

ಧನಂಜಯ ಅಲಿಯಾಸ್ ಡಾಲಿ ಆಗಸ್ಟ್ 23. ಆಗಸ್ಟ್. 1985 ರಲ್ಲಿ ಜನಿಸಿದರು. ಧನಂಜಯ ಇಂದು ಬಹು ಭಾಷಾ ನಟನಾಗಿ, ಹಾಡುಗಳ ಬರಹಗಾರನಾಗಿ ಮತ್ತು ಚಲನಚಿತ್ರದ ನಿರ್ಮಾಪಕರಾಗಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದಾರೆ.
ಡಾ. ರಾಜ್‌ಕುಮಾರ್ ಸಿನಿಮಾಗಳನ್ನು ನೋಡುತ್ತಾ ಬೆಳೆದೆ ಎಂದು ಹೇಳುವ ಅವರು. ಅಣ್ಣನವರ ನಟನೆಯನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಅವರು ಶಾಲೆಯಲ್ಲಿದ್ದಾಗಲೇ ನಾಟಕಗಳು, ಏಕ-ನಟನಾ ಸ್ಪರ್ಧೆಗಳಲ್ಲಿ ಮತ್ತು ಬೀದಿ ನಾಟಕಗಳಲ್ಲಿ ನಟಿಸಲು ಪ್ರಾರಂಭಿಸಿದರು. ಮತ್ತು ಇಂದು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಹುಭಾಷಾ ನಟನಾಗಿ ಮಿಂಚುತಿದ್ದರೆ.
ಮೈಸೂರಿನ ಹೆಸರಾಂತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ SJCE ನಲ್ಲಿ ಇಂಜಿನಿಯರಿಂಗ್ ಮುಗಿಸಿ. ಇನ್ಫೋಸಿಸ್‌ನಲ್ಲಿ ಕೆಲಸವನ್ನು ಬಿಟ್ಟು. ನಟನೆಯಲ್ಲಿ ಹೆಚ್ಚು ಸಾಧನೆ ಮಾಡಬೇಕೆಂದು GPIER ಎಂಬ ನಾಟಕ ಶಾಲೆಯಲ್ಲಿ ಸೇರಿಕೊಂಡರು, ಆ ಶಾಲೆ ಹಿರಿಯ ರಂಗಾಯಣ ಕಲಾವಿದ ‘ಮೈಮ್ ರಮೇಶ್’ ಅವರ ನೇತೃತ್ವದಲ್ಲಿ ಮತ್ತು ಮಾರ್ಗದರ್ಶನ ನೀಡಿತು.
ಧನಂಜಯ ಅವರು ನಂತರದಲ್ಲಿ ಅಂದರೆ 2013 ರಲ್ಲ ‘ಡೈರೆಕ್ಟರ್ಸ್ ಸ್ಪೆಷಲ್’ ನಲ್ಲಿ ನಟನಾಗಿ ಸಿನಿಮಾ ರಂಗಕ್ಕೆ ಪ್ರವೇಶಿಸಿದರು. ಇದ್ದೆ ಸಿನಿಮಾಗೆ ಅವರು 3 ನೇ SIIMA ಪ್ರಶಸ್ತಿಗಳಲ್ಲಿ ಅತ್ಯುತ್ತಮ ಡೆಬ್ಯು ನಟ ಪ್ರಶಸ್ತಿಯನ್ನು ಗೆದ್ದರು.


ಬಡವ ರಾಸ್ಕಲ್ ಚಿತ್ರದ ಮೂಲಕ ನಿರ್ಮಾಪಕರಾದ ಧನಂಜಯ. ನಂತರದಲ್ಲಿ ದುನಿಯಾ ಸೂರಿ ಅವರು ನಿರ್ದೇಶಿಸಿದ ‘ಟಗರು’ (2018) ಸಿನಿಮಾದಲ್ಲಿ ಧನಂಜಯ ಅವರು ಭಯಾನಕ ಖಳನಾಯಕನ ಅಭಿನಯಕ್ಕಾಗಿ ಫ್ಯಾನ್ಸ್ ಫುಲ್ ಖುಷಿ ಆದರು. ಈ ಪತ್ರದಲ್ಲಿ ನಟಿಸಿದ ಧನಂಜಯ ಅವರಿಗೆ ಈ ಸಿನಿಮಾ ಮತ್ತು ಪಾತ್ರ ಬಹಳ ಪ್ರಶಂಸೆ ತಂದುಕೊಟ್ಟಿತು. ಅವರನ್ನು ಈಗ ‘ಡಾಲಿ’ ಎಂದು ಫ್ಯಾನ್ಸ್ ಎಲ್ಲರೂ ಕರೆಯಲು ಈ ಚಿತ್ರದಲ್ಲಿನ ಪಾತ್ರ ಕಾರಣ . ಧನಂಜಯ ಅವರು ತೆಲುಗು ಮತ್ತು ತಮಿಳು ಮುಂತಾದ ಇತರ ಭಾಷೆಗಳ ಚಿತ್ರಗಳಲ್ಲಿಯೂ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಅಲ್ಲು ಅರ್ಜುನ್ ಅವರ ಪುಷ್ಪ-1 ಚಲನಚಿತ್ರದಲ್ಲಿ ಜಾಲಿ ರೆಡ್ಡಿ ಪಾತ್ರವು ಅವರನ್ನು ಕನ್ನಡ ಚಲನಚಿತ್ರೋದ್ಯಮದ ಹೊರಗೆ ಹೆಚ್ಚು ಜನಪ್ರಿಯಗೊಳಿಸಿತು.
ಈಗಾಗಲೇ 25 ಸಿನಿಮಾಗಳಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಧನಂಜಯ, ಅವರ ಹುಟ್ಟುಹಬ್ಬದಂದು ತಮ್ಮ ಮುಂಬರುವ ಹೊಸ ಚಿತ್ರಗಳನ್ನು ಮಾಧ್ಯಮಗಳ ಮೂಲಕ ಹಂಚಿಕೊಂಡಿದ್ದಾರೆ.
37 ನೇ ವಸಂತಕ್ಕೆ ಕಾಲಿಟ್ಟಿರುವ ಧನಂಜಯ ಅವರು ಇದ್ದೆ ಖುಷಿಯಲ್ಲಿ ಅವರ ಮುಂದಿನ ಸಿನಿಮಾಗಳ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಮಾಡಿ ಫ್ಯಾನ್ಸ್ ಎಲ್ಲರಿಗು ತಮ್ಮ ಬರ್ತ್ಡೇ ಟ್ರೀಟ್ ಕೊಟ್ಟಿದಾರೆ.
ಕಳೆದ ವರ್ಷ ಬಿಡುಗಡೆಯಾಗಿ ಹಿಟ್ ಆದ ಸಿನಿಮಾ ‘ಬಡವ ರಾಸ್ಕಲ್’ ಚಿತ್ರ ತಂಡ ಮತ್ತೆ ಇನ್ನೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ‘ಬಡವ ರಾಸ್ಕಲ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಂತ ನಿರ್ದೇಶಕ ಶಂಕರ್ ಗುರು ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.
ನವೆಂಬರ್ ತಿಂಗಳಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಲಿದ್ದು, ವಾಸುಕಿ ವೈಭವ್ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿರುತ್ತಾರೆ. ಅಜ್ಜಿ ಮತ್ತು ಮೊಮ್ಮಗನ ಭಾವನೆಗಳನ್ನು ಒಳಗೊಂಡಿರುವ ‘ಅಣ್ಣ ಫ್ರಮ್ ಮೆಕ್ಸಿಕೊ’ ಎಂಬ ಟೈಟಲ್ ಚಿತ್ರದ ಪೋಸ್ಟರ್ ಅನ್ನು ಫಿಲ್ಮ್ ಮ್ಯಾನೇಜ್‌ಮೆಂಟ್ ಬಿಡುಗಡೆ ಮಾಡಿದೆ.
ಈ ಚಿತ್ರವು ಅಭಿಮಾನಿಗಳಿಗೆ ಒಂದು ಆಕ್ಷನ್ ಎಂಟರ್ಟೈನರ್ ಆಗಲಿದೆ. ಈ ಚಿತ್ರಕ್ಕಾಗಿ ಅವರು ಮೆಕ್ಸಿಕೋ ಮತ್ತು ಇತರ ಸ್ಥಳಗಳನ್ನು ಒಳಗೊಂಡಂತೆ ಚಿತ್ರೀಕರಣ ಮಾಡಲು ಯೋಚಿಸುತ್ತಿದ್ದಾರೆ.