ಶ್ರೀ ಲೀಲಾ, ಚಿತ್ರರಂಗದಲ್ಲಿ ಕಡಿಮೆ ಸಮಯದಲ್ಲಿ ಆಕರ್ಷಕ ನಟನೆಯಿಂದ ಜನಪ್ರೇಮವನ್ನು ಹೊಂದಿದ ನಟಿಯಾಗಿ ಬೆಳೆದು ನಿಂತ್ತಿದ್ದಾರೆ. “ಕಿಸ್” ಎಂಬ ಕನ್ನಡ ಚಿತ್ರದಿಂದ ತಮ್ಮ ಸಿನಿ ಜರ್ನೀಯನ್ನು ಪ್ರಾರಂಭಿಸಿ, ತನ್ನ ಸಾಧನೆಯನ್ನು ಮುಂದುವರಿಸುತ್ತ ವೇಗವಾಗಿ ಎಲ್ಲರ ಗಮನವನ್ನು ಸೆಳೆದರು. ಆ ವರ್ಷದಲ್ಲಿ “ಭರಾಟೆ” ಮತ್ತು “ಬೈ ಟು ಲವ್” ಎಂಬ ಚಿತ್ರಗಳಲ್ಲಿ ನಾಯಕಿಯ ಪಾತ್ರಗಳಲ್ಲಿ ತೆರೆಯ ಮೇಲೆ ಮಿಂಚಿದ್ದಿರು. ಇದ್ದರ ನಡುವೆ ಬಹುಬಾಶ ನಟಿಯಾಗಿ ತೇರೆ ಮೇಲೆ, ಗೌರಿ ರೊನಂಕಿ ನಿರ್ದೇಶಿಸಿದ “ಪೆಳ್ಳಿ ಸಂದಾಡಿ” ಎಂಬ ತೆಲುಗು ಚಿತ್ರದೊಂದಿಗೆ ಟಾಲಿವುಡ್ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟರು.
ಶ್ರೀ ಲೀಲಾ ರವರ ನಟನೆಯ ಶೈಲಿಗೆ ಮತ್ತು ಅವರ ಪ್ರತಿಭೆಯು ಚಲನಚಿತ್ರ ಪ್ರೇಮಿಗಳ ಹೃದಯಗಳಲ್ಲಿ ಒಂದು ವಿಶೇಷ ಸ್ಥಾನವನ್ನು ಗಳಿಸಿದರು. ಇತ್ತೀಚಿನವರೆಗೆ, ತೆರೆಯಲ್ಲಿ ಕಾಣಿಸಿಕೊಂಡ ಕಾಮೆಡಿ ಚಿತ್ರ “ಧಮಾಕಾ” ನಲ್ಲಿ ತಮ್ಮ ಅದ್ಬುತವಾದ ನಟನೆಯಿಂದ ಜನರನ್ನು ಮೋಹಗೊಳಿಸಿತು. ಮಸ್ ಮಹಾರಾಜ ರವಿ ತೇಜ ಹಾಗೂ ತ್ರಿನಾಧ ರಾವ್ ನಕ್ಕಿನ ನಿರ್ದೇಶನದಲ್ಲಿ ಶ್ರೀ ಲೀಲಾ ಮಾಡಿದ “ಜಿಂಥಕ್” ಮತ್ತು “ಪಲ್ಸರ್ ಬೈಕ್” ಎಂಬ ಹಾಡುಗಳಲ್ಲಿನ ಮಾಸ್ ಡಾನ್ಸಗೆ ಎಲ್ಲರು ಫುಲ ಫಿದಾ ಅದ್ದರು. ಶ್ರೀ ಲೀಲಾ ರವರ ನಟನೆಯ ಪ್ರದರ್ಶನ ಮತ್ತು ಆಕರ್ಷಕ ನೃತ್ಯವು ಟಾಲಿವುಡ್ನಲ್ಲಿ ಹೊಸ ಗುರುತಾಗಿ ಸ್ಥಾಪಿಸಿತು.
ತಮ್ಮ ನಟನೆಯೊಂದಿಗೆ ಸಂಚಲನ ಮಾಡ್ಡಿದ್ದ ಶ್ರೀ ಲೀಲಾ ತೆಲುಗು ಚಲನಚಿತ್ರ ಕ್ಷೇತ್ರದಲ್ಲಿ ಅತ್ಯಂತ ಬ್ಯುಸಿ ನಟಿಯಾಗಿದ್ದಾರೆ. ಶ್ರೀ ಲೀಲಾ ಆಕೆಯ ಕಿರು ವಯಸ್ಸಿನಲ್ಲಿಯೆ, ಮಹೇಶ್ ಬಾಬು ಹಾಗೂ ಬಾಲಕೃಷ್ಣನಂತಹ ದೊಡ್ಡನಟರ ಜೊತೆಗೆ ಮುಖ್ಯ ನಾಯಕಿಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಪಂಜಾ ವೈಷ್ಣವ್ ರವರ ʼಆದಿ ಕೇಶವʼ, ರಾಮ್ ಪೊತಿನೇನಿ ಯ ʼಸ್ಕಂದʼ ಮತ್ತು ನಂದಮೂರಿ ಬಾಲಕೃಷ್ಣ ರವರ ʼಭಗವಂತ್ ಕೇಸರಿʼ ಎಂಬ ಅಲವು ಚಿತ್ರಗಳಲ್ಲಿ ಶ್ರೀ ಲೀಲಾರವರು ನಾಯಕಿ ನಟಿಯಾಗಿ ಮುಂದೆ ಕಾಣಲು ಖಚಿತವಾಗಿವೆ. ಇನ್ನು ಕೆಲವು ಮುಲ ವರದಿಗಳ ಸೂಚಿಸುವಂತ್ತೆ, ಶ್ರೀ ಲೀಲಾ ರವರು ಪೂಜಾ ಹೆಗ್ಡೆ ಹಾಗೂ ರಶ್ಮಿಕಾ ಮಂದಣ್ಣನಂತಹ ಪ್ರಖ್ಯಾತ ನಟಿಯರು ಮಾಡಲಾಗದೆ ಬಿಟ್ಟ ಸಿನಿಮಾಗಳಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಶ್ರೀ ಲೀಲಾ ನಾಯಕಿ ನಟಿಯಾಗಿ ಅಲವು ಚಿತ್ರಗಳಲ್ಲಿ ಒಂದೇ ಸಮಯದಲ್ಲಿ ನಟಿಸುತ್ತಿದ್ದಾರೆ, ಹಿಂದೆ ಮಾಡಿದ ಚಿತ್ರಗಳು ತಂದ ಅದ್ಭುತ ಯಶಸ್ಸು ಅವರನ್ನು ತೆಲುಗು ಚಲನಚಿತ್ರ ಜಗತ್ತಿನ ಮುಂದೆ ನಿಲ್ಲಿಸಿದೆ. ಅವರ ಕಠಿಣ ಪರಿಶ್ರಮ, ಪ್ರತಿಭೆ ಅಗು ಕಂಡ ಕನಸುಗಳು ಮಾತ್ರವಲ್ಲದೆ, ಕನ್ನಡ ಮತ್ತು ತೆಲುಗು ಚಲನಚಿತ್ರ ಜನರ ಹೃದಯಗಳನ್ನೂ ಗೆದ್ದಿವೆ. ಅಪಾರ ಪ್ರತಿಭೆ ಮತ್ತು ಬೆಳವಣಿಗೆಯಿಂದ ಕೂಡಿದ ಶ್ರೀ ಲೀಲಾ ಮುಂದಿನ ವರ್ಷಗಳಲ್ಲಿ ಒಂದು ಅದ್ಬುತ ನಾಯಕಿ ನಟಿಯಾಗಿ ಬೆಳಗುತ್ತಿದ್ದಾರೆ. ವಿವಿಧ ಪಾತ್ರಗಳಲ್ಲಿ ಸಹಜವಾಗಿ ಹಾರಾಡುವ ಅವರು ಕಲಾಪ್ರದರ್ಶನ ಕೆಲವೊಮ್ಮೆ ಕನಸಿನ ಜೊತೆಗೂಡಿಸುತ್ತದೆ, ಆಗಲೇ ಸೇರಿದ ಅದ್ಭುತ ಚಲನಚಿತ್ರ ಪಾತ್ರಗಳು ಅವರನ್ನು ಕನ್ನಡ ಮತ್ತು ತೆಲುಗು ಚಲನಚಿತ್ರ ಪ್ರಪಂಚದ ಉಜ್ವಲ ನಟಿಯನ್ನಾಗಿ ರುಪ್ಪಿಸಿವೆ.