ಮಿಲನಾ ನಾಗರಾಜ್ ಅವರಿಗೆ ಡಾರ್ಲಿಂಗ್ ಕೃಷ್ಣ ಅವರು ಲಕ್ಕಿ ಚಾರ್ಮ್. ಆದರೆ ಅವರ ಜೋಡಿಗೆ ಅಂತ ಬರೆದ 20 ರಿಂದ 30 ಕಥೆಗಳನ್ನು ಅವ್ರು ರಿಜೆಕ್ಟ್ ಮಾಡಿದ್ದು, ಕೃಷ್ಣ ಅವರ ಜೊತೆ ಸಿನಿಮಾ ಮಾಡಲು ಅವ್ರಿಗೆ ಇಷ್ಟ ಇಲ್ಲವೆಂದು ಮಿಲನ್ ನಾಗರಾಜ್ ಹೇಳಿಕೊಂಡಿದ್ದಾರೆ.
‘ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಕೃಷ್ಣನಿಗಾಗಿ ಬರೆದ ಕಥೆ, ಪ್ರೇಕ್ಷಕರಿಗೆ ಇದು ಖಂಡಿತ ಇಷ್ಟ ಆಗುತ್ತೆ, ಇದು ನಿಮ್ಮ ನಮ್ಮ ಕಥೆ ಅಂದರೆ ನಮೆಲ್ಲರ ಕಥೆ. ಎಲ್ಲರೂ ಇದನ್ನು ನೋಡಿ ಎಂಜಾಯ್ ಮಾಡ್ತಾರೆ ಎಂದು ಚಿತ್ರದ ನಿರ್ದೇಶಕ ಶಶಾಂಕ್ ಹಂಚಿಕೊಂಡಿದ್ದಾರೆ. ಮಿಲನ ನಾಗರಾಜ್ ಮತ್ತು ಕೃಷ್ಣ ಅವರು ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸಿ ಮತ್ತೆ ಅವ್ರದೇ ಕಾಂಬಿನೇಷನಲ್ಲಿ ಮಾಡಲು ಅವರು ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ. ಆದರೆ ಶಶಾಂಕ್ ಅವರು ಈ ಸಿನಿಮಾದ ಕಥೆ ಹೇಳಿದ ನಂತರ ಅವರು ಈ ಪಾತ್ರ ಮಾಡಲು ಒಪ್ಪಿಕೊಂಡರು. ಆದರೆ ಈ ಪಾತ್ರ ಕಷ್ಟ ಅಂತ ಮೊದಲಿನಲ್ಲಿ ಅಂದುಕೊಂಡರು ನಂತರ ಸಿನಿಮಾ ಶೂಟಿಂಗ್ ಅನ್ನು ನೀರು ಕುಡಿದಷ್ಟು ಸುಲಭವಾಗಿ ಮುಗಿಸಿದರು ಎಂದು ಮಿಲನಾ ನಾಗರಾಜ್ ಹೇಳಿಕೊಂಡರು.
ನಮ್ಮಲ್ಲಿ ಪ್ರೇಕ್ಷಕರಿಗೆ ಹೇಳಲು ಉತ್ತಮವಾದ ಕಥೆ ಇರುವುದರಿಂದ ಮಿಲಾನಾ ಅವರು ಈ ಚಿತ್ರವನ್ನು ಎರಡು ಭಾಗಗಳಲ್ಲಿ ಮಾಡಲು ಸೂಚಿಸಿದರು. ಮುಂದೆಗೆ ಈ ಕಥೆಯನ್ನು ಇನ್ನಷ್ಟು ವಿಭಿನ್ನವಾಗಿ ಹೇಳಲು ಆಲೋಚನೆ ಬಂದರೆ, ಅದನ್ನು ಪರಿಗಣಿಸಿ ಈ ಚಿತ್ರದ ಮುಂದಿನ ಭಾಗದೊಂದಿಗೆ ಬರುತ್ತೇನೆ ಎಂದು ನಿರ್ದೇಶಕ ಶಶಾಂಕ್ ಇಲ್ಲಿ ಹೇಳಿದ್ದಾರೆ.