ಈಗಿನ ಪೀಳಿಗೆಯಲ್ಲಿ ಕನ್ನಡ ಸಿನಿಮಾಗಳೆಂದರೆ KGF, Dia, ಕಾಂತಾರ, 777 ಚಾರ್ಲಿ ಅಂತ ಮಾತ್ರ ಹೇಳ್ತಾರೆ. ಆದರೆ ನನ್ನಂಥ 90 ರ ದಶಕದ ಯುವಕರಿಗೆ ಮಾತ್ರ ಕನ್ನಡ ಸಿನಿಮಾ ಎಂದರೆ ನೆನಪಾಗುವ ಸಿನಿಮಾಗಳೆಂದರೆ ಅಮೃತವರ್ಷಿಣಿ, ಮುಂಗಾರು ಮಳೆ, ಮತ್ತು ಆಪ್ತಮಿತ್ರ ಅಂತಹ ಸಿನಿಮಾಗಳು.
ಕಾಲದಿಂದ ಕಾಲಕ್ಕೆ ಕನ್ನಡ ಸಿನಿಮಾಗಳಲ್ಲಿ ಹೆಚ್ಚಿನ್ನ ಬೆಳವಣಿಗೆಗಳು ಆಗುತ್ತ ಬಂದಿದೆ, ಇಂದು ಇಡೀ ವಿಶ್ವವೇ ಕನ್ನಡ ಸಿನಿಮಾ ರಂಗದ ಕಡೆ ನೋಡುತ್ತಿದ್ದಾರೆ.
ಸಿನಿ ರಂಗದಲ್ಲಿ ಪರ ಭಾಷಾ ಸಿನಿಮಾಗಳನ್ನು ನಮ್ಮ ಭಾಷೆಯಲ್ಲಿ ರಿಮೇಕ್ ಅಥವಾ ಡಬ್ ಮಾಡುವುದು ಹೊಸದೇನಲ್ಲ. ಕನ್ನಡ ಸಿನಿ ರಂಗದಲ್ಲಿ ನಟರು ಒಂದಲ್ಲ ಒಂದು ಸಲ ಆದರೂ ಪರ ಭಾಷಾ ಸಿನಿಮಾಗಳನ್ನು ಡಬ್ ಮಾಡಿದ್ದಾರೆ, ಆದರೆ ಕೆಲವು ಚಿತ್ರಗಳು ಹಿಟ್ ಆದವು ಮತ್ತು ಕೆಲವು ಫ್ಲಾಪ್ ಆದವು. ಇದು ನಮ್ಮ ಕನ್ನಡ ಸಿನಿ ರಂಗದಲ್ಲಿ ಮಾತ್ರವಲ್ಲದೆ ಇತರ ಭಾಷೆಯ ಸಿನಿ ರಂಗದಲ್ಲೂ ಸಿನಿಮಗಳನ್ನು ಡಬ್ ಮಾಡಿದ್ದಾರೆ.
ಸಾಮಾನ್ಯವಾಗಿ ಚಿತ್ರವು ಒಂದು ಭಾಷೆಯಲ್ಲಿ ಹಿಟ್ ಆದರೆ ಸಾಕು ನಂತರದಲ್ಲಿ ಅದನ್ನು ಇತರ ಭಾಷೆಗಳಿಗೆ ಡಬ್ ಮಾಡಲಾಗುತ್ತದೆ. ಅಂತದೇ ನಮ್ಮ ಕನ್ನಡ ಭಾಷೆಯಲ್ಲಿ ಸೂಪರ್ ಹಿಟ್ ಅದ ಕೆಲವು ಚಿತ್ರಗಳನ್ನು ಪರ ಭಾಷೆಯಲ್ಲಿ ಡಬ್ ಮಾಡಿದ್ದಾರೆ. ಆದರೆ ವಿಪರ್ಯಾಸವೆಂದರೆ ನಮ್ಮ ಭಾಷೆಯಲ್ಲಿ ಹಿಟ್ ಆದರೂ ಪರ ಭಾಷೆಯಲ್ಲಿ ಇವು ಫ್ಲಾಪ್ ಆಗಿ ನಿಂತಿವೆ.
ಅಂತಹ ಸಿನಿಮಾ ಯಾವುದೆಂದು ನೀವು ಇದನ್ನು ನೋಡಿ ತಿಳ್ಕೊಳ್ಳಿ.
1. ನಾಗರಹಾವು – ಪುಟ್ಟನ ಕಣಗಾಲ್ ಅವರ ಸಿನಿಮಾಗಳಲ್ಲಿ ನನಗೆ ಬಹು ಇಷ್ಟವಾದ ಒಂದು ಚಿತ್ರ ಅಂದರೆ ಇದೇ. ನಾಗರಹಾವು ಚಿತ್ರ ಡಾ.ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರಿಗೆ ಚೊಚ್ಚಲ (ಡೆಬ್ಯುಟ್) ಚಿತ್ರವಾಗಿತ್ತು.
ತಮ್ಮ ಮೊದಲ ಸಿನಿಮಾದಲ್ಲೇ ಜನರ ಮನಸ್ಸನ್ನು ವಿಷ್ಣುವರ್ಧನ್ ಅವರು ಸುಲಭವಾಗಿ ಗೆದ್ದರು. ಸಿನಿಮಾ ಅದ್ಬುತ ಪ್ರದರ್ಶನ ಜೊತೆಗೆ ಸಿನಿ ಪ್ರಪಂಚದಲ್ಲಿ ಹೆಸರು ಮಾಡಿದು ಅಂಬರೀಷ್ ಮತ್ತು ವಿಷ್ಣುವರ್ಧನ್ ಅವರ ಸ್ನೇಹ.
ಇದೆ ಚಿತ್ರವನ್ನು ಹಿಂದಿಯಲ್ಲಿ ‘ಝೆಹ್ರೀಲಾ ಇನ್ಸಾನ್’ ಹೆಸರಿನಲ್ಲಿ, ತೆಲುಗಿನಲ್ಲಿ ‘ಕೊಡೆ ನಾಗು’ ಎಂಬ ಹೆಸರಿನಲ್ಲಿ ಮತ್ತು ಇದನ್ನು ‘ರಾಜ ನಾಗಮ್’ ಎಂಬ ಹೆಸರಿನಲ್ಲಿ ತಮಿಳಿನಲ್ಲಿ ಡಬ್ ಮಾಡಲಾಗಿದೆ. ತಮಿಳಿನಲ್ಲಿ ಹಿಟ್ ಆಗಿದ್ದರೂ ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಫ್ಲಾಪ್ ಆಯಿತು.
2. ಓಂ – ಕನ್ನಡ ಸಿನಿ ರಂಗದಲ್ಲಿ ಇಂದಿಗೂ ಮುಂದಿಗೂ ಯಾರು ಮಾಡದಂಥ ಸಾಹಸವೆಂದರೆ ಅದು “ಓಂ’ ಚಿತ್ರವೆಂದು ಹೇಳುತ್ತಾರೆ.
ನಟ Dr. ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅವರ ನಿರ್ದೇಶನದಲ್ಲಿ ಬಂದ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದಾಖಲೆಗಳನ್ನು ಮುರಿದಿದೆ. ‘ಓಂ’ ಸಿನಿಮಾ ಉಪೇಂದ್ರ ಅವರನ್ನು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕರನ್ನಾಗಿ ಮಾಡಿದ್ದಲ್ಲದೆ ಈ ಚಿತ್ರವು ಕನ್ನಡ ಚಲನಚಿತ್ರೋದ್ಯಮದ ಸಂಪೂರ್ಣ ಚಿತ್ರ ನಿರ್ಮಾಣದ ಶೈಲಿಯನ್ನು ಬದಲಾಯಿಸಿತು.
ಈ ಕನ್ನಡ ಚಲನಚಿತ್ರವನ್ನು ಎರಡು ಭಾಷೆಗಳಲ್ಲಿ ಡಬ್ ಮಾಡಲಾಗಿದು. ಒಂದು ತೆಲುಗಿನಲ್ಲಿ ‘ಯೋಗಿ’ ಮತ್ತು ಇನ್ನೊಂದು ತಮಿಳಿನಲ್ಲಿ ‘ಪರತ್ತೈ ಎಂಗಿರ ಅಳಗು ಸುಂದರಂ’. ವಿಪ್ರಯಾಸವೆಂದರೆ ಎರಡು ಭಾಷೆಗಳಲ್ಲೂ ಈ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿದೆ.
3. ಮುಂಗಾರು ಮಳೆ – ಅಂದಿಗೂ ಇಂದಿಗೂ ಮುಂಗಾರು ಮಳೆ ಎಂದರೆ ಕನ್ನಡ ಸಿನಿ ರಂಗದ ಒಂದು ಅದ್ಭುತ ಲವ್ ಸ್ಟೋರಿ ಸಿನಿಮಾ ಅಂತಲೇ ನನಗೆ ನೆನಪು. ಈ ಸಿನಿಮಾ ನೋಡಿ ಅದೆಷ್ಟು ಜನ ಪ್ರೀತಿ ಪ್ರೇಮದಲ್ಲಿ ಬಿದ್ದರು ಅಂತ ಆ ದೇವರಿಗೆ ಗೊತ್ತಿರಬೇಕು.
ಅಂದಿನ ಕಾಲಕ್ಕೆ ಈ ಚಿತ್ರದ ಕಥೆ, ನಿರ್ದೇಶನ, ನಿರ್ಮಾಣ, ಭಾವನಾತ್ಮಕ ಸಂಭಾಷಣೆಗಳು ಮತ್ತು ಗಣೇಶ್ ಮತ್ತು ಪೂಜಾಗಾಂಧಿ ನಡುವಿನ ಲವ್ ಟ್ರ್ಯಾಕ್ ನಿಜವಾಗಿಯೂ ಅದ್ಬುತವಾಗಿತು. ಈ ಚಿತ್ರವು ಆ ಸಮಯದಲ್ಲಿ ಅನೇಕ ದಾಖಲೆಗಳನ್ನು ಮುರಿದು ಗಲ್ಲಾಪೆಟ್ಟಿಗೆಯಲ್ಲಿ ಒಂದು ಸಂಚಲನ ಮಡಿದ ಸಿನಿಮಾವಾಗಿ ಉಳಿಯಿತು.
ಇದೇ ಚಿತ್ರವನ್ನು ‘ವಾನ’ ಎಂಬ ಹೆಸರಿನಲ್ಲಿ ತೆಲುಗು ಭಾಷೆಗೆ ಡಬ್ ಮಾಡಲಾಯಿತು. ವಿಪರ್ಯಾಸವೆಂದರೆ ತೆಲುಗು ಭಾಷೆಯಲ್ಲಿ ಇಂತಹ ಒಂದು ಸಿನಿಮಾ ಇದೆ ಎಂಬುವುದು ಅನೇಕರಿಗೆ ಗೊತ್ತಿಲ್ಲ. ತೆಲುಗು ಭಾಷೆಯಲ್ಲಿ ಡಬ್ ಮಾಡಲಾದ ಈ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಂಪೂರ್ಣವಾಗಿ ವಿಫಲವಾಯಿತು.
4. ಜೋಗಿ – ಶಿವಣ್ಣ ತಮ್ಮ ಸಿನಿಜೀವನದಲ್ಲಿ ಒಬ್ಬ ಗ್ಯಾಂಗ್ಸ್ಟರ್ ಆಗಿ ಮಾಡಿರುವ ಸಿನಿಮಾಗಳಲ್ಲಿ ನನಗೆ ಇಷ್ಟವಾದದು ‘ಓಂ’ ಮತ್ತು ‘ಜೋಗಿ’. ಇದು ನನಗೆ ಮಾತ್ರವಲ್ಲ ಎಲ್ಲರಿಗೂ ತುಂಬ ಹತ್ತಿರವಾದ ಸಿನಿಮಾಗಳು ಹೌದು.
ಜೋಗಿ ಸಿನಿಮಾದಲ್ಲಿ ಶಿವಣನನ್ನು ಒಂದು ಮಾಸ್ ಅವತರದಲ್ಲಿ ಅದೇ ರೀತಿಯಾಗಿ ಒಂದು ಎಮೋಷನಲ್ ನಟನೆಯೊಂದಿಗೆ ಪ್ರೇಕ್ಷಕರ ಮನ ಗೆದ್ದರು. ತಾಯಿಯ ಮಮತೆ ಮುಂದೆ ಶಿವಣ್ಣ ಅವರ ಮಾಸ್ ಆಕ್ಟಿಂಗ್ ಅನ್ನು ಮರೆತು ಸಿನಿಮಾವನ್ನು ನೋಡಿದವರು ಇದ್ದಾರೆ.
ಇದೆ ಸೆಂಟಿಮೆಂಟ್ ಪರ ಭಾಷೆಯಲ್ಲಿ ಹಿಟ್ ಆಗುತ್ತೆ ಎಂದು ಈ ಚಿತ್ರವನ್ನು ತೆಲುಗಿನಲ್ಲಿ ‘ಯೋಗಿ’ ಮತ್ತು ತಮಿಳಿನಲ್ಲಿ ‘ಪರತ್ತೈ ಎಂಗಿರ ಅಳಗು ಸುಂದರಂ’ ಎಂದು ರೀಮೇಕ್ ಮಾಡಲಾಯಿತು. ಆದರೆ ಇದು ಎರಡೂ ಭಾಷೆಗಳಲ್ಲಿ ಫ್ಲಾಪ್ ಚಿತ್ರವಾಗಿ ಉಳಿಯಿತು.