ಟೆರಾಕೋಟ ವಿನ್ಯಾಸಕಿ, ಬರಹಗಾರ್ತಿ, ವಾಯ್ಸ್ ಓವರ್ ಆರ್ಟಿಸ್ಟ್ ಆಗಿರುವ ನೀಲಿ ಲೋಹಿತ್ ಅವರು ತಾವು ಮಾಡುವ ಮಣ್ಣಿನ ಆಭರಣಗಳಿಗೆ ತಾವೇ ಮಾಡೆಲಿಂಗ್ ಮಾಡುವ ಇವರಿಗೆ ಎರಡನೇ ಜೀವನ ನೀಡಿದ್ದು ಮಣ್ಣು. ಈ ಛಲವಾದಿ ಹೆಣ್ಣು ಮಗಳ ಹೋರಾಟದ ಹಾದಿಯ ಕಥೆ ನಿಮ್ಮ ಓದಿಗಾಗಿ…
ಮೂಲತಃ ಮೈಸೂರಿನವರಾದ ನೀಲಿ ಅವರ ಜೀವನದಲ್ಲಿ ಕೊರೋನಾ ದೊಡ್ಡ ಬದಲಾವಣೆಯನ್ನೇ ತಂದಿತ್ತು. ಅತ್ಯಂತ ಖುಷಿಯಿಂದ ಸಾಗುತ್ತಿದ್ದ ಅವರ ಸಂಸಾರದ ಕೊಂಡಿ ಕಳಚಿಕೊಂಡಿತು. ಕೊರೋನೋದಲ್ಲಿ ನೀಲಿ ವರು ತಮ್ಮ ಪತಿಯನ್ನು ಕಳೆದುಕೊಂಡರು. ಕೈಯಲ್ಲಿ ಏನು ಇಲ್ಲದ ಪರಿಶೀತಿಯಲ್ಲಿ ಅವರ ಕೈ ಹಿಡಿದ್ದು, ಅವರ ಕಲೆ.
ಮಣ್ಣಿನಿಂದಲೇ ಬದುಕು ಕಟ್ಟಿಕೊಂಡ ಈ ಕಲೆಗಾರ್ತಿ ತಮ್ಮ ಬದುಕನ್ನು ಮತ್ತು ಮಣ್ಣಿನೊಂದಿಗಿನ ಬಂಧದ ಬಗೆ ಹೇಳಿದ್ದು ಹೀಗೆ…