ಮುಂಗಾರು ಬರುತ್ತಿದ್ದಂತೆ ನಮ್ಮ ಪಶ್ಛಿಮ ಘಟ್ಟಗಳು ಹಚ್ಚು ಹಸಿರಿನಿಂದ ತುಂಬಿ ಪ್ರಕೃತಿಯನ್ನು ನೋಡಲು ಬಹು ಸುಂದರವಾಗಿರುತ್ತದೆ. ಸ್ವಲ್ಪ ಸಮಯ ಸಿಕ್ಕರೆ ಸಾಕು ಎಲ್ಲಿಗಾದರೂ ಪ್ರಯಾಣ ಮಾಡಬೇಕು, ಹೋಗಿ ಪ್ರಕೃತಿಯ ಮಡಿಲಿನಲ್ಲಿ ನಿಂತು ಅದರ ಸ್ವಾದವನ್ನು ಸವಿಯಬೇಕು ಎಂದು ಈಗಿನ ಕಾಲದ ಯುವಕರಲ್ಲಿ ಇರುವ ಉತ್ಸುಕ ಅಷ್ಟೂ ಇಷ್ಟೆಲ್ಲಾ ರಾಜೆ ಬಂದ್ರೆ ಸಾಕು ಈ ನಗರ ಜೀವನದಿಂದ ದೂರ ಉಳ್ಳಿಯಾಳು ಹೊರಗೇ ಹೋಗಬೇಕು ಪ್ರಯಾಣ ಮಾಡಬೇಕು ಎಂದು ಕಾಯುತ್ತಿರುತ್ತಾರೆ.
ನೀವು ಪ್ರಯಾಣ ಮಾಡಲು ನೋಡುತ್ತಿದ್ದರೆ ನೀವು ನೋಡಲೇಬೇಕಾದ 7 ಅದ್ಬತ್ ತಾಣಗಳು ಇಲ್ಲಿವೆ ನೋಡಿ.
1. ಕೊಡಗು – ಭಾರತದ ಸ್ಕಾಟ್ಲೆಂಡ್ ಎಂದೇ ಪ್ರಸಿದ್ದವಾಗಿರುವ ಕೊಡಗು ಮಳೆಗಾಲದಲ್ಲಿ ನೋಡಲು ಎರಡು ಕಣ್ಣುಗಳು ಸಾಕಾಗುವುದಿಲ್ಲ . ಮಂಜಿನಲ್ಲಿ ಸದಾಕಾಲ ಪಶ್ಚಿಮ ಘಟ್ಟಗಳ ನಡುವೆ ಕಂಗೊಳಿಸುವ ಕೊಡಗು ಮಾನ್ಸೂನ್ ಕಾಲದಲ್ಲಿ ಮಾತ್ರವಲ್ಲದೆ ಸದಾ ಕಾಲ ಪ್ರವಾಸಿಗರೊಂದಿಗೆ ತುಂಬಿರುತ್ತದೆ. ಪ್ರವಾಸಕ್ಕೆ ಮಡಿಕೇರಿಗೆ ಭೇಟಿ ನೀಡಿದಾರೆ ಇಲ್ಲಿ ನೋಡಬಹುದಾದಂತಹ ಇನ್ನು ಇತರ ಪ್ರವಾಸಿ ತಾಣಗಳೆಂದರೆ ಅಬ್ಬೆ ಜಲಪಾತ, ನಾಮ್ಡ್ರೋಲಿಂಗ್ ಮಠ, ಮಡಿಕೇರಿ ಕೋಟೆ, ಗಾಳಿಬೀಡು ಟ್ರೆಕ್ಕಿಂಗ್, ಚೆಟ್ಟಲಿ, ದುಬಾರೆ ಆನೆ ತರಬೇತಿ ಶಿಬಿರ, ಚಿಂಗಾರ ಜಲಪಾತಗಳು, ಮಾಂದಲಪಟ್ಟಿ, ತಲಕಾವೇರಿ, ಮಡಿಕೇರಿ ಕೋಟೆ, ಇವು ಇಲದಲಿನ ಪ್ರಸಿದ್ಧವಾಗಿದೆ. ಪ್ರವಾಸಿ ತಾಣಗಳ ಸುತ್ತಲು ವಸತ್ತಿಗೆ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಹೋಮ್ ಸ್ಟೇಗಳು ಇರುವುದರಿಂದ ಪ್ರವಾಸಿಗರಿಗೆ ಬಹಳ ಅನುಕುಲವಾಗಿದೆ.
ಬೆಂಗಳೂರಿನಿಂದ 241kmರಲ್ಲಿ ಇರುವ ಕೊಡಗಿಗೆ ರೈಲು, ಬಸ್, ಇಲ್ಲದಿದ್ದರೆ ಮೈಸೂರಿನವರೆಗೆ ವಿಮಾನದಲ್ಲಿ ಹೋಗಿ ಅಲ್ಲಿಂದ ಮತ್ತು ಇತರ ಸಾರಿಗೆ ವ್ಯವಸ್ಥೆಗಳು ಮೂಲಕ ಕೂರ್ಗ್ ತಲುಪಲು ಸಧ್ಯವಾಗುತ್ತದೆ.
2. ಆಗುಂಬೆ – ಆಗುಂಬೆ ಪಶ್ಚಿಮ ಘಟ್ಟದಲ್ಲಿರುವ ಒಂದು ಪ್ರವಾಸಿ ತಾನ. ಇಲ್ಲಿನ ಪ್ರಕೃತಿ ಸೌಂದರ್ಯ ಅದ್ವಿತೀಯವೆಂದೆ ಹೇಳಬಹುದು. “ದಕ್ಷಿಣದ ಚಿರಾಪುಂಜಿ” ಅಥವ “ಹಸಿರು ಹೊನ್ನು” ಎಂದೂ ಕರೆಯಲ್ಪಡುವ ಆಗುಂಬೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸಮೀಪದಲ್ಲಿದೆ. ಇಲಿಗೆ ಹೆಚ್ಚಿನ ಪ್ರವಾಸಿಗರು ಆಗುಂಬೆಯ ಕಾಡುಗಳ ಮೂಲಕ ಟ್ರೆಕ್ಕಿಂಗ್ ಮಾಡಲು ಮತ್ತು ಜಲಪಾತಗಳನ್ನು ನೋಡಲು ಭೇಟಿ ನೀಡುತ್ತಾರೆ. ಕೂಡ್ಲು ತೀರ್ಥ ಜಲಪಾತ ಮತ್ತು ನಿಶಾನಿ ಗುಡ್ಡಕ್ಕೆ ಟ್ರೆಕ್ಕಿಂಗ್ ಮಾಡುವುದು ಇಲ್ಲಿನ ಪ್ರವಾಸಿಗರಿಗೆ ಒಂದು ಖುಷಿ ಕೊಡುತ್ತದೆ. ಬೆಂಗಳೂರಿನಿಂದ 347kmರಲ್ಲಿ ಇರುವ ಈ ಪ್ರದೇಶಕ್ಕೆ ರೈಲು, ಬಸ್ ಮೂಲಕ ತಲುಪಲು ಸಧ್ಯವಾಗುತ್ತದೆ.
3. ಹಂಪಿ – ತುಂಗಭದ್ರಾ ನದಿಯ ದಡದಲ್ಲಿರುವ ಹಂಪಿ ತಾಣ ಅತ್ಯಂತ ಪ್ರಸಿದ್ದವಾಗಿರುವ ತಾಣವಾಗಿದೆ. ಇದ್ದು ಕೇವಲ ಪ್ರವಾಸಿ ತಾಣವಲ್ಲದೆ ಸುತ್ತು ಇರುವ ದೇಗುಲಗಳಿಂದ ಇದ್ದು ಪುಣ್ಯ ಕ್ಷೇತ್ರವಾಗಿ ಪ್ರವಾಸಿಗಿರನ್ನು ಸೆಳೆಯುತ್ತದೆ. ಪ್ರಸಿದ್ಧ ಪ್ರವಾಸ ಸ್ಥಳಗಳಲ್ಲಿ ಹಂಪಿಯ ಸ್ಥಾನವೂ ಒಂದು, ಇಲ್ಲೆ ನೋಡಬಹುದಾದ ಇನ್ನು ಅಲವು ಪ್ರದೇಶಗಳೆಂದರೆ ವಿಠಲ ಸ್ವಾಮಿ ದೇವಸ್ಥಾನ, ಹಿಪ್ಪಿ ದ್ವೀಪ, ಹಂಪಿ ಸೇರಿದಂತೆ ಕ್ವೀನ್ಸ್ ಬಾತ್, ವಿರೂಪಾಕ್ಷ ಸ್ವಾಮಿ ದೇವಸ್ಥಾನ, ಮತ್ತು ಲೋಟಸ್ ಪ್ಯಾಲೇಸ್. . ಬೆಂಗಳೂರಿನಿಂದ ಹಂಪಿಗೆ 343 ಕಿ.ಮೀ ಇರುವುದರಿಂದ ಕೇವಲ ಆರು ತಾಸಿನಲ್ಲಿ ತಲುಪಬಹುದು
4. ಚಿಕ್ಕಮಗಳೂರು – ಚಿಕ್ಕಮಗಳೂರು ಪ್ರವಾಸಿ ತಾಣ ನಮ್ಮ ಕರ್ನಾಟಕದಲ್ಲಿನ ಒಂದು ದೊಡ್ಡ ಪ್ರಮುಖ ಆಕರ್ಷಣೀಯ ಪ್ರವಾಸಿ ತಾಣವಾಗಿದೆ ಉಳಿದಿದೆ. ಸದ್ದಕಾಲ ಹಚ್ಚು ಹಸಿರಿನಿಂದ ತುಂಬಿದ ಹಚ್ಚಹಸಿರಿನ ಗಿರಿಧಾಮಗಳು, ನಡುವಿನ ಬೆಟ್ಟಗಳು, ಮತ್ತು ಜಲಪಾತಗಳನ್ನು ಹೊಂದಿರುವ ಚಿಕ್ಕಮಗಳೂರು ಪ್ರವಾಸಿಗರಿಗೆ ಅಚ್ಚು ಮೇಚ್ಚಿನ ತಾಣವಾಗಿ ನಿಂತಿದ್ದೆ. ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ಪ್ರವಾಸ ಕೈಗೊಳ್ಳಲು ಚಿಕ್ಕಮಗಳೂರು ಒಂದು ಒಳ್ಳೆಯ ತಾಣವಾಗಿದೆ. ಚಿಕ್ಕಮಗಳೂರಿನ ಪ್ರಮುಖ ದೃಶ್ಯವೀಕ್ಷಣೆಯ ಸ್ಥಳಗಳೆಂದರೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಮುಳ್ಳಯ್ಯನಗಿರಿ, ಬಾಬಾ ಬುಡನ್‌ಗಿರಿ, ಕಾಫಿ ತೋಟಗಳು, ಭದ್ರಾ ವನ್ಯಜೀವಿ ಅಭಯಾರಣ್ಯ, ಭದ್ರಾ ನದಿಯಲ್ಲಿ ರಾಫ್ಟಿಂಗ್. ಬೆಂಗಳೂರಿನಿಂದ 243kmರಲ್ಲಿ ಇರುವ ರೈಲು, ಬಸ್ ಮೂಲಕ ತಲುಪಲು ಸಧ್ಯವಾಗುತ್ತದೆ.
5. ಜೋಗ ಜಲಪಾತ – ಜೋಗ ಜಲಪಾತ ನಮ್ಮ ನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿದೆ. ಜೋಗನಲ್ಲಿರುವ ಜಲಪಾತ ಇದು ಭಾರತದ ಎರಡನೇ ಅತಿ ದೊಡ್ಡ ಎತ್ತರದ ಜಲಪಾತವಾಗಿದ್ದು ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ಮಾಡುವ ಜಲಪಾತ ಇದಾಗಿದೆ. ಶರಾವತಿ ನದಿಯು ಇಲ್ಲಿನ ಗುಡ ಬಂಡೆಗಳ ಮೇಲಿನಿಂದ ಬರೋಬ್ಬರಿ 253 ಮೀಟರ್ ಎತ್ತರದಿಂದ ಆಳಕ್ಕೆ ಧುಮ್ಮಿಕ್ಕುವ ಒಂದು ರಮಣೀಯವಾದ ದೃಶ್ಯವನ್ನು ನೋಡಿ ಕಣ್ತುಂಬಿಕೊಳ್ಳಲು ನಮ್ಮಗೆ ದೇವರು ಕೊಟ್ಟ ಎರಡು ಕಣ್ಣುಗಳು ಸಾಲವು ಎಂದರೆ ತಪ್ಪಿಲ್ಲ. ಶರಾವತಿ ನದಿಯು ಜೋಗ ಜಲಪಾತ ದಲ್ಲಿ ರಾಜ, ರಾಣಿ ರೋರರ್, ಮತ್ತು ರಾಕೆಟ್ ಎಂಬ ನಾಲ್ಕು ಹೆಸರುಗಳ ಪ್ರಮುಖ ಜಲಪಾತಗಳನ್ನು ಸೃಷ್ಟಿಸುತ್ತದೆ.
ಕನ್ನಡದ ಹಲವು ಹಾಡುಗಳಲ್ಲಿ, ಮತ್ತು ಇನ್ನು ಹಲವು ಚಲನಚಿತ್ರಗಳಲ್ಲಿ ಜೋಗ ಜಲಪಾತದ ಉಲ್ಲೇಖವಿದೆ. “ಜೋಗದ ಸಿರಿ ಬೆಳಕಿನಲ್ಲಿ” ಎಂದು ಪ್ರಾರಂಭಗೊಳ್ಳುವ ನಿತ್ಯೋತ್ಸವ ಹಾಡು ಮತ್ತು ಮುಂಗಾರು ಮಳೆ ಚಲನಚಿತ್ರದಲ್ಲಿ ಜೋಗ ಜಲಪಾತದ ಕೆಲವು ರಮಣೀಯ ದೃಶ್ಯಗಳಿವೆ.