- 777 ಚಾರ್ಲಿ – ರಕ್ಷಿತ್ ಶೆಟ್ಟಿಯವರ ಇತ್ತೀಚಿನ ದಿನಗಳಲ್ಲಿ ಬಂದ ಎಮೋಷನಲ್ ಚಿತ್ರ. 777 ಚಾರ್ಲಿ ಜೂನ್ 10 ರಂದು ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಯಿತು. ಕೇವಲ 20 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ ಹೆಚ್ಚು ಕಲೆಕ್ಷನ್ ಮಾಡಿದೆ. ಕಿರಣರಾಜ್ ಕೆ ನಿರ್ದೇಶನದ ಮುದ್ದಾದ ನಾಯಿ ಚಾರ್ಲಿ ನಟ ರಕ್ಷಿತ್ ಶೆಟ್ಟಿಯ ಪಾತ್ರಕ್ಕಿಂತ ಹೆಚ್ಚು ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿತು.


ಈ ಚಿತ್ರಕ್ಕೆ IMDB ವೆಬ್ಸೈಟಲ್ಲಿ 8.8 ರೇಟಿಂಗ್ ಕೊಡಲಾಗಿದೆ.
2. ಗರುಡ ಗಮನ ವೃಷಭ ವಾಹನ – ರಾಜ್ ಬಿ ಶೆಟ್ಟಿ ಬರೆದು ನಿರ್ದೇಶಿಸಿದ ಫ್ಯಾಮಿಲಿ ಚಲನಚಿತ್ರವಾಗಿದೆ. 2021 ರಲ್ಲಿ ಕನ್ನಡ ಭಾಷೆಯ ಮಾಸ್ ಎಂಟರ್ಟೈನ್ಮೆಂಟ್ ಚಿತ್ರವಾಗಿ ಬಿಡುಗಡೆಯಾದ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು.


ಈ ಚಿತ್ರಕ್ಕೆ IMDB ವೆಬ್ಸೈಟಲ್ಲಿ 8.3 ರೇಟಿಂಗ್ ಕೊಡಲಾಗಿದೆ.
3. ಕಾಂತಾರ – ರಿಷಬ್ ಶೆಟ್ಟಿಯವರ ಕಾಂತಾರ ಸೆಪ್ಟೆಂಬರ್ 30 ರಂದು ಬಿಡುಗಡೆಯಾಯಿತು. ಅಭಿಮಾನಿಗಳು ಮತ್ತು ವಿಮರ್ಶಕರಿಂದ ಸಕಾರಾತ್ಮಕವಾದ ಬಾಯಿಯ ವಿಮರ್ಶೆಗಳೊಂದಿಗೆ, ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯನ್ನು ಆಳಲು ಅದರ ಬೃಹತ್ ಸಂಗ್ರಹದೊಂದಿಗೆ ರೂ. ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 400 ಕೋಟಿ ರೂ. ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ಸಿನಿಮಾವನ್ನು ನಿರ್ದೇಶಿಸಿದ್ದಾರೆ.


ಈ ಚಿತ್ರಕ್ಕೆ IMDB ವೆಬ್ಸೈಟಲ್ಲಿ 8.3 ರೇಟಿಂಗ್ ಕೊಡಲಾಗಿದೆ.
4. K.G.F: 2 – 2022 ರ ಕನ್ನಡ ಭಾಷೆಯ ಆಕ್ಷನ್ ಎಂಟರ್ಟೈನ್ಮೆಂಟ್ ಚಲನಚಿತ್ರ, ಪ್ರಶಾಂತ್ ನೀಲ್ ರವರ ನಿರ್ದೇಶನದಲ್ಲಿ ತೆರೆಕಂಡ ಚಿತ್ರ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. K.G.F- 1 ಚಲನಚಿತ್ರದ ಮುಂದುವರಿದ ಭಾಗವಾಗಿ ಈ ಚಿತ್ರ ಮೂಡಿಬಂದಿತ್ತು.
₹ 100 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿರುವ K.G.F: 2 ಇದುವರೆಗಿನ ಅತ್ಯಂತ ದುಬಾರಿ ಕನ್ನಡ ಚಿತ್ರವಾಗಿದೆ. ರವಿ ಬಸ್ರೂರ್ ಚಿತ್ರ ಸಂಗೀತ ಮತ್ತು ಹಾಡುಗಳನ್ನು ಸಂಯೋಜಿಸಿದ್ದಾರೆ.
ಈ ಚಿತ್ರಕ್ಕೆ IMDB ವೆಬ್ಸೈಟಲ್ಲಿ 8.3 ರೇಟಿಂಗ್ ಕೊಡಲಾಗಿದೆ.


5. K.G.F: 1 – 2018 ರ ಕನ್ನಡ ಭಾಷೆಯ ಆಕ್ಷನ್ ಎಂಟರ್ಟೈನ್ಮೆಂಟ್ ಚಲನಚಿತ್ರ, ಪ್ರಶಾಂತ್ ನೀಲ್ ರವರ ನಿರ್ದೇಶನದಲ್ಲಿ ತೆರೆಕಂಡ ಚಿತ್ರ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಯಶ್, ರಾಮಚಂದ್ರರಾಜು, ಶ್ರೀನಿಧಿ ಶೆಟ್ಟಿ, ವಸಿಷ್ಟ ಎನ್. ಸಿಂಹ, ಅಚ್ಯುತ್ ಕುಮಾರ್, ಅನಂತ್ ನಾಗ್, ಅರ್ಚನಾ ಜೋಯಿಸ್, ಟಿ.ಎಸ್. ನಾಗಾಭರಣ, ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವನ್ನು ಹೊಂದಿದ್ದರು.
ಈ ಚಿತ್ರಕ್ಕೆ IMDB ವೆಬ್ಸೈಟಲ್ಲಿ 8.2 ರೇಟಿಂಗ್ ಕೊಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅನೇಕರು ಕನ್ನಡ ಚಿತ್ರಗಳ ಸೋಲುಗಳನ್ನು ಟೀಕಿಸಿದರು.
ಕನ್ನಡ ಚಲನಚಿತ್ರೋದ್ಯಮವು ಕೆಲವು ನಿರ್ಣಾಯಕ ಸಮಸ್ಯೆಗಳನ್ನು ಎದುರಿಸಿದೆ, ನಿರ್ಮಾಪಕರ ಕೊರತೆ, ಯಾರೂ ದೊಡ್ಡ ಬಜೆಟ್ ಚಿತ್ರದ ಬಗ್ಗೆ ನೀರಸಕ್ತಿ, ಉತ್ತಮ ಕಂಟೆಂಟ್ ಚಿತ್ರಗಳ ಕೊರತೆ, ಮತ್ತು ಚಲನಚಿತ್ರ ಮಾಡಲು ತಂತ್ರಜ್ಞಾನ ಮತ್ತು ತಂತ್ರಜ್ಞರ ಕೊರತೆ ಕನ್ನಡ ಸಿನ್ನಿ ರಂಗದಲ್ಲಿ ಎದ್ದು ಕಾಣುತಿತ್ತು.
ಆದರೆ ಕಾಲಾಂತರದಲ್ಲಿ ಅದು ಬದಲಾಗಿದೆ ಮತ್ತು ಈಗ ಇಡೀ ಜಗತ್ತು ಕನ್ನಡ ಚಲನಚಿತ್ರಗಳನ್ನು ಚಲನಚಿತ್ರಗಳಲ್ಲಿನ ಬೆಳವಣಿಗೆಗಾಗಿ ಶ್ಲಾಘಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳು ಉತ್ತಮ ಕಂಟೆಂಟ್ ಸಿನಿಮಾಗಳನ್ನು ನೀಡಿವೆ, ಬಿಗ್ ಬಜೆಟ್ ಚಿತ್ರಗಳಿಗೆ ನಿರ್ಮಾಪಕರು ಮುಂದೆ ಬಂದಿದ್ದಾರೆ. ಯುವ ಡೈನಾಮಿಕ್ ನಿರ್ದೇಶಕರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ನಮ್ಮ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಹೆಸರು ಮತ್ತು ಖ್ಯಾತಿಯನ್ನು ತಂದುಕೊಟ್ಟಿದೆ.
ಪ್ರೇಕ್ಷಕರು ಮಾಸ್ ಎಂಟರ್ಟೈನ್ಮ್ನೆಟ್ ಕೊಡುವ ಚಿತ್ರಗಳನ್ನು ನೋಡಲು ತುಂಬ ಆಸಕ್ತಿ ತೋರಿಸಿದ್ದಾರೆ ಎಂಬುವುದು IMDB ರೇಟಿಂಗ್ ನಮ್ಮಗೆ ಸ್ಪಷ್ಟವಾಗಿ ತೋರಿಸುತ್ತಿದೆ. ಅದೇ ಸಮಯದಲ್ಲಿ ಉತ್ತಮವಾದ ಕಂಟೆಂಟ್ ಚಲನಚಿತ್ರಗಳನ್ನು ಸಹ ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ ಎಂಬುವುದು ಈ ರೇಟಿಂಗ್ ಸ್ಪಷ್ಟವಾಗಿ ಹೇಳುತ್ತದೆ.