‘ತುಘಲಕ್’ ಸಿನಿಮಾದಿಂದ ಶುರುವಾದ ಸ್ನೇಹ: 2011-12 ರಲ್ಲಿ ಇಂಜಿನಿಯರಿಂಗ್ ಮುಗಿಸಿ ಸಿನಿ ಪ್ರಪಂಚಕ್ಕೆ ಹೆಜ್ಜೆ ಇಟ್ಟು ತನ್ನಗೆ ಒಂದು ಹೆಸರು ಮಾಡಬೇಕೆಂದು ರಕ್ಷಿತ್ ಶೆಟಿ ಕನ್ನಡ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟರು.
ಅದೇ ಸಮಯದಲ್ಲಿ ರಿಷಬ್ ಶೆಟ್ಟಿ ಆಕ್ಟಿಂಗ್ ಕೋರ್ಸ್ ಮುಗಿಸಿ ಸಿನಿಮಾ ರಂಗದಲ್ಲಿ ಅವಕಾಶಕ್ಕಾಗಿ ನೋಡುತಿದ್ದರು. ಇದಲ್ಲದೆ ಅವರು ಸಿವಿಲ್ ಕನ್ಸ್ಟ್ರಕ್ಷನ್, ರಿಯಲ್ ಎಸ್ಟೇಟ್, ಮತ್ತು ಹಲವು ಕೆಲಸಗಳನ್ನು ಮಾಡುತ್ತಿದ್ದರು.
‘ತುಘಲಕ್’ ಚಿತ್ರದಲ್ಲಿ ಒಂದಾದ ಈ ಇಬ್ಬರು ಈ ಚಿತ್ರದೊಂದಿಗೆ ಸಿನಿಮಾ ಪರಿಶ್ರಮಕ್ಕೆ ಪ್ರವೇಶ ಮಾಡಿದ್ದರು. ರಿಷಬ್ ಶೆಟ್ಟಿ ಈ ಚಿತ್ರದಲ್ಲಿ ವಿಲ್ಲನ್ ಆಗಿ ನಟ್ಟಿಸಿದರೆ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹೀರೋ ಆಗಿ ಕಣ್ಣಿಸಿಕೊಂಡರು.
ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ಸ್ ಮಾಡಲು ವಿಫಲವಾಯಿತು. ಸಿನಿಮಾ ವೈಫಲ್ಯದಿಂದ ಶುರುವಾಯಿತು ರಿಷಬ್ ಮತ್ತು ರಕ್ಷಿತ್ ಅವರ ಸ್ನೇಹ.
“Everything is a passing cloud”: Rise of Success.
‘ತುಘಲಕ್’ ಸಿನಿಮಾದಿಂದ ಫೇಲ್ಯೂರ್ ಅನುಭವಿಸಿದ ಈ ಜೋಡಿ, ಒಬರಿಗೊಸ್ಕರ ಒಬ್ಬರು ಜೊತೆ ಆದರು. ಫೇಲ್ಯೂರ್ ನೊಂದಿಗೆ ಶುರುವಾದ ಈ ಸ್ನೇಹ ಮುಂದಿನ ದಿನಗಳಲ್ಲಿ ಸಿನಿಮಾ ಪ್ರಪಂಚದಲ್ಲಿ ದಿ ಬೆಸ್ಟ್ ಎನ್ನುವ ಮಟ್ಟಕ್ಕೆ ಬೆಳೆದು ನಿಂತರು.
ನಂತರ ದಿನಗಳಲ್ಲಿ ಇವರಿಬ್ಬರು 2 ವರುಷ ಸಿನಿಮಾಗಳಿಂದ ದೂರ ಉಲಿದರು.


೨೦೧೪ ರಲ್ಲಿ ‘ಉಳಿದವರು ಕಂಡಂತೆ’ ಚಿತ್ರದೊಂದಿಗೆ ಮತ್ತೆ ರಿಷಬ್ ಮತ್ತು ರಕ್ಷಿತ್ ಸಿನಿಮಾ ರಂಗಕ್ಕೆ ಕಮ್ಬ್ಯಾಕ್ ಮಾಡಿದ್ದರು. ರಿಷಬ್ ಶೆಟ್ಟಿ ಒಂದು ಮುಖ್ಯ ಪಾತ್ರದಲ್ಲಿ ಮತ್ತು ರಕ್ಷಿತ್ ಶೆಟ್ಟಿ ನಾಯಕನಾಗಿ ಮತ್ತು ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಗಳಿಸಲಿಲ್ಲ. ಆದರೆ ಇಲ್ಲಿಯವರೆಗೆ ಇದು ಹೆಚ್ಚಿನ ಸಿನಿ ಪ್ರೇಕ್ಷಕರಿಗೆ ಅತ್ಯಂತ ಕಲ್ಟ್ ಕ್ಲಾಸಿಕ್ ಚಲನಚಿತ್ರಗಳಲ್ಲಿ ಒಂದಾಗಿದೆ.
2016 ಅವರಿಗೆ ಸಕ್ಸಸ್ ವರ್ಷವೆಂದರೆ ತಪಿಲ್ಲ, ಯಶಸ್ಸು ಶೆಟ್ಟಿಗಳ ಬಾಗಿಲು ತಟ್ಟಿತು. ‘ಕಿರಿಕ್ ಪಾರ್ಟಿ’ ಎಂಬ ಚಿತ್ರದೊಂದಿಗೆ ಕನ್ನಡ ಸಿನಿಮಾ ರಂಗದಲ್ಲಿ ಶೆಟ್ಟರ ಹೆಸರು ಯಲರಲ್ಲಿ ತುಂಬಾ ಫೇಮಸ್ ಆಗಿ ನಿಂತಿದೆ.
ಸಿನಿಮಾದಲ್ಲಿ ಹೀರೋ ಆಗಿ ನಟಿಸಿರುವ ರಕ್ಷಿತ್ ಶೆಟ್ಟಿ ಎಲ್ಲರಲ್ಲಿ ಸಖತ್ ಫೇಮಸ್ ಆಗಿಬಿಟ್ಟರು. ಆದರೆ ಇಲ್ಲಿ ಆರಂಭಿಕ ದಿನಗಳಲ್ಲಿ ಅನೇಕರು ಗಮನಿಸದ ಟ್ವಿಸ್ಟ್ ಎಂದರೆ ರಿಷಬ್ ಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
‘ಕಿರಿಕ್ ಪಾರ್ಟಿ’ ರಿಲೀಸ್ ಆಗಿ ಆ ಸಮಯದಲ್ಲಿ 35 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ ಸಿನಿಮಾ ಎಂಬ ಹೆಗ್ಗಲಿಕೆಗೆ ಪಾತ್ರವಾಗಿದೆ.
‘Uncomplete ಶೆಟ್ಟಿ ಗ್ಯಾಂಗ್’: Entry of Raj B Shetty
ಇಳಿಯವರೆಗೂ ಇಬ್ಬರ ಬಗ್ಗೆ ನೋಡುತ ಬಂದ್ವಿ. RR ನಲ್ಲಿ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಸಿನಿಮಾ ರಂಗದಲ್ಲಿ ಮಿಂಚುತ ಬಂದಿದಾರೆ. ಆದರೆ RR ಗ್ಯಾಂಗ್ ನಲ್ಲಿ ಕಣ್ಣಿಸಿಕೊಂಡ ಹೊಸ ವ್ಯಕ್ತಿಯೇ ರಾಜ್ ಬಿ ಶೆಟ್ಟಿ.
2017 ರಲ್ಲಿ ‘ಒಂದು ಮೊಟ್ಟೆಯ ಕಥೆ’ ಎಂಬ ಸಿನಿಮಾದಿಂದ ತೆರೆ ಮೇಲೆ ಕಣ್ಣಿಸಿಕೊಂಡರು. ರಾಜ್ ಶೆಟ್ಟಿ ಕೆಲವು ಸಿನಿಮಾಗಳೊಂದಿಗೆ ಮುಖ್ಯ ಪಾತ್ರಗಳನ್ನು ಮಾಡುತ ಕನ್ನಡ ಸಿನಿ ರಂಗದಲ್ಲಿ ಬೆಳೆಯುತ್ತಾ ಬಂದಿದ್ದಾರೆ.


2021ರಲ್ಲಿ ರಾಜ್ ಬಿ ಶೆಟ್ಟಿ ಸಾಮಾನ್ಯವಾಗಿ ಹೀರೋಗಳು ಮತ್ತು ದೊಡ್ಡ ಸೆಲೆಬ್ರಿಟಿಗಳಿಂದ ದೂರ ಇರುತ್ತಾರೆ. ಅದೇ ರೀತಿಯಲ್ಲಿ ಆರಂಭಿಕ ದಿನಗಳಲ್ಲಿ ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿಯನ್ನು ಭೇಟಿಯಾಗದೆ ದೂರ ಉಳಿದರು, ನಂತರ ಲಾಕ್‌ಡೌನ್‌ನಲ್ಲಿ ಎಲ್ಲವೂ ಬದಲಾಯಿತು.
ಲಾಕ್‌ಡೌನ್‌ನಲ್ಲಿ ರಾಜ್ ಮತ್ತು ರಿಷಬ್ ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾದರು ಮತ್ತು ತುಂಬಾ ವೇಗವಾಗಿ ಹತ್ತಿರವಾದರು. ಅಲ್ಲಿ ಅವರು ಚಲನಚಿತ್ರಗಳು, ಕಥೆ ಹೇಳುವ ವಿಭಿನ್ನ ವಿಧಾನಗಳು ಮತ್ತು ನಿರ್ದೇಶನಗಳ ಬಗ್ಗೆ ಹೆಚ್ಚು ಚರ್ಚಿಸಲು ಪ್ರಾರಂಭಿಸಿದರು. ನಂತರ ಈ ಇಬ್ಬರೂ ನಾಯಕರು ‘ಗರುಡ ಗಮನ ವೃಷಭ ವಾಹನ’ ಎಂಬ ಚಿತ್ರದಲ್ಲಿ ಒಟ್ಟಿಗೆ ಬಂದರು, ಇದು ಕನ್ನಡ ಸಿನಿ ರಂಗದಲ್ಲಿ ಹಿಟ್ ಚಿತ್ರವಾಗಿತ್ತು.
ಈ ಮೂವರು ನಾಯಕರು ನಂತರ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಿನಿಮಾ ಕೊಟ್ಟರು. ಸ.ಹಿ.ಪ್ರಾ.ಶಾಲೆ ಕಾಸರಗೋಡು, 777 ಚಾರ್ಲಿ, ಗರುಡ ಗಮನ ವೃಷಭ ವಾಹನ, & ಕಾಂತಾರ ಈ ಗ್ಯಾಂಗ್ ಕನ್ನಡಿಗರಿಗೆ ನೀಡಿದ ಅತ್ಯುತ್ತಮ ಕೆಲವು ಕನ್ನಡ ಚಿತ್ರಗಳು.
ಅವರು ಗಳಿಸಿದ ಎಲ್ಲಾ ಖ್ಯಾತಿಗೆ ಒಂದು ದಶಕದ ಕಠಿಣ ಪರಿಶ್ರಮ, ವೈಫಲ್ಯಗಳು, ನಿರಾಕರಣೆ ಮತ್ತು ಚಲನಚಿತ್ರಗಳಲ್ಲಿ ಅವರು ತೋರಿಸಿದ ಡೆಡಿಕೇಶನ್ ಒಂದೇ ಕಾರಣ
ಅವರು ಇತರ ಸ್ಟಾರ್ ಹೀರೋಗಳು ಮತ್ತು ನಿರ್ದೇಶಕರಂತಹ ಉತ್ತಮ ವಿಷಯ ಮತ್ತು ಸಾಹಸ ಚಿತ್ರಗಳನ್ನು ನೀಡಿದ್ದಾರೆ. ಆದರೆ RRR ಗ್ಯಾಂಗ್ ಅನ್ನು ಅನನ್ಯ ಮತ್ತು ಅತ್ಯಂತ ಪ್ರಸಿದ್ಧಗೊಳಿಸಿದ್ದು ಕಥೆಗಳನ್ನು ಹೇಳುವ ವಿಧಾನವಾಗಿದೆ. ಅವರು ಯಾವಾಗಲೂ ತಮ್ಮ ತವರು ಊರಿನ ಸಂಸ್ಕೃತಿಯನ್ನು ಚಲನಚಿತ್ರಗಳಲ್ಲಿ ಬೆರೆಸಿದರು ಮತ್ತು ಚಲನಚಿತ್ರಗಳನ್ನು ವೀಕ್ಷಕರಿಗೆ ಪ್ರಸ್ತುತಪಡಿಸಿದರು.
ಈ ಮೂವರು ನಾಯಕರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಒಳ್ಳೆಯ ಚಿತ್ರಗಳನ್ನು ತರಲು ಮತ್ತು ನಮ್ಮ ಭಾಷೆಯ ಸಿನಿಮಾಗಳನ್ನು ಜಗತ್ತಿನ ಎಲ್ಲರಿಗೂ ತಿಳಿಯುವಂತೆ ಮಾಡವುದು ಅವರ ಮುಖ್ಯ ಉದ್ದೇಶ.