ಇತ್ತೀಚಿನ ಕನ್ನಡ ಸಿನಿ ರಂಗ ಬಾರಿ ಸದ್ದು ಮಾಡುತ್ತಿದೆ. ಕೆಲವು ವರ್ಷಗಳಿಂದ ನಿರ್ಮಾಣಗೊಂಡ ಚಲನ ಚಿತ್ರಗಳು ನೋಡುಗರಿಗೆ ಒಂದು ಹೊಸ ಅನುಭವವನ್ನು ಕೊಡುತ್ತಿದೆ. ಸ್ಯಾಂಡಲವುಡ್ ಸಿನಿ ಪ್ರಪಂಚ ಭಾರತದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಸಿನಿ ಜಗತ್ತಿನಲ್ಲಿಯೂ ತನ್ನದೆ ಅದಂತಹ ಟ್ರೇಡ್ಮಾರ್ಕ್ ನ್ನು ಮಾಡಿಕೊಂಡಿದ್ದೆ. ಅದಕ್ಕೆ ಇವು ಕೆಲವು ಮುಖ್ಯ ಕಾರಣಗಳು.
- ತೆರೆಯ ಮೇಲೆ ಕಾಣಿಸಿಕೊಂಡ ಹೊಸ ಸಿನಿಮಾಗಳು – ಕಾಂತಾರ, ಗರುಡ ಗಮನ ವೃಷಭ ವಾಹನ, ಅವನೇ ಶ್ರೀಮನ್ನಾರಾಯಣ ಮತ್ತು ಇನ್ನು ಹಲವು ಸಿನಮಾಗಳು ನೋಡುಗರಿಗೆ ಒಂದು ಹೊಸ ಅನುಭಾವವನ್ನು ಕೊಡುತ್ತಿವೆ. ಇದರ ಮೂಲಕ ನೋಡುಗರು ಸಿನಿಮಾಗಳಲ್ಲಿ ಸದಾ ಒಂದು ಹೊಸತನ್ನು ನೋಡಲು ಬಯಸುತ್ತಿದ್ದರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕನ್ನಡ ಚಲನಚಿತ್ರ ನಿರ್ದೇಶಕರು ಭಿನ್ನವಾದ ಚಿತ್ರಗಳನ್ನು ಮಾಡಲು ಪ್ರಾರಂಭಿಸಿದರೆ. ಇಂತಹ ಚಿತ್ರಗಳಿಂದ ಕನ್ನಡ ಚಲನಚಿತ್ರೋದ್ಯಮವನ್ನು ಪ್ರಸಿದ್ಧವಾಗುವಂತೆ ಮಾಡಿದೆ.
- ದೊಡ್ಡ ಬಜೆಟ್ ಚಲನಚಿತ್ರಗಳು – ಇತ್ತೀಚಿನ ಎಲ್ಲಿ ನೋಡಿದರು ಸದ್ದು ಮಾಡುತ್ತಿರುವ ದೊಡ್ಡ ಬಜೆಟ್ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಮಿಂಚುತ್ತಿವೆ. ಇಂತಹ ಚಿತ್ರಗಳು ಅದ್ಬುತ ಗ್ರಾಫಿಕ್ಸ್, ಮತ್ತು ಸ್ಟಾರ್ ಕಾಸ್ಟ್ ಮುsಕ ಒಂದು ಅದ್ಬುತ ಸಿನಿಮಾ ಮೂಡಿಬರುತ್ತದೆ. ಹೆಚ್ಚಿನ ಪ್ರಚಾರದಿಂದ ಸಾರ್ವಜನಿಕರಿಂದ ಹೆಚ್ಚಿನ ಸ್ಥಾನಮಾನ ಸಹ ಸಿಗುತ್ತದೆ. ಕಬ್ಜಾ, ಕೆಜಿಎಫ್ 1&2, ಕುರುಕ್ಷೇತ್ರ ಮತ್ತು ವಿಕ್ರಾಂತ್ ರೋಣಾ ಇಂತಹ ಕೆಲವು ಸಿನಿಮಾಗಳಾಗಿವೆ.
- ವೈವಿಧ್ಯಮಯ ಪಾತ್ರಧಾರಿಗಳು – ನಟ ಶಿವರಾಜ್ ಕುಮಾರ್ ಈ ಮಾಧ್ಯ ಕಾಲದಲ್ಲಿ ಸಂಪೂರ್ಣವಾಗಿ ಹೊಸ ಪತ್ರದ ಪ್ರಯೋಗಗಳನ್ನು ಮಾಡುತ್ತಿದ್ದಾರೆ, ಇದರ ನಡುವೆ ಸ್ಟಾರ್ ನಟರಾದಂತಹ ದರ್ಶನ್ ಮತ್ತು ಸುದೀಪ್ ತಮ್ಮ ‘ಕಮರ್ಷಿಯಲ್’ ಸಿನಿಮಾದ ವೃತ್ತಿಜೀವನವನ್ನು ಮತ್ತು ಕೆಲವು ಬಾರಿ ಹೊಸ ಆಸಕ್ತಿದಾಯಕ ಪಾತ್ರಗಳು ಮತ್ತು ವಿಷಯಗಳೊಂದಿಗೆ ಸಿನಿಮಾ ಮಾಡಲು ಪ್ರಾರಂಭಿಸಿದ್ದಾರೆ. ಕುರುಕ್ಷೇತ್ರ, ಪೈಲ್ವಾನ್ ಅಥವಾ ಮೈತ್ರಿ ಕೂಡ ಪ್ರೇಕ್ಷಕರ ಬೇಡಿಕೆಯನ್ನು ಅರ್ಥಮಾಡಿಕೊಂಡಿದ್ದಾರೆ.
- ತಂತ್ರಜ್ಞಾನದ ವಿಕಾಸ – ಡಿಜಿಟಲ್ ಕ್ಯಾಮೆರಾಗಳು ಬಳಕೆಗೆ ಬಂದ ನಂತರದಲ್ಲಿ ಕಡಿಮೆ ಸಮಯ ಮತ್ತು ವೆಚ್ಚದಲ್ಲಿ ಒಂದು ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆ ಹಿಡಿಯಲು ನಮ್ಮಗೆ ಅನುವು ಮಾಡಿಕೊಡುತ್ತದೆ. ಡಿಜಿಟಲ್ ಎಡಿಟಿಂಗ್ ಸಾಫ್ಟ್‌ವೇರ್ ಗಲ ಸಹಾಯದಿಂದ ಎಡಿಟಿಂಗ್ ಸಹ ಬದಲಾಗಿದೆ, ಇದು ವೇಗವಾಗಿ ಮತ್ತು ಹೆಚ್ಚು ನಿಖರವಾದ ಸಿನಿಮಾವನ್ನು ಮಾಡಲು ಅನುವು ಮಾಡಿಕೊಡುತ್ತದೆ. ತಂತ್ರಜ್ಞಾನವು ಮುಂದುವರೆದಂತೆ, ಚಲನಚಿತ್ರಗಳು ಒಳಗೊಂಡಂತೆ ಮನರಂಜನಾ ಉದ್ಯಮವು ತ್ವರಿತವಾಗಿ ಅಭಿವೃದ್ಧಿ ಹೊಂದುತಿದ್ದೆ. ಪ್ರಭಾಸ್ ಅವರ ‘ಸಲಾರ್ ‘ಡಾರ್ಕ್ ಸೆಂಟ್ರಿಕ್ ಥೀಮ್’ ತಂತ್ರಜ್ಞಾನವನ್ನು ಬಳಸಿದ ಮೊದಲ ಭಾರತೀಯ ಚಲನಚಿತ್ರವಾಗಿದೆ. ಟೆನೆಟ್, ಬ್ಯಾಟ್‌ಮ್ಯಾನ್ ಟ್ರೈಲಾಜಿ ಮತ್ತು ಮ್ಯಾಟ್ರಿಕ್ಸ್‌ನಂತಹ ಹಾಲಿವುಡ್ ಚಲನಚಿತ್ರಗಳನ್ನು ಈ ತಂತ್ರಜ್ಞಾನವನ್ನು ಬಳಸಿ ಚಿತ್ರೀಕರಿಸಲಾಗಿದೆ.