The most expensive dog in Bangalore!
ಸಿಲಿಕಾನ್ ಸಿಟಿ, ಉದ್ಯಾನ ನಗರಿ, ಮೆಟ್ರೋಪಾಲಿಟನ್ ಸಿಟಿ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಬೆಂಗಳೂರು, ಈಗ ಅತ್ಯಂತ ದುಬಾರಿ ಶ್ವಾನಗನ್ನು ಹೊಂದಿರುವ ನಗರವೂ ಆಗಿದೆ.
ಅತ್ಯಂತ ದುಬಾರಿ ನಾಯಿಗಳನ್ನು ಖರೀದಿಸುವಲ್ಲಿ ಬೆಂಗಳೂರಿನಲ್ಲಿರುವ ಭಾರತೀಯ ನಾಯಿ ತಳಿಗಳ ಸಂಘದ ಸತೀಶ್ ಅವರು ಪ್ರಸಿದ್ಧರು. ಕಾಕೇಸಿಯನ್ ಷೆಪರ್ಡ್ ಜಾತಿಯ ಶ್ವಾನಗಳು, ಧೈರ್ಯ, ಭಯರಹಿತ, ಬಹಳ ವಿಶ್ವಾಸ ಹಾಗೂ ಅತ್ಯಂತ ಬುದ್ಧಿವಂತ ನಾಯಿಗಳು. ಇವುಗಳು ನೋಡಲು ಬಹಳ ದೊಡ್ಡ ಗಾತ್ರವನ್ನು ಹೊಂದಿರುತ್ತವೆ. ಇವು 10-12 ವರ್ಷ ಬದುಕಬಹುದು.
ಸತೀಶ್ ಅವರು ರೂ.20 ಕೋಟಿ ಕೊಟ್ಟು ಕಾಕೇಸಿಯನ್ ಷೆಪರ್ಡ್ ಜಾತಿಗೆ ಸೇರಿದ ನಾಯಿ ಖರೀದಿಸಿದ್ದಾರೆ. ಅದರ ಹೆಸರು ಕಡಬೊಮ್ ಹೈದರ್. ಅಮೇನಿಯಾ, ರಷ್ಯಾ, ಟರ್ಕಿ, ಸಕಾಸ್ಸಿಯ ಹಾಗೂ ಜಿಯೋರ್ಜಿಯದಂತಹ ದೇಶಗಳಲ್ಲಿ ಮಾತ್ರ ಈ ಶ್ವಾನ ದೊರೆಯುತ್ತದೆ. ಭಾರತದಲ್ಲಿ ಈ ಜಾತಿಯ ನಾಯಿ ಬಹಳ ವಿರಳ.
ಅಮೆರಿಕನ್ ಕೆನ್ನೆಲ್ ಕ್ಲಬ್ ನ ಪ್ರಕಾರ, ಕಾಕೇಸಿಯನ್ ಷೆಪರ್ಡ್ ಶ್ವಾವನವನ್ನು ಹಸುಗಳು ಹಾಗೂ ಇತರೆ ಸಾಕುಪ್ರಾಣಿಗಳನ್ನು ಕಾಡುಪ್ರಾಣಿಗಳಿಂದ ರಕ್ಷಣೆ ಮಾಡಲು ಬಳಸುತ್ತಾರೆ ಎಂದು ಮಾಲೀಕ ಸತೀಶ್ ಹೇಳಿದ್ದಾರೆ.
ಈ ಕಡಬೊಮ್ ಹೈದರ್ ತಿರುವನಂತಪುರದಲ್ಲಿ ನಡೆದ ಕೆನ್ನೆಲ್ ಕ್ಲಬ್ ನ ಕಾರ್ಯಕ್ರಮ ಹಾಗೂ ಕ್ರೌನ್ ಕ್ಲಾಸ್ಸಿಕ್ ಡಾಗ್ ಶೋನಲ್ಲಿ ಭಾವಹಿಸಿ, ಅತ್ಯುತ್ತಮ ತಳಿ ವರ್ಗದಡಿ 32 ಪದಕಗಳನ್ನು ಗೆದ್ದಿದೆ ಎಂದರು.
ಇದಕ್ಕೂ ಮೊದಲು ಸತೀಶ್ ಅವರು ‘ಕೋರಿಯನ್ ದೋಸ ಮಾಸ್ಟಿಫ್ಸ್’ ಎಂಬ ಮತ್ತೊಂದು ಅಪರೂಪದ ಶ್ವಾನದ ತಳಿಯನ್ನು ₹1 ಕೋಟಿ ಕೊಟ್ಟು ಖರೀದಿಸಿದ್ದರಂತೆ.
ಅದಲ್ಲದೆ, ಟಿಬೇಟನ್ ಮಾಸ್ಟಿಫ್ ₹10 ಕೋಟಿಗೆ, ಅಲಾಶ್ಕನ್ ಮಾಲಾಮುಟೆ ₹8 ಕೋಟಿ ಕೊಟ್ಟು ಖರೀದಿಸಿದ್ದರಂತೆ. ₹20 ಕೋಟಿ ಬೆಲೆಯ ಕಡಬೊಮ್ ಹೈದರ್ ಸುಮಾರು 1.5 ವರ್ಷ ವಯಸ್ಸಿನದಾಗಿದ್ದು, ಇದನ್ನು ಹೈದ್ರಾಬಾದ್ನಲ್ಲಿ ಖರೀಸಿದ್ದಾರೆ.
ಹೈದರ್ ಕೇವಲ ಏಳು ದಿನಗಳಲ್ಲಿ 32 ಪದಕಗಳನ್ನು ಗೆದ್ದಿದೆ. ಬೃಹತ್ ಗಾತ್ರವಿರುವ ಈ ಶ್ವಾನ ಬಹಳ ಸ್ನೇಹಪರವಾಗಿರುತ್ತದೆ. ಸತೀಶ್ ಅವರು ಇದೇ ಜಾತಿಯ 2 ಮರಿಗಳನ್ನು ರೂ.5 ಕೋಟಿ ಕೊಟ್ಟು ಖರೀದಿಸಿದ್ದಾರಂತೆ.