Here are some cute gift ideas for Valentine’s Day
ಪ್ರೀತಿಯಲ್ಲಿದ್ದವರಿಗೆ , ಪ್ರೀತಿ ಹೇಳಿಕೊಳ್ಳಬೇಕು ಎನ್ನುವವರಿಗೆ ವ್ಯಾಲೆಂಟೈನ್ಸ್ ಡೇ ಯಾವಾಗಲು ಸ್ಪೆಷಲ್. ಆ ವಿಶೇಷ ದಿನವನ್ನು ಉಡುಗೊರೆಯೊಂದಿಗೆ ಇನ್ನಷ್ಟು ಅದ್ಭುತಗೊಳಿಸಬೇಕೆಂದೇ ಎಲ್ಲರು ಯೋಚಿಸುತ್ತಾರೆ.. ಆದರೆ, ಏನು ಉಡುಗೊರೆ ನೀಡಬೇಕು ಎನ್ನುವುದು ಬಳಷ್ಟು ಜನರಿಗೆ ಕಾಡುವ ಯೋಚನೆ. ಇಲ್ಲಿವೆ ಒಂದಿಷ್ಟು ಗಿಫ್ಟ್ ಐಡಿಯಾಗಳು.
ಆಸಕ್ತಿ ತಿಳಿದು ಉಡುಗೊರೆ ನೀಡಿ
ನಿಮ್ಮ ಸಂಗಾತಿಗೆ ಏನು ಇಷ್ಟ ಎನ್ನುವುದನ್ನು ಅರ್ಥ ಮಾಡಿಕೊಂಡು ನೀಡುವ ಉಡುಗೊರೆ ಯಾವಾಗಲು ಅವರಿಗೆ ಸ್ಪೆಷಲ್ ಆಗಿರುತ್ತದೆ. ಅಡರಿನ ನಿಮ್ಮಿಬ್ಬರ ನಡುವಿನ ಬಾಂಧ್ಯವೂ ಇನ್ನು ದೃಢ ಆಗಲಿದೆ. ನೀವು ನಿಮ್ಮ ಪ್ರೀತಿಪಾತ್ರರನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೀರಾ ಎನ್ನುವುದನ್ನು ಈ ಮೂಲಕ ತಿಳಿಸಿದಂತೆ ಆಗುತ್ತದೆ.
ಸಣ್ಣ ಸಣ್ಣ ಖುಷಿಯೊಂದಿಗೆ ಸರ್ಪ್ರೈಸ್ ಮಾಡಿ
ನಿಮ್ಮ ಪ್ರೇಮಿಯಲ್ಲಿ ಖುಷಿಗೊಳಿಸಲು ದುಬಾರಿ ಉಡುಗೊರೆಗಳೇ ಬೇಕಾಗಿಲ್ಲ. ಬದಲಾಗಿ ಚಿಕ್ಕ ಉಡುಗೊರೆಗಳು ದುಬಾರಿ ಉಡುಗೊರೆಗಿಂತ ಹೆಚ್ಚಿನ ಸಂತೋಷ ನೀಡುತ್ತದೆ. ಆದ್ದರಿಂದ ಚಿಕ್ಕ ಕೀಚೈನ್ ಖರೀದಿಸಿದರು ಅದರಲ್ಲಿ ನಿಮ್ಮ ಅಮೂಲ್ಯ ಕ್ಷಣಗಳನ್ನು ಪ್ರತಿಬಿಂಬಿಸುವ ಹಾಗೆ ಮಾಡಿ.
ಉಂಗುರ: ಪ್ರೇಮಿಗಳಿಗೆಂದೇ ಸುಂದರವಾಗಿ ವಿನ್ಯಾಸಗೊಳಿಸಲಾದ ಈ ಉಂಗುರವನ್ನು ಉಡುಗೊರೆಯಾಗಿ ನೀಡಿ. ಪ್ರತಿದಿನ ಧರಿಸಿರುವುದರಿಂದ ನೀವು ಸದಾ ನೆನಪಿನಲ್ಲಿಯೇ ಇರುತ್ತೀರಿ.
ಆಫೀಸ್ ಬ್ಯಾಗ್: ನಿಮ್ಮ ಪ್ರೇಮಿಗೆ ದಿನ ಬಳಕೆಯಲ್ಲಿ ಉಪಯೋಗವಾಗುವಂತಹ ಗಿಫ್ಟ್ಗಳನ್ನು ಆಯ್ಕೆ ಮಾಡಿ. ಲ್ಯಾಪ್‌ಟಾಪ್, ಡಾಕ್ಯುಮೆಂಟ್‌ಗಳು ಮತ್ತು ನೋಟ್‌ಬುಕ್ ಇಡಲು ಯೋಗ್ಯವಾದ ಈ ಲೆದರ್ ಫಾರ್ಮಲ್ ಆಫೀಸ್ ಬ್ಯಾಗ್ ಉಡುಗೊರೆಯಾಗಿ ನೀಡಿ. ಇದು ಖಂಡಿತವಾಗಿಯೂ ಅವರಿಗೆ ಇಷ್ಟವಾಗುತ್ತದೆ ಜೊತೆಗೆ ಪ್ರತಿ ದಿನ ಆ ಬ್ಯಾಗ್ ನೋಡಿದ ಕೂಡಲೇ ಅವರಿಗೆ ನಿಮ್ಮ ನೆನಪಾಗುವುದು.
ಫೋಟೋ ಫ್ರೇಮ್: ಫೋಟೋ ಫ್ರೇಮ್ ಗಿಫ್ಟ್ ನೀಡೋದು ಹಳೆಯದಾದರೂ, ನಿಮ್ಮ ನಡುವಿನ ಅಪೂರ್ಣ ಕ್ಷಣಗಳ ಫೋಟೋಗಳಿಗೆ ಜೀವ ನೀಡುವ ಕ್ಷಣ ಅದಾಗಿರುತ್ತದೆ. ಅದನ್ನು ನೋಡಿದಾಗಲೆಲ್ಲ ನಿಮ್ಮೊಂದಿಗೆ ಕಳೆದ ಕ್ಷಣಗಳು ಅವರ ಮನದಲ್ಲಿ ಸುಳಿದಾಡುತ್ತದೆ
ಈ ವಿಶೇಷ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಚಾಕೊಲೇಟ್, ಬ್ರೌನಿ, ಬಗೆಬಗೆಯ ಕುಕೀಸ್ ಬಿಸ್ಕೆಟ್, ನಟ್ಸ್ ಕಾಂಬೊ, ಡೆಕೋರ್ ಲೈಟ್ಸ್ ಲ್ಯಾಂಟರ್ನ್, ಕಾರ್ಡ್‌ಗಳನ್ನು ಹೊಂದಿರುವ ಹ್ಯಾಂಪರ್ನ್ನು ಉಡುಗೊರೆಯಾಗಿ ನೀಡಿ. ನೋಡಲು ಆಕರ್ಷಕವಾಗಿರುವುದರ ಜೊತೆಗೆ ಆರೋಗ್ಯಕರ ತಿಂಡಿಯೂ ಹೌದು.