ಪ್ರಪಂಚದ ಏಳು ಅದ್ಭುತಗಳಲ್ಲಿ ತಾಜ್ ಮಹಲ್ ಕೂಡ ಒಂದು ಎನ್ನವುದು ನಮಗೆಲ್ಲ ಗೊತ್ತಿರುವ ಸಂಗತಿ. ಪ್ರೀತಿಯ ಸಂಕೇತವಾಗಿರುವ ಮೊಘಲರ ವಾಸ್ತುಶಿಲ್ಪದಲ್ಲಿ ಅರಳಿರುವ ಚಂದನೆಯ ಕಟ್ಟಡ ಎನ್ನುವುದರಲ್ಲಿ ಸಂಶಯವಿಲ್ಲ. ವಿಶ್ವದ ಅದ್ಭುತಗಳಲ್ಲಿ ಇದು ಒಂದಾಗಿರಬಹುದು ಆದರೆವಿದೇಶಿ ಪ್ರವಾಸಿಗರನ್ನು ಸೆಳೆಯುವಲ್ಲಿ ಇದು ಯಾವುದೇ ಅದ್ಭುತವನ್ನು ಮಾಡುತ್ತಿಲ್ಲ ಎನ್ನುವುದು ಇತ್ತೀಚಿಗೆ ಭಾರತೀಯ ಪುರಾತತ್ವ ಇಲಾಖೆ ಬಿಡುಗಡೆ ಮಾಡಿರುವ ಸಮೀಕ್ಷೆಯಿಂದ ತಿಳಿದು ಬಂದಿದೆ.
ವಿದೇಶದಿಂದ ಪ್ರವಾಸಿಗರು ಭೇಟಿ ನೀಡಲು ಇಷ್ಟಪಡುವ ಟಾಪ್ 10 ಐತಿಹಾಸಿಕ ಸ್ಮಾರಕಗಳನ್ನು ಪಟ್ಟಿಮಾಡಿದೆ. ಆಶ್ಚರ್ಯಕರ ಸಂಗತಿ ಎಂದರೆ, ಅದರಲ್ಲಿ ತಾಜ್ ಮಹಲ್ ಮೊದಲ ಸ್ಥಾನದಲಿಲ್ಲ.
ಹಾಗಾದರೆ ಯಾವೆಲ್ಲ ಸ್ಥಳಗಳು ಆ ಪಟ್ಟಿಯಲ್ಲಿವೆ. ವಿದೇಶಿ ಪ್ರವಾಸಿಗರು ಹೆಚ್ಚು ಯಾವ ಸ್ಥಳಗಳಿಗೆ ಭೇಟಿನೀಡುತ್ತಿದ್ದರೆ ಎನ್ನುವುದು ಇಲ್ಲಿವೆ.
ಮಹಾಬಲಿಪುರಂ
ಮಹಾಬಲಿಪುರಂ ಅಥವಾ ಮಾಮಲ್ಲಪುರಂ ಧಾರ್ಮಿಕ ತಾಣದ ಜೊತೆಗೆ ಐತಿಹಾಸಿಕ ಹಾಗು ಪ್ರೇಕ್ಷಣೀಯ ತಾಣವೂ ಹೌದು. ಇದು ತನ್ನ ಸಂಕೀರ್ಣ ಕೆತ್ತನೆಯ ದೇವಸ್ಥಾನ ಮತ್ತು ಕಲ್ಲು ಕತ್ತರಿಸಿದ ಗುಹೆಗಳಿಗೆ ಹೆಸರುವಾಸಿ. ತಮಿಳುನಾಡು ರಾಜ್ಯದ ಬಂಗಾಳಕೊಲ್ಲಿಯ ಕೋರಮಂಡಲ್ ಕರಾವಳಿಯಲ್ಲಿ ಈ ಸ್ಥಳವಿದೆ.
ತಾಜ್ ಮಹಲ್
ಯಮುನಾ ನದಿಯ ತಟದಲ್ಲಿ ಇರುವ ಇಸ್ಲಾಮಿಕ್, ಪರ್ಷಿಯನ್ ಮತ್ತು ಭಾರತೀಯ ವಾಸ್ತುಶಿಲ್ಪದ ಸುಂದರವಾದ ಮಿಶ್ರಣವಿರುವ ರಾಣಿ ಮೊಮ್ತಜ್ ಅವರ ಸಮಾಧಿಯಾಗಿದೆ. ಈ ಕಟ್ಟಡ ನಿರ್ಮಾಣಕ್ಕೆ ಬರೋಬ್ಬರಿ 22 ವರ್ಷವಾಗಿದೆ. ಅಂತಿಮವಾಗಿ 1653 ರಲ್ಲಿ ಇದು ಪೂರ್ಣಗೊಂಡಿತು.
ಆಗ್ರಾ ಕೋಟೆ
ಸುಮಾರು1638 ರವರೆಗೆ ಆಗ್ರಾದ ಈ ಐತಿಹಾಸಿಕ ಕೋಟೆ ಮೊಘಲ್ ರಾಜರ ಮುಖ್ಯ ನಿವಾಸವಾಗಿತ್ತು. ಇದು ಸಹ ಅತಿ ಹೆಚ್ಚು ವಿದೇಶಿಗರು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿದೆ ಎನ್ನುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.