ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ ‘ ಈಗಾಗಲೇ ಥಿಯೇಟ್ರಿಕಲ್ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಇದು ಕನ್ನಡದಲ್ಲಿ ಬಹಳ ದಿನಗಳಿಂದ ಬಹು ನಿರೀಕ್ಷಿತ ಸಿನಿಮಾ ಅಂದರೆ ತಪ್ಪಾಗಲಾರದು.
ಸಿಂಪಲ್ಲಾಗ್ ಒಂದು ಲವ್ ಸ್ಟೋರಿ, ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಗೋಧಿ ಬನ್ಣ ಸಾಧಾರಾಣ ಮೈಕಟ್ಟು, ಅವನೇ ಶ್ರೀಮನ್ನಾರಾಯಣ, ಸಿನಿಮಾಗಳಲ್ಲಿ ನಟಿಸಿರುವ ರಕ್ಷಿತ್ ಶೆಟ್ಟಿ ಚಾರ್ಲಿ 777 ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಅದ್ದರು. .
777 ಚಾರ್ಲಿ ಸಿನಿಮಾದಿಂದ ಪಾನ್ ಇಂಡಿಯಾ ಹೀರೋ ಆಗಿ ಕಣ್ಣಿಸಿಕೊಂಡ ರಕ್ಷಿತ್ ಶೆಟ್ಟಿ, ಈಗ ಈ ಸಿನಿಮಾದೊಂದಿಗೆ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಹೇಮಂತ್ ರಾವ್ ನಿರ್ದೇಶನದಲ್ಲಿ ಬರುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ ‘ ಇದೆ ಸೆಪ್ಟೆಂಬರ್ 1ರಂದು ಬಿಡುಗಡೆಯಾಗುತ್ತದೆ.
ರಕ್ಷಿತ್ ಶೆಟ್ಟಿ ಅವರು ತಮ್ಮದೇ ಪರಂವಃ ಸ್ಟುಡಿಯೋಸ್ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಲನಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮುಖ್ಯ ನಾಯಕನ ಪಾತ್ರದಲ್ಲಿ, ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ.
ಈ ಚಿತ್ರಕ್ಕೆ ಚರಣ್ ರಾಜ್ ಅವರು ಸಂಗೀತ ನಿರ್ದೇಶಕರಾಗಿ ಪ್ರೇಕ್ಷಕರಿಗೆ ಉತ್ತಮ ಹಾಡುಗಳನ್ನು ಸಂಯೋಜಿಸಿದ್ದಾರೆ, ಮತ್ತು ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ, ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ರಕ್ಷಿತ್ ಶೆಟ್ಟಿ ತಮ್ಮ ನಟನಾ ವೃತ್ತಿಜೀವನದ ಬಗ್ಗೆ ಕೆಲವು ನಿರ್ಣಾಯಕ ನಿರ್ಧಾರಗಳನ್ನು ಹಂಚಿಕೊಂಡಿದ್ದಾರೆ.
ಮೊದಲಿನಿಂದಲೂ ರಕ್ಷಿತ್ ಶೆಟ್ಟಿ ಅವರು ಯಾವಾಗಲೂ ಚಲನಚಿತ್ರಗಳನ್ನು ನಿರ್ದೇಶಿಸಲು ತುಂಬಾ ಆಸಕ್ತಿಯನ್ನು ವ್ಯಕ್ತಪಡಿಸುತ್ತಾರೆ. ‘ಸಪ್ತ ಸಾಗರದಾಚೆ ಯೆಲ್ಲೋ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಅವರು ಇಲ್ಲಿ ನಂತರ ಹೆಚ್ಚು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಹಂಚಿಕೊಂಡರು. ಬದಲಿಗೆ ಅವರು ಚಲನಚಿತ್ರ ನಿರ್ದೇಶನಗಳ ಮೇಲೆ ಹೆಚ್ಚು ಗಮನಹರಿಸಲಿದ್ದಾರೆ.
ತಮ್ಮ ಚಿತ್ರದ ಟ್ರೈಲರ್ ಲಾಂಚ್ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ‘ಉಳಿದವರು ಕಂಡಂತೆ’ ಚಿತ್ರದ ನೆನಪುಗಳನ್ನು ಹಂಚಿಕೊಂಡರು. ಸಿನಿಮಾ ನಿರ್ದೇಶಕರಿಗೆ ಸಿನಿಮಾಗಳಲ್ಲಿ ನಿರ್ದೇಶನದ ಸ್ವಾತಂತ್ರ್ಯವಿರಬೇಕು, ಅದು ಅವರ ಸ್ವಂತ ಪ್ರೊಡಕ್ಷನ್ ಬ್ಯಾನರ್ ಆರಂಭಿಸುವಂತೆ ಮಾಡಿದೆ ಎಂದರು.


ಈ ಕ್ಷಣದಲ್ಲಿ ನಾವು ರಕ್ಷಿತ್ ಶೆಟ್ಟಿ ಸ್ನೇಹಿತ ರಾಜ್ ಬಿ ಶೆಟ್ಟಿಯನ್ನು ಮರೆಯಬಾರದು. ನಟನಾಗಿ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟ ರಾಜ್ ಬಿ ಶೆಟ್ಟಿ ಈಗ ಸಿನಿಮಾ ನಿರ್ದೇಶನ ಮಾಡಲು ಶುರು ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಅವರು ‘ಕಾಂತಾರ’ದ ಚಿತ್ರದ ಕ್ಲೈಮ್ಯಾಕ್ಸ್ ಭಾಗವನ್ನು ನಿರ್ದೇಶಿಸಿದ್ದಾರೆ ಮತ್ತು ಅ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಹಿಟ್ ಆಗಿತ್ತು.
ರಕ್ಷಿತ್ ಶೆಟ್ಟಿ ಅವರು ಚಾರ್ಲಿ 777 ಸಿನಿಮಾ ನಂತರ ದಿನಗಳಲ್ಲಿ ನಟನೆ ಮಾಡುವುದನ್ನು ಕಡಿಮೆ ಮಾಡಬೇಕು ಎಂದು ಅಂದುಕೊಂಡರಂತೆ. ಅದನ ಈಗ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. “ನಾನಿನ್ನು ಹೆಚ್ಚಾಗಿ ಸಿನಿಮಾಗಳಲ್ಲಿ ನಾಯಕನಾಗಿ ನಟಿಸುವುದಿಲ್ಲ.
ಅದರ ಬದಲಿಗೆ ನಾನು ಹೆಚ್ಚಾಗಿ ಸಿನಿಮಾಗಳನ್ನು ನಿರ್ದೇಶನ ಮಾಡುತ್ತೇನೆ” ಎಂದು ಮಾಧ್ಯಮಗಳೊಂದಿಗೆ ಹೇಳಿದ್ದಾರೆ. ಇದಲ್ಲದೆ ಅವರು ನಟನೆ ಬಗ್ಗೆ ಈ ರೀತಿಯಾಗಿ ಹೇಳಿದ್ದಾರೆ “ನನ್ನ ಸಿನಿಮಾಗಳಲ್ಲಿ ನಾನು ನಟಿಸುತ್ತೇನೆ, ಅದನ್ನು ಬಿಟ್ಟು,ನಾನು ನಿರ್ದೇಶಕ ಹೇಮಂತ್ ರಾವ್ ಸಿನಿಮಾಗಳಲ್ಲಿ ಯಾವುದೇ ಪಾತ್ರಕ್ಕೆ ಕರೆದರೂ ಹೋಗಿ ನಟಿಸುತ್ತೇನೆ’ ಎಂದು ಹೇಳಿದ್ದಾರೆ.
ಇದೀಗ ಕೆಲ ಕಾಲ ನಟನೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಆದರೆ ಅದೇ ಸಮಯದಲ್ಲಿ ಅವರು ಪ್ರಸ್ತುತ ರಿಚರ್ಡ್ ಆಂಟೋನಿ ಎಂಬ ಚಲನಚಿತ್ರಕ್ಕೆ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗ ಮೊದಲ ಭಾಗವು ಸೆಪ್ಟೆಂಬರ್ 1 ರಂದು ಬಿಡುಗಡೆ ಮಾಡಲಿದ್ದಾರೆ. ಚಿತ್ರದ ಎರಡನೇ ಭಾಗವನ್ನು ಅಕ್ಟೋಬರ್ 20 ರಂದು ಬಿಡುಗಡೆ ಮಾಡಲಿದ್ದಾರೆ. ಚಿತ್ರದ ಎರಡನೇ ಭಾಗದಲ್ಲಿ ರಕ್ಷಿತ್ ಶೆಟ್ಟಿ ಅವರ ಜೊತೆಗೆ ಚೈತ್ರ ಜೆ ಆಚಾರ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.