ಕನ್ನಡ ಭಾಷೆಯಲ್ಲಿ ನಾವು ಪ್ರತಿದಿನ ಕನಿಷ್ಠ 10 ಚಿತ್ರಗಳ ಬಿಡುಗಡೆಯನ್ನು ನೋಡಬಹುದು. ಅದರಲ್ಲಿ ಕೆಲವೊಂದು ಸೂಪರ್ ಹಿಟ್ ಆದ್ರೆ, ಇನ್ನು ಸ್ವಲ್ಪ ಆವರೇಜ್ ಹಿಟ್ ಮತ್ತೆ ಇನ್ನು ಸ್ವಲ್ಪ ಫ್ಲಾಪ್ ಸಹ ಆಗಬಹುದು.
ಕೆಲವರಿಗೆ ಸಿನಿಮಾ ಹಿಟ್ ಆಯ್ತಾ ಇಲ್ವಾ ಅನ್ನುವ ಚಿಂತೆ. ಆದರೆ ಕೆಲವರಿಗೆ ಸಿನಿಮಾದ ಕ್ಯಾರೆಕ್ಟರ್ ಎಷ್ಟು ಚಂದ ಇತ್ತು ಎಂಬುವುದು ಚಿಂತೆ. ಕೆಲವೊಂದು ಸಲ ಸಿನಿಮಾ ಫ್ಲಾಪ್ ಆಗಬಹುದು, ಅಥವಾ ನಮ್ಮಗೆ ಸಿನಿಮಾ ಇಷ್ಟವಾಗದೆ ಇರಬಹುದು. ಆದರೆ ಸಿನಿಮಾದ ಕೆಲವೊಂದು ಪಾತ್ರಗಳು ನಮ್ಮನ್ನ ತುಂಬಾ ಆಕರ್ಷಿಸುತ್ತದೆ.
ಕಲಾವಿದರು ಆ ಪಾತ್ರಗಳಿಗೆ ಜೀವ ತುಂಬುವ ಜೊತೆಗೆ ಆ ಪಾತ್ರವನ್ನು ಪ್ರೇಕ್ಷಕರ ಸದಾ ಕಾಲ ಆ ಪಾತ್ರಗಳನ್ನು ದೀರ್ಘಕಾಲ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಸಿನಿಮಾಗಳಲ್ಲಿ ಬಂದ ಅಂತಹದೇ ಪಾತ್ರಗಳು ಇವೆ ನೋಡಿ –
1. ಮನು & ಪ್ರಿಯಾ – ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ
ಇತ್ತೀಚಿನ ದಿನಗಳಲ್ಲಿ ನಾವೆಲ್ಲರು ನೋಡಿದ ದಿ ಬೆಸ್ಟ್ ಲವ್ ಸ್ಟೋರಿ ಅಂದರೆ ಈ ಸಿನಿಮಾ. ಕಿರಿಕ್ ಪಾರ್ಟಿ ನಂತರ ರಕ್ಷಿತ್ ಶೆಟ್ಟಿ ಮಾಡಿದ ಒಂದು ಸುಂದರವಾದ ಪ್ರೇಮ್ ಕಹಾನಿ ಅಂದರೆ ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ ಅಂತ ಸಿನಿ ಪ್ರೇಕ್ಷಕರು ಹೇಳುತ್ತಿದ್ದಾರೆ.
ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ‘ಮನು’ ಪಾತ್ರದಲ್ಲಿ ಕಾಣಿಸಿಕೊಂಡರೆ, ರುಕ್ಮಿಣಿ ವಸಂತ್ ‘ಪ್ರಿಯಾ’ ಪಾತ್ರವನ್ನು ನಿರ್ವಹಿಸಿದ್ದಾರೆ. ಪ್ರೀತಿ ಎಂದರೆ ಕೇವಲ ನಾಲ್ಕು ಮಾತುಗಳು, ನಾಲ್ಕು ಉಡುಗೊರೆಗಳು, ಅಥವಾ ರೋಮ್ಯಾನ್ಸ್ ಮಾತ್ರವಲ್ಲ, ಎಂದು ಈ ಪಾತ್ರಗಳು ನಮ್ಮಗೆ ತಿಳಿಸುತ್ತವೆ.
ಕಥೆ ಅಂತ್ಯದವರೆಗೆ ಒಬ್ಬರಿಗೊಸ್ಕರ ಒಬ್ಬರು ಪ್ರೀತಿ ಉಳಿಸಿಕೊಳಲು ಏನನ್ನು ಬೇಕಾದರೂ ತ್ಯಾಗ ಮಾಡುವ ಮನಸ್ಸು. ಮನು ಜೈಲಿನಿಂದ ಹೊರಬರಲು ಪ್ರಿಯಾ ಕಾಯುವ ರೀತಿ ಅವಳು ಪ್ರೀತಿಯ ಮೇಲೆ ಇಟ್ಟ ನಂಬಿಕೆ ತೋರಿಸುತ್ತದೆ.
ಒಂದು ಸಣ್ಣ ಜಗಳಕೆ ಬ್ರೇಕ್-ಅಪ್ ಅನ್ನುವ ಜಮಾನದಲ್ಲಿ ಈ ಎರಡು ಪಾತ್ರಗಳು ಪ್ರೀತಿಯ ಇನ್ನೊಂದು ಮುಖವನ್ನು ತೋರಿಸಿದ್ದಾರೆ.
2. ಸುಮಾ – ಆಚಾರ್ & ಕೋ’
‘ಏನಾಗಲಿ ಮುಂದೆ ಸಾಗು ನೀ ಬಯಸಿದ್ದೆಲ್ಲ ಸಿಗದು ಬಾಳಲಿ’, ಈ ಹಾಡನ್ನು ನಾವೆಲ್ಲರು ಕೇಳಿರಬಹುದು ಅದಕ್ಕೆ ನಿಜ ಸ್ವರೂಪವೆ ಆಚಾರ್ & ಕೋ ಸಿನಿಮಾದಲ್ಲಿ ಇರುವ ‘ಸುಮಾ’ ಪಾತ್ರ.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಬೇಕಾದಷ್ಟು ಕನಸುಗಳನ್ನು ಹೊಂದಿರುತ್ತಾರೆ. ಅದೇ ರೀತಿ ಸುಮಾ ಕೂಡ ಬಹಳಷ್ಟು ಕನಸು ಕಾಣುತ್ತಾಳೆ ಆದರೆ ಆದರೆ ಅವಳು ಮದುವೆಯಾಗಿ ವಿದೇಶಕ್ಕೆ ಹೋಗಬೇಕೆಂದು ಕನಸು ಕಾಣುತ್ತಾಳೆ.
ಆದರೆ ತನ್ನ ತಂದೆ ಸಾವು ಎಲ್ಲವನ್ನು ಬದಲಾಯಿಸಿ ಅವಳನ್ನು ಬೇರೆ ದಾರಿಯಲ್ಲಿ ಕರೆದೊಯುತ್ತದೆ. ತಾನು ಬಯಸಿದು ಸಿಗದೇ ಇದ್ದರು ಅವಳು ಮನೆಯ ಎಲ್ಲರ ಜವಾಬಾದಾರಿಯನ್ನು ಹೊತ್ತು, ತನ್ನ ಕಠಿಣ ಪರಿಶ್ರಮದಿಂದ ವಿದೇಶಕ್ಕೆ ಹೋಗುವ ಕನಸನ್ನು ನನಸು ಮಾಡಿಕೊಳ್ಳುತ್ತಾಳೆ.
ಕೆಲವೊಂದು ಸಲ ನಾವು ಬಯಸಿದು ಆ ಸಮಯಕ್ಕೆ ಸಿಗದೆ ಇದ್ದರು ಅದನ್ನು ಸಾಧಿಸಲು ಇತರ ಮಾರ್ಗಗಳನ್ನು ಕಂಡುಹಿಡಿಯಬೇಕು ಎಂದು ತೋರಿಸಿಕೊಡುವ ಪಾತ್ರವಿದು.
3. ಮುಸ್ತಫಾ & ರಾಮಾನುಜ ಅಯ್ಯಂಗಾರ್ – ಡೇರ್ಡೆವಿಲ್ ಮುಸ್ತಫಾ
ಕಿರಿಕ್ ಪಾರ್ಟಿ ಸಿನಿಮಾ ನಂತರ ಒಂದು ಕಾಲೇಜ್ ಡ್ರಾಮಾ ಅಂತಹ ಸಿನಿಮಾ ಎಂದರೆ ‘ಡೇರ್ಡೆವಿಲ್ ಮುಸ್ತಫಾ’. ಅದರಲ್ಲಿ ಬರುವ ಒಂದೊಂದು ಪಾತ್ರಗಳು ಒಂದೊಂದು ಅದ್ಬುತ ಅಂತ ಹೇಳ್ಳಿದ್ರೆ ನೀವೆಲ್ಲ ಹೂ ಹೇಳಲೇಬೇಕು.
ಅದರಲ್ಲಿ ಇನ್ನೊಂದು ಅದ್ಬುತ ವೆಂದರೆ ಮುಸ್ತಾಫಾ ಮತ್ತು ರಾಮಾನುಜ ಐಎಂಗರ್ ಪಾತ್ರಗಳು.
ಅಬಾಚುರಿನ ಕಾಲೇಜಿನಲ್ಲಿ ಅಂದಿನವರೆಗೂ ಅಲ್ಲಿ ಅನ್ಯ ಧರ್ಮದ ವಿದ್ಯಾರ್ಥಿಗಳನ್ನು ನೋಡಲಿಲ್ಲ. ಇಡೀ ಕಾಲೇಜಿನಲ್ಲಿ ಹಿಂದೂ ಸಮುದಾಯದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಾತ್ರವೇ ಇದ್ದರು. ಆದರೆ ಮುಸ್ತಾಫಾ ಮುಸ್ಲಿಂ ಆಗಿದ್ದರಿಂದ, ಯಾವುದೇ ವಿದ್ಯಾರ್ಥಿಯು ಅವನನ್ನು ತನ್ನ ಸ್ನೇಹಿತ ಎಂದು ಸ್ವೀಕರಿಸಲಿಲ್ಲ.
ಆದರೆ ಹಳ್ಳಿಯ ಸ್ಥಳೀಯ ನಿವಾಸಿಗಳೊಂದಿಗೆ ಕಾಲೇಜು ಕ್ರಿಕೆಟ್ ಪಂದ್ಯದ ನಂತರ ಇದೆಲ್ಲವೂ ಬದಲಾಯಿತು. ರಾಮಾನುಜ ಮತ್ತು ಅವನ ಸ್ನೇಹಿತರು ಮುಸ್ತಫಾನನ್ನು ಶಾಲೆಯಿಂದ ದೂರವಿಡಲು ಪ್ರಯತ್ನಿಸಿದರು ಮತ್ತು ಅವಮಾನಿಸಿದರು. ಕೊನೆಗೂ ಆ ಒಂದು ಕ್ರಿಕೆಟ್ ಪಂದ್ಯ ಮುಸ್ತಾಫಾ ಮತ್ತು ರಾಮಾನುಜ ನಡುವಿನ ದ್ವೇಷ ಅದು ಸ್ನೇಹಕ್ಕೆ ಬದಲಾಯಿತು.
ನಾವು ನಮ್ಮ ಸ್ನೇಹಿತರನ್ನು ಭೇಟಿಯಾಗಲು ಅಥವಾ ಅವರೊಂದಿಗೆ ಮಾತನಾಡಲು ಸಾಮ್ಯವಿಲವೆಂದು ಹೇಳುವ ಅಂತಕ್ಕೆ ಬಂದಿದ್ದೇವೆ.
“In the garden of life, friendship is like a wild flower, it blossoms naturally, but not by force”. ಸ್ನೇಹ ಅಂದರೆ ಏನು ಅಂತ ಈ ಎರಡು ಪಾತ್ರಗಳು ತುಂಬಾ ಅಚ್ಚುಕಟ್ಟಾಗಿ ನಮಗೆ ತೋರಿಸಿಕೊಟ್ಟಿವೆ.
4. ಹಯವದನ – ರಾಘವೇಂದ್ರ ಸ್ಟೋರ್ಸ್
ರಾಘವೇಂದ್ರ ಸ್ಟೋರ್ಸ್ ಹೇಳಿ ಕೇಳಿ ಹೊಂಬಾಳೆ ಪ್ರೊಡಕ್ಷನ್ಸ್ ಅವರ ಸಿನಿಮಾ, ಇನ್ನು ಪಾತ್ರಗಳಂತೂ ಒಂದು ಅದ್ಬುತ. ಈ ಸಿನಿಮಾದಲ್ಲಿ ಬರುವ ಜಗ್ಗೇಶ್ ಅವರ ಪಾತ್ರ ಅಂತೂ ಕೇಳಿ ಬರೆದಂತಿದೆ, ನಿಜ ರೀ ಸ್ವಾಮಿ.
ಜೀವನದಲ್ಲಿ ಕಷ್ಟ ಯಾರಿಗೆ ಬರಲ್ಲ ಹೇಳಿ, ನಾವು ಬೇಡ ಅಂದರು ನಮ್ಮನು ಅದೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಈ ಸಿನಿಮಾದಲ್ಲಿ ಅಂತದೇ ಒಂದು ಪಾತ್ರ ಜಗ್ಗೇಶ್ ಅಲಿಯಾಸ್ ಹಯವದನದು.
ಎಷ್ಟೇ ಕಷ್ಟ ಬರಲಿ ಒಂದು ಸಣ್ಣ ಕಿರುನಗೆಯಿಂದ ಎಲವನ್ನು ಎದರಿಸುವ ಹಯವದನಿಗೆ 40 ವರ್ಷ ದಾಟಿದರೂ ಮದುವೆ ಆಗಲಿಲ್ಲ ಎಂಬುವ ಚಿಂತೆ. ಕೊನೆಗೂ ತನ್ನ ಮಾತುಗಳಿಂದ ಮೋಡಿ ಮಾಡಿ, ವೈಜಯಂತಿ ಅವರನ್ನ ಮದುವೆ ಮಾಡಿಕೊಳ್ಳುವ ಈ ಎಮೋಷನಲ್ ಡ್ರಾಮಾ ಎಲ್ಲರ ಮನ ಗೆದ್ದಿದ್ದಾರೆ.
ಮದುವೆಯಾಗಲು ಸರಿಯಾದ ವಯಸ್ಸು ಇಲ್ಲ. ಸರಿಯಾದ ವ್ಯಕ್ತಿ ಸಿಕ್ಕಾಗ ಅದು ಮದುವೆ ಯಾಗಲು ಸರಿಯಾದ ಸಮಯ ಎಂದು ಚಿತ್ರದಲ್ಲಿನ ಈ ಎರಡು ಪಾತ್ರಗಳು ತೋರಿಸುತ್ತವೆ.