ಒಂದೇ ಸಿನಿಮಾದ ಮೂಲಕ ವಿವಿಧ ಸ್ಟಾರ್ ನಟರ ಮಕ್ಕಳು ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ್ದಾರೆ. ಅದಲ್ಲದೆ ಬೇರೆ ಬೇರೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಇತರೆ ನಟರ ಮಕ್ಕಳು ಎಂಟ್ರಿ
ಒಂದೇ ಸಿನಿಮಾದ ಮೂಲಕ ವಿವಿಧ ಸ್ಟಾರ್ ನಟರ ಮಕ್ಕಳು ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ್ದಾರೆ. ಅದಲ್ಲದೆ ಬೇರೆ ಬೇರೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಇತರೆ ನಟರ ಮಕ್ಕಳು ಎಂಟ್ರಿ ಕೊಟ್ಟಿದ್ದಾರೆ. ಯಾರ ಮಕ್ಕಳು, ಯಾವೆಲ್ಲ ಸಿನಿಮಾದ ಮೂಲಕ ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟಿದ್ದಾರೆ? ಸಂಪೂರ್ಣ ಮಾಹಿತಿ ಇಲ್ಲಿದೆ.
ಕಳೆದ ವರ್ಷ ತೆರೆಕಂಡ ಶರಣ್ ಅಭಿನಯದ ಗುರುಶಿಷ್ಯರು ಸಿನಿಮಾದ ಮೂಲಕ ಸಾಕಷ್ಟು ಸ್ಟಾರ್ ಕಲಾವಿದರ ಮಕ್ಕಳು ಬೆಳ್ಳಿ ತೆರೆ ಪ್ರವೇಶಿಸಿದರು.
ಸ್ವತಃ ಶರಣ್ ಅವರ ಪುತ್ರ ಹೃದಯ್ ಸಹ ಈ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದರು. ಅದರ ಜೊತೆಗೆ ನೆನಪಿರಲಿ ಪ್ರೇಮ್ ಪುತ್ರ ಏಕಾಂತ್, ಹಾಸ್ಯ ನಟ ರವಿಶಂಕರ್ ಗೌಡ ಅವರ ಪುತ್ರ ಸೂರ್ಯ ರವಿಶಂಕರ್, ನವೀನ್ ಕೃಷ್ಣ ಅವರ ಪುತ್ರ ಹರ್ಷಿತ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಈ ಚಿತ್ರದ ಮೂಲಕವೇ ಎಂಟ್ರಿ ಕೊಟ್ಟಿದ್ದಾರೆ.
ಸ್ಟಾರ್ ಮಕ್ಕಳ ಪ್ರವೇಶಕ್ಕೆ ವೇದಿಕೆಯಾದ ಗುರು ಶಿಷ್ಯರು ಸಿನಿಮಾ:
ಗುರು ಶಿಷ್ಯರು ಸಿನಿಮಾ ನಿಜಕ್ಕೂ ವಿಶೇಷ ಸಿನಿಮಾನೇ ಆಗಿತ್ತು. ಇತರೆ ಮಕ್ಕಳಂತೆ ಆಡಿಷನ್ ಮೂಲಕವೇ ಸ್ಟಾರ್ ಮಕ್ಕಳನ್ನು ಸಿನಿಮಾಗೆ ಆಯ್ಕೆ ಮಾಡಲಾಗಿತ್ತು ಎನ್ನುವುದು ನಿರ್ದೇಶಕರ ಮಾತು. ಖೋ ಖೋ ಆಟ ಕುರಿತು ಗುರುಶಿಷ್ಯರು ಸಿನಿಮಾ ಇತ್ತು. ಹೀಗಾಗಿ ಆಟಗಾರರಾಗಿಯೆ ಸ್ಟಾರ್ ಮಕ್ಕಳು ಚಿತ್ರರಂಗ ಪ್ರವೇಶಿಸಿದರು.
ನಟ ನೆನಪಿರಲಿ ಅವರ ಮಗ ಗುರು ಶಿಷ್ಯರು ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ರೆ, ಅವರ ಮಗಳು ಡಾಲಿ ಧನಂಜಯ್ ನಿರ್ಮಾಣದ ಟಗರು ಪಲ್ಯ ಸಿನಿಮಾದ ಮೂಲಕ ನಾಯಕ ನಟಿಯಾಗಿ ಅಮೃತಾ ಪ್ರೇಮ್ ಸಿನಿಮಾರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ. ಪ್ರೇಮ್ ಅವರ ಇಬ್ಬರು ಮಕ್ಕಳು ಈಗ ಸಿನಿಮಾ ರಂಗಕ್ಕೆ ಮುನ್ನಡಿ ಬರೆದಿದ್ದಾರೆ. ಟಗರು ಪಲ್ಯ ಸಿನಿಮಾದ ಚಿತ್ರೀಕರಣ ಈಗಾಗಲೇ ಶುರು ಆಗಿದೆ.
ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಮಕ್ಕಳು :
ಯಾವುದೇ ನಿರೀಕ್ಷೆ ಇಲ್ಲದೆಯೇ ಬಾಕ್ಸ್ ಆಫೀಸ್ ಲೂಟಿ ಮಾಡಿದ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮಡದಿ ಪ್ರಗತಿ ಶೆಟ್ಟಿ ಅಭಿನಯಿಸಿರುವುದು ನಮಗೆಲ್ಲ ತಿಳಿದೇ ಇದೆ. ಆದರೆ ಆ ಸಿನಿಮಾದಲ್ಲಿ ಇನ್ನೂ ಒಂದು ವಿಶೇಷ ಇದೆ. ರಾಜ-ರಾಣಿಯ ಮಕ್ಕಳಾಗಿಯೇ ರಿಷಬ್ ಮತ್ತು ಪ್ರಗತಿಯ ಮಕ್ಕಳೆ ಕಾಣಿಸಿಕೊಂಡಿದ್ದಾರೆ. ಅಲ್ಲಿಗೆ ರಿಷಬ್ ಮಕ್ಕಳೂ 2022 ರಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದಂತಾಗಿದೆ.
ಇನ್ನು ರಿಯಲ್ ಸ್ಟಾರ್ ಉಪೇಂದ್ರ ಮಗಳು ಐಶ್ವರ್ಯ ಅವರು ಈ ಹಿಂದೆ ಪ್ರಿಯಾಂಕಾ ಉಪೇಂದ್ರ ನಟಿಸಿದ್ದ ಹೌರಾ ಬ್ರಿಡ್ಜ್ ಸಿನಿಮಾದಲ್ಲಿ ಅವರ ಮಗಳಾಗಿಯೇ ಬಣ್ಣ ಹಚ್ಚಿದ್ದರು. ಸದ್ಯ ಸುದ್ದಿಯಲ್ಲಿರುವ ವಿಚಾರ ಅಂದ್ರೆ ಯುವರಾಜಕುಮಾರ್ ಅಭಿನಯದ ಮೊದಲ ಸಿನಿಮಾಕ್ಕೆ ಐಶ್ವರ್ಯ ಹೀರೋಯಿನ್ ಅನ್ನೋ ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ಕೇಳಿ ಬರುತ್ತಿದೆ. ಇದರ ಹೊರತಾಗಿ ನಟಿ ಸುಧಾರಾಣಿ ಪುತ್ರಿ ನಿಧಿ ಕೂಡ ಸಿನಿಮಾರಂಗಕ್ಕೆ ಪ್ರವೇಶ ಮಾಡ್ತಿದ್ದಾರೆ.
ಗಣೇಶ್ ಮಕ್ಕಳಿಬ್ಬರು ಈಗಾಗಲೇ ಬಣ್ಣ ಹಚ್ಚಿದ್ದಾರೆ. ಗಣೇಶ್ ಅವರ ‘ಸಖತ್’ ಚಿತ್ರದಲ್ಲಿ ಅವರ ಪುತ್ರ ವಿಹಾನ್ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟರೆ, ಅವರ ಮಗಳು ಚಾರಿತ್ರ್ಯ, ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಮಕ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.