸ್ಗಳ ಇತಿಹಾಸದಲ್ಲಿ ಇದುವರೆಗೆ ಹೆಚ್ಚು ಕಾಲ ಓಡುತ್ತಿರುವ ಭಾರತೀಯ ಚಲನಚಿತ್ರವಾಗಿದೆ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಭಿನಯವು ಅವರಿಗೆ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತ್ತು .


5. ಭಾರತೀಯ ಚಿತ್ರರಂಗದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲ ನಟ – ವರನಟ ಡಾ. ರಾಜ್ಕುಮಾರ್
ಕನ್ನಡ ಸಿನಿಮಾ ಜಗತ್ತಿಗೆ ವರನಟ ಡಾ.ರಾಜ್ ಕುಮಾರ್ ಕೊಟ್ಟ ಅಪೂರ್ವ ಕೊಡುಗೆಯನ್ನು ಪರಿಗಣಿಸಿ ಡಾ.ರಾಜ್ ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದರು.
ವರನಟ ಎಂದೇ ಕನ್ನಡ ಚಿತ್ರರಂಗದ ಪರಿಚಿತ ಡಾ.ರಾಜ್ ಕುಮಾರ್. ಸ್ಯಾಂಡಲ್ವುಡ್ ಸಿನಿ ರಂಗಕ್ಕೆ ಡಾ.ರಾಜ್ ಕುಮಾರ್ ಕೊಟ್ಟಿರುವ ಕೊಡುಗೆ ಬಹು ಅಪಾರ. ಸದಾ ಕಾಲ ಫ್ಯಾಮಿಲಿ ಸಿನಿಮಾಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದ್ದವರು ನಮ್ಮ ವರನಟ ಡಾ.ರಾಜ್ ಕುಮಾರ್. ಇದಲ್ಲದೆ ಅವರು ಕನ್ನಡ ನಾಡು, ನುಡಿ, ಜಲ ವಿಷಯದಲ್ಲಿ ಸದಾ ಕನ್ನಡದ ಪರವಾಗಿ ಧ್ವನಿಯಾಗುತ್ತಿದ್ದವರು ಡಾ.ರಾಜ್ ಕುಮಾರ್. ಅಣ್ಣಾವ್ರ ಸಿನಿಮಾಗಳನ್ನು ನೋಡಿ ಪ್ರೇರಿತರಾಗಿ ಅನೇಕರು ಕೃಷಿ ಕಾಯಕದಲ್ಲಿ ತೊಡಗಿರುವ ಘಟನೆಗಳು ಅಲವರು . ತುಂಬ ಸರಳ, ಸಜ್ಜನ ವ್ಯಕ್ತಿತ್ವ ಡಾ.ರಾಜ್ ಕುಮಾರ್ಗೆ ಗೌರವ ಡಾಕ್ಟರೇಟ್ ಲಭಿಸಿತ್ತು.


೬. ‘ಮುಂಗಾರು ಮಳೆ’ ಚಿತ್ರಕ್ಕೆ 75 ಲಕ್ಷ ಬಜೆಟ್ – 70+ ಕೋಟಿ ಕಲೆಕ್ಷನ್ –
ಯೋಗರಾಜ್ ಭಟ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪೂಜಾ ಗಾಂಧಿ ಮುಖ್ಯ ಪಾತ್ರಗಳಲ್ಲಿ ನಟಿಸಿದ ಈ ಚಿತ್ರ ೨೦೦೬ರಲ್ಲಿ ಬಿಡುಗಡೆಯಾಗಿದೆ. ಏಕ ಭಾಷೆಯಲ್ಲಿ ತೆರೆಕಂಡ ಈ ಚಿತ್ರ ಕೇವಲ ಕರ್ನಾಟಕದಲ್ಲಿ ಮಾತ್ರ ಬಿಡುಗಡೆಯಾಗಿದೆ. ಅತಿ ಕಡಿಮೆ ಬಜೆಟ್ನಲ್ಲಿ ನಿರ್ಮಾಣಗೊಂಡು ಬಾಕ್ಸ್ ಆಫೀಸ್ನಲ್ಲಿ ಹೆಚ್ಚು ಕಲೆಕ್ಷಣಮಾಡಿದ್ದ ದಕ್ಷಿಣ ಭಾರತದ ಮೊದಲ ಚಿತ್ರವಿದು.