ಸಿನಿಮಾ ರಂಗ ಅಂದರೇನೇ ಒಂದು ಅಗ್ನಿ ಪರೀಕ್ಷೆ. ಆ ಪರೀಕ್ಷೆಯಲ್ಲಿ ಉತ್ತೀರ್ಣ ವಾಗುವುದು ಎಂತವರಿಗೂ ಅತ್ಯಾವಶಕ. ಅದು ನಟನೆಯಾಗಲಿ ಅಥವಾ ನಿರ್ದೇಶನವಾಗಲಿ ಅವರ ಕೌಶಲ್ಯವನ್ನು ಸಾಬೀತುಪಡಿಸುವುದು ಅತ್ಯಗತ್ಯ.
ಯಾರೇ ಒಬ್ಬರು ನಿರ್ದೇಶಕ ಸಿನಿ ರಂಗಕ್ಕೆ ಬರಬೇಕಾದರೆ ಅವರು ಒಂದು ಸಕ್ಸೆಸ್ಫುಲ್ ಆಗುವ ಕನಸು ಕಟ್ಟಿಕೊಂಡು ಬರುತ್ತಾರೆ. ಒಬ್ಬ ನಿರ್ದೇಶಕ ತಮ್ಮ ಚೊಚ್ಚಲ ಸಿನಿಮಾದೊಂದಿಗೆ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿಕೊಳ್ಳಬೇಕು. ಅವರು ಮಾಡುವ ಸಿನಿಮಾ ಸಿನಿ ಪ್ರೇಕ್ಷಕರಲ್ಲಿ ಮತ್ತು ಸಿನಿಮಾ ವಿಮರ್ಶಕರ ಮೇಲೆ ಉತ್ತಮ ಪರಿಣಾಮ ಬಿರುವುದು ಮುಖ್ಯ.
ಯಾವುದೇ ನಿರ್ದೇಶಕರು ತಮ್ಮ ಮೊದಲ ಸಿನಿಮಾ ಮಾಡಿದರೂ ಪ್ರೇಕ್ಷಕರಲ್ಲಿ ಮರೆಯಲಾಗದ ಛಾಪು ಮೂಡಿಸುವಂತೆ ಇರಬೇಕು. ಅಂಥದೇ ಒಂದು ಅದ್ಬುತ ಮಾಡಿರುವ ನಿರ್ದೇಶಕರಲ್ಲಿ ಕೆಲವರು ಇವರೇ ನೋಡಿ –


1. ಸುನಿ – ‘ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ’ (2013)
ಕನ್ನಡ ಸಿನಿಮಾದಲ್ಲಿ ಒಂದು ಸಂಚಲ ಮಾಡಿರುವ ನಿರ್ದೇಶಕರಲ್ಲಿ ಸುನಿ ಸಹ ಒಬ್ಬರು. 2013 ರಲ್ಲಿ ‘ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ’ ಎಂಬ ಪ್ರೇಮ್ ಕಹಾನಿ ಒಂದಿಗೆ ಎಷ್ಟು ಜನರ ಮನಸು ಗೆದಿದ್ದರು ಅವರಿಗೂ ಸಹ ಗೊತ್ತಿಲ್ಲ.
ರಕ್ಷಿತ್ ಶೆಟ್ಟಿ ನಾಯಕನಾಗಿ ಬಂದ ಈ ಚಿತ್ರ, ಅಂದಿಗು ಇಂದಿಗು ಒಂದು ಕಲ್ಟ್ ಕ್ಲಾಸಿಕ್ ಲವ್ ಸ್ಟೋರಿ ಸಿನಿಮವಾಗಿ ಉಳಿದುಕೊಂಡಿದೆ. ಈ ಚಿತ್ರವನ್ನು ಕನ್ನಡ ಚಿತ್ರರಂಗದ ಹೊಸ ಅಲೆ ಎಂದು ಪರಿಗಣಿಸಲಾಗಿತ್ತು. ಕೇವಲ ಎರಡು ಸುಂದರವಾದ ಪಾತ್ರಗಳು, ಅದ್ಭುತವಾದ ಹಾಡುಗಳು ಮತ್ತು ಡೈಲಾಗ್ ಈ ಚಿತ್ರವುನ್ನು ಬಾಕ್ಸ್ ಆಫೀಸ್ ನಲ್ಲಿ ಮಿಂಚುವಂತೆ ಮಾಡಿದೆ.


2. ರಕ್ಷಿತ್ ಶೆಟ್ಟಿ – ‘ಉಳಿದವರು ಕಂಡಂತೆ’ (2013)
2013-2014 ರ ಅವಧಿಯನ್ನು ನಟ ರಕ್ಷಿತ್ ಶೆಟ್ಟಿಗೆ ಒಂದು ಹೆಗ್ಗುರುತು ಹಂತವೆಂದು ಹೇಳಬಹುದು.
‘ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ’ ಚಿತ್ರದಿಂದ ಅವರು ನಟನಾಗಿ ಖ್ಯಾತಿ ಪಡೆದರೆ, ಅವರ ನಿರ್ದೇಶನದ ಚೊಚ್ಚಲ ಸಿನಿಮಾವದ ‘ಉಳಿದವರು ಕಂಡಂತೆ’ ಅವರಲ್ಲಿದ್ದ ನಿರ್ದೇಶಕರನ್ನು ಪರಿಚಯ ಮಾಡಿಸಿತು.
ಒಂದು ಸಿನಿಮಾದಲ್ಲಿ 5 ವಿವಿಧ ಕಥೆಯನ್ನು ಹೇಳುವ ರೀತಿ ಈ ಸಿನಿಮಾ ಸಕ್ಸಸ್ ಆಗಲು ಕರಣವಾಯ್ತು. ಒಂದೊಂದು ಪಾತ್ರಗಳನ್ನು ಪಂಚ ಭೂತಗಳಿಗೆ ಹೋಲಿಸಿ, ಯಾರು ಮಾಡದ ಒಂದು ವಿಭಿನ್ನ ಆಲೋಚನೆಯೊಂದಿಗೆ ಸಿನಿಮಾ ಮಾಡಿರುವ ಹೆಗ್ಗಳಿಕೆ ರಕ್ಷಿತ್ ಅವರದು. ಈ ಸಿನಿಮಾದ ಕಥಾ ಪ್ರದರ್ಶನ ಈ ಸಿನಿಮಾವನ್ನು ಕನ್ನಡದಲ್ಲಿ ಒಂದು ‘ಕಲ್ಟ್ ಕ್ಲಾಸಿಕ್’ ಸಿನಿಮಾವನಾಗಿ ಮಾಡಿತು.
ಈ ಸಿನಿಮಾದ ಟೈಗರ್ ಡ್ಯಾನ್ಸಗೆ ಅದೆಷ್ಟು ಫ್ಯಾನ್ ಫಾಲೋಯಿಂಗ್ ಅಂದರೆ ಸಿನಿಮಾ ಬಂದು 10 ವರ್ಷಗಳಾದರೂ ಅದರ ಕ್ರೇಜ್ ಇನ್ನು ಹೋಗಿಲ್ಲ.


3. ಪ್ರಶಾಂತ್ ನೀಲ್ – ‘ಉಗ್ರಮ್’ (2014)
ಈ ಚಿತ್ರ ಬಿಡುಗಡೆಗೂ ಮುನ್ನವೇ ಟ್ರೇಲರ್ ಮೂಲಕ ಅಭಿಮಾನಿಗಳನ್ನು ಸೆಳೆದಿತ್ತು.
ಪ್ರಶಾಂತ್ ನೀಲ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಅವರ ನಿರ್ದೇಶನದ KGF ಸಿನಿಮಾಗಳು. ಆದರೆ 2014 ರಲ್ಲಿ ಇವರ ಡೆಬ್ಯುಟ್ ಸಿನಿಮಾ ‘ಉಗ್ರಂ’ ಇವರನ್ನ ಕನ್ನಡ ಸಿನಿಮಾದ ಒಂದು ಸಂಚಲನ ನಿರ್ದೇಶಕರನ್ನಾಗಿ ಪರಿಚಯಿಸಿತು. ಶ್ರೀಮುರಳಿ ಅವರಿಗೆ ಒಂದು ಕಮ್ ಬ್ಯಾಕ್ ಸಿನಿಮಾ ಕೊಟ್ಟ ‘ಉಗ್ರಂ’ ಬಾಕ್ಸ್ ಆಫೀಸ್ನಲ್ಲಿ 150 ದಿನಗಳ ಪ್ರದರ್ಶನ ಕಂಡಿತು. ಸಿನಿಮಾದಲ್ಲಿ ಶ್ರೀಮುರಳಿಯ ಯಂಗ್ ಡೈನಾಮಿಕ್ ಯುವಕನ ಲುಕ್ ಕೂಡಾ ಜನರನ್ನು ಮೋಡಿ ಮಾಡಿತ್ತು.
ರವಿ ಬಸ್ರೂರ್ ಸಂಗೀತ ನಿರ್ದೇಶನ, ಪ್ರಶಾಂತ್ ನೀಲ್ ಅವರ ಸೃಜನಶೀಲ ನಿರ್ದೇಶನ, ಡೈನಾಮಿಕ್ ಪಾತ್ರದಲ್ಲಿ ಶ್ರೀ ಮುರಳಿ ಮತ್ತು ಭುವನ್ ಕುಮಾರ್ ಛಾಯಾಗ್ರಹಣ ಚಿತ್ರದ ಹೈಲೈಟ್ಸ್.


4. ಅನುಪ್ ಭಂಡಾರಿ – ‘ರಂಗಿತರಂಗ’ (2015)
ಇಲ್ಲಿಯವರೆಗೆ ನಾವು ಆಕ್ಷನ್ ನಿರ್ದೇಶಕರು ಮತ್ತು ಪ್ರೇಮ ಕಥೆಗಳೊಂದಿಗೆ ಬಂದ ಅದ್ಬುತ ಡೆಬ್ಯುಟ್ ನಿರ್ದೇಶಕರದ ಬಗ್ಗೆ ಮಾತನಾಡಿದ್ದೇವೆ. ಆದರೆ 2015 ರಲ್ಲಿ ಅನುಪ್ ಭಂಡಾರಿ ಅವರ ‘ರಂಗಿತರಂಗ’ ಕನ್ನಡ ಸಿನಿಮಾದ ಒಂದು ರೋಚಕ ಸಿನಿಮಾ.
ದೊಡ್ಡ ದೊಡ್ಡ ಸೆಟ್ಸ್ ಅಕಾಲಿಲ್ಲ, ಹೇಳುವಷ್ಟು ದೊಡ್ಡ ಬಜೆಟ್ ಸಿನಿಮಾ ಇದಲ್ಲ, ಹೀರೋಗೋಸ್ಕರ ಒಂದು ದೊಡ್ಡ ವಿಲನ್ ಸಹ ಇಲ್ಲ. ಇವೇನು ಇಲ್ಲದೆ ಒಂದು ಸಿನಿಮಾ ಹಿಟ್ ಆಯ್ತಾ? ಹೌದು ಆ ಸಿನಿಮಾ ಬಾಕ್ಸ್ ಆಫೀಸ್ ನ ಒಂದು ಅದ್ಬುತ.
ವಿದೇಶದಲ್ಲಿ ಶೂಟಿಂಗ್ ಮಾಡಿಬಂದು, ಈ ಚಿತ್ರಕ್ಕಾಗಿ ಅವರು ಕೋಟಿಗಟ್ಟಲೆ ಹೂಡಿಕೆ ಮಾಡಿಲ್ಲ. ಸಿನಿಮಾದಲ್ಲಿ ನಾಯಕನಾಗಿ ಅನುಪ್ ಭಂಡಾರಿ ಸಹೋದರ ನಿರೂಪ್ ಭಂಡಾರಿಯನ್ನು ಪರಿಚಯ ಮಾಡಿದರು.
ಚಿತ್ರದ ಮೊದಲಾರ್ಧದಲ್ಲಿ ಅನುಪ್ ಭಂಡಾರಿ ಕಥೆಯಲ್ಲಿ ಒಳ್ಳೆಯ ಸಸ್ಪೆನ್ಸ್ ಇಟ್ಟು, ಎರಡನೇ ಭಾಗದಲ್ಲಿ ಬೇರೆಯದೇ ಒಂದು ತಿರುವು ಕೊಟ್ಟು ಚಿತ್ರದ ಅಂತ್ಯಕ್ಕೆ ಅನಿರೀಕ್ಷಿತ ತಿರುವಿನ ಮೂಲಕ ಪ್ರೇಕ್ಷಕರಲ್ಲಿ ಒಂದು ಅದ್ಬುತ ನಿರ್ದೇಶಕನ ಸ್ಥಾನ ಪಡೆದುಕೊಂಡರು.