ನೋಡು ನೋಡುತ್ತಲೇ ಸೆಪ್ಟೆಂಬರ್ ತಿಂಗಳು ಬಂದೇಬಿಡ್ತು. ಯುವಕರಿಗೆ ಕೇಳಿ ಮಾಡಿಸಿದ ಹಬ್ಬ ಎಂದರೆ ಗಣೇಶನ ಹಬ್ಬ. ಈ ಹಬ್ಬ ಬಂತು ಅಂದರೆ ಸಾಕು ಗಲ್ಲಿಯಲ್ಲಿ ಇರುವ ಚಿಕ್ಕ ಹುಡುಗರಿಂದ ಮದುವೆಯಾಗಿ ತಂದೆಯಾದವರಿಗೂ ಒಂದು ಉತ್ಸಾಹ. ವಯಸ್ಸಿನ ಜೊತೆ ಸಂಬಂಧವಿಲ್ಲದೆ ಮೊದಲನೆಯದಾಗಿ ಎಲ್ಲರು ಅವರವ ಗಲ್ಲಿಯಲ್ಲಿ ಒಂದು ವಿಶಾಲವಾದ ಖಾಲಿ ಜಾಗವೊಂದನ್ನು ಹುಡುಕುತ್ತಾರೆ. ಆ ಜಗದಲ್ಲಿ ದೇವರಿಗೆಂದು ಚಪರವನ್ನು ಹಾಕಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜೆ ಮಾಡುತ್ತಾರೆ.
ಇವೆಲ್ಲವೂ ಒಂದು ಕಡೆ ನಡೆಯುತ್ತಿದ್ದರೆ ಮತ್ತೊಂದೆಡೆ ಯಾವ ಹಾಡುಗಳನ್ನು ಅಕಬೇಕು ಎಂಬುದು ನಮ್ಮ ಹುಡಗರ ಯೋಚಿಸುತ್ತಿರುತ್ತಾರೆ. ಹಬ್ಬಕು ಮುನ್ನ ಎಲ್ಲಿ ಕೇಳದ ಯಾರು ಮಾತನಾಡದ ಹಾಡುಗಳೆಲ್ಲ ಹಬ್ಬದ ದಿನ ಗಲ್ಲಿ ಗಲ್ಲಿಯಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತೆ. ಎಷ್ಟೇ ಹೊಸ ಹಾಡುಗಳು ನವ್ವು ಕೇಳಿದ್ದರು ಕೆಲವೊಂದು ಕನ್ನಡ ಹಾಡುಗಳು ಇಂದಿಗೂ ಮುಂದಿಗೂ ನಾವು ಮರೆಯಲು ಸಾಧ್ಯವಿಲ್ಲ.
ಗಣೇಶನ ಹಬ್ಬದಂದು ನಮ್ಮಗೆ ತುಂಬ ನೆನಪಾಗುವ ಕೆಲವು ಹಾಡುಗಳು ಇಲ್ಲಿವೆ ನೋಡಿ:
1. ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿದ ಕುಟುಂಬ ಚಿತ್ರದ ‘ಕಾಡಿನಲ್ಲಿ ಮೀಸೆಯಿಟ್ಟೆ, ಮೀಸೆಯಲ್ಲಿ ದ್ವೇಷವಿಟ್ಟೆ, ನಾಡಿನಲ್ಲಿ ರೋಷವಿಟ್ಟೆ ಕಿಲಾಡಿ, ಜೈ ಗಣೇಶ’ ಎಂಬ ಹಾಡು.
ನನ್ನ ಬಾಲ್ಯದಿಂದಲೂ ಗಣೇಶ ಹಬ್ಬದಂದು ಈ ಹಾಡನ್ನು ಕೇಳುತ್ತ ಬಂದಿದ್ದೇನೆ ಮತ್ತು ನಾನು ಈ ಹಾಡನ್ನು ಕೇಳಿದಾಗ ಆ ಬಾಲ್ಯದ ದಿನಗಳು ನೆನಪಾಗುತ್ತವೆ.
2. ೧೯೯೦ ರಲ್ಲಿ ಮಾಸ್ಟರ್ ಸಂಜಯ್ ಅಭಿನಯದಲ್ಲಿ ಬಂದ ‘ಶಬರಿಮಲೈ ಸ್ವಾಮಿ ಅಯ್ಯಪ್ಪ’ ಚಿತ್ರದಲ್ಲಿ ‘ನೀ ನಮ್ಮ ಗೆಲುವಾಗಿ ಬಾ ಹಾಡು’ ಅಂದಿನಿಂದಲ್ಲು ಸಕತ್ ಫೇಮಸ್.
3. ೨೦೦೨ ರಲ್ಲಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ನಟಿಸಿರುವ ‘ಏಕದಂತ’ ಚಲನ ಚಿತ್ರದ ‘ಗಣಪತಿ ಬಪ್ಪಾ ಮೋರಿಯಾ’ ಹಾಡು.
4. ೨೦೦೩ ರಲ್ಲಿ ಬಂದ ‘ಶ್ರೀಕಾಳಿಕಾಂಬ’ ಚಿತ್ರದಲ್ಲಿ ಬರುವ ‘ಗಣ ಗಣ ಗಣೇಶ ಹಾಡು’ ಈ ಹಾಡು ಕೇಳಲು ಮಾತ್ರವಲ್ಲದೆ ನೋಡಲು ಅಷ್ಟೇ ಸುಂದರವಾಗಿದೆ.
5. ೨೦೦೧ ರಲ್ಲಿ ಬಂದ ಡಾ. ಶಿವರಾಜ್ ಕುಮಾರ್ ಅಭಿನಯದ ‘ಅಸುರ’ ಚಿತ್ರದ ‘ಮಹಾ ಗಣಪತಿ’ ಅಂದು ಇಂದು ಅದೇ ರೀತಿ ನಮ್ಮ ಮನದಲ್ಲಿ ನಿಂತಿದ್ದೆ.
ಇವೆಲವು ಸಿನಿಮಾ ಹಾಡುಗಳಲ್ಲಿ ನಮ್ಮಗೆ ಗೊತ್ತಿರುವ ಹಾಡುಗಳು. ಆದರೆ ಸಿನಿಮಾಗಳಲ್ಲಿ ಬರದೆ ಇರುವ ಕೆಲವೊಂದು ಆಲ್ಬಮ್ ಸಾಂಗ್ಸ್ ಸಿನಿಮಾ ಹಾಡುಗಳಷ್ಟೇ ಫೇಮಸ್ ಆಗಿವೆ. ಅಂತ ಕೆಲವೊಂದು ಹಾಡುಗಳು ಇಲ್ಲಿವೆ ನೋಡಿ:
1. ಶರಣು ಶರಣಯ್ಯ ಶರಣು ಬೆನಕ.
2. ಭಾದ್ರಪದ ಶುಕ್ಲದ ಚೌತಿಯಂದು.
3. ಗಜಮುಖನೆ ಗಣಪತಿಯೇ ನಿನಗೆ ವಂದನೆ.